ಲೈವ್ ಸಂದರ್ಶನದ ವೇಳೆಯೇ ಖ್ಯಾತ ರ‍್ಯಾಪರ್ ತನ್ನ ಕಾಲಿಗೆ ತಾನೇ ಗುಂಡು ಹಾರಿಸಿಕೊಂಡಿರುವ ಘಟನೆ ವರದಿಯಾಗಿದೆ. ಟೆಕ್ಸಾಸ್ ರ‍್ಯಾಪರ್ ಒಬ್ಬರು ಸಂದರ್ಶನಕ್ಕೆ ಕುಳಿತಿದ್ದಾಗ ಅವರ ಪ್ಯಾಂಟ್‍ನ ಜೇಬಿನಲ್ಲಿದ್ದ ಬಂದೂಕಿನಿಂದ ಕಾಲಿಗೆ ಆಕಸ್ಮಿಕವಾಗಿ ಗುಂಡು ಹಾರಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.
ರ‍್ಯಾಪರ್ 2 ಲೋ ತನ್ನ ಜೇಬಿನಲ್ಲಿ ಬಂದೂಕನ್ನು ಇಟ್ಟುಕೊಂಡಿದ್ದು, ಆಕಸ್ಮಿಕವಾಗಿ ಅದರಿಂದ ಗುಂಡು ಹಾರಿದೆ. ಲೈವ್ ಪ್ರಸಾರದಲ್ಲಿ ಗುಂಡು ಹಾರಿದ ಕ್ಷಣವನ್ನು ವಿಡಿಯೊದಲ್ಲಿ ಸೆರೆಹಿಡಿಯಲಾಗಿತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
46 ವರ್ಷದ 2 ಲೋ ಎಂಬ ಹೆಸರಿನ ರ‍್ಯಾಪರ್ ಬಳಿ ಅವರ ವೃತ್ತಿಜೀವನ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಲು “ಒನ್ ಆನ್ ಒನ್ ವಿತ್ ಮೈಕ್ ಡಿ” ಯೂಟ್ಯೂಬ್ ಕಾರ್ಯಕ್ರಮಕ್ಕಾಗಿ ಸಂದರ್ಶನ ನಡೆಸಲಾಗಿತ್ತು. ಕೆಲವು ನಿಮಿಷಗಳ ನಂತರ, ಗುಂಡು ಹಾರಿದ ಶಬ್ದ ಕೇಳಿ ಇಡೀ ರೂಂ ಸ್ತಬ್ಧಗೊಂಡಿದೆ. ಗನ್ ಸ್ಫೋಟಗೊಳ್ಳುವ ಮೊದಲು 2 ಲೋ ತನ್ನ ಜೀನ್ಸ್‌ನ ಮುಂಭಾಗದ ಜೇಬಿನಲ್ಲಿ ಕೈ ಹಾಕಿದ್ದಾರಂತೆ.
🔥🚨DEVELOPING: This rapper is going viral for shooting himself in the leg during this interview. pic.twitter.com/iwp6ceSwBm
— Dom Lucre | Breaker of Narratives (@dom_lucre) January 4, 2025
ಗುಂಡು ಹಾರಿದ ವೇಳೆ ಅಲ್ಲಿದ್ದ ನಿರೂಪಕರು ಗೊಂದಲಕ್ಕೊಳಗಾಗಿ “ಯಾರು ಯಾರನ್ನು ಗುಂಡಿಕ್ಕಿ ಕೊಂದರು? ಯಾರಿಗಾದರೂ ಗುಂಡು ಹಾರಿಸಲಾಗಿದೆಯೇ?” ಪ್ರಶ್ನೆ ಕೇಳಿದ್ದಾರೆ. ಆ ವೇಳೆ ಯಾರೋ ಆಫ್-ಕ್ಯಾಮೆರಾ ಮುಂದೆ ಉತ್ತರಿಸುತ್ತಾ “ಇಲ್ಲ, ನಾವು ಚೆನ್ನಾಗಿದ್ದೇವೆ” ಎಂದು ಉತ್ತರಿಸುತ್ತಾರೆ. ಯೂಟ್ಯೂಬ್‍ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ, “ಎಕ್ಸ್ ರ‍್ಯಾಪ್ ಕಲಾವಿದ 2 ಲೋ ಸ್ವತಃ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದ್ದಾರೆ. ದೇವರಿಗೆ ಧನ್ಯವಾದಗಳು, ಎಲ್ಲರೂ ಚೆನ್ನಾಗಿದ್ದಾರೆ.” ಎಂದು ಪೋಸ್ಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:ನಡುರಸ್ತೆಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯ ಕತ್ತು ಹಿಸುಕಿದ ಪಾಗಲ್ ಪ್ರೇಮಿ… ಮುಂದೇನಾಯ್ತು…? ವಿಡಿಯೊ ಇದೆ
ಈ ವಿಡಿಯೊ ವೈರಲ್ ಆದ ನಂತರ, ಸಂದರ್ಶನದ ಸಮಯದಲ್ಲಿ ಈ ರೀತಿ ಘಟನೆ ನಡೆದಿರುವುದನ್ನು ನೋಡಿ ಹಲವಾರು ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ ಮತ್ತು ರ‍್ಯಾಪರ್‌ನನ್ನು ಅನುಮಾನಿಸಿದ್ದಾರೆ. ಯಾವುದೇ ಸುರಕ್ಷತೆಯಿಲ್ಲದ ಬಂದೂಕನ್ನು ಜೇಬಿನಲ್ಲಿಟ್ಟುಕೊಂಡು ಬಿಗಿಯಾದ ಜೀನ್ಸ್ ಧರಿಸಿ ಜೇಬಿನಲ್ಲಿ ಕೈ ಹಾಕಿದ್ದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.