Wednesday, 27th November 2024

Viral Video: ಏಕಾಏಕಿ ಸಾಧುವಿನ ಜಡೆ ಹಿಡಿದು ಮೇಲಕ್ಕೆತ್ತಿದ ಖಲಿ! ವಿಡಿಯೊ ಫುಲ್‌ ವೈರಲ್‌

Viral Video

ಬಾಗೇಶ್ವರ ಧಾಮದ ‘ಸನಾತನ ಪಾದಯಾತ್ರೆ’ ಕಾರ್ಯಕ್ರಮದಲ್ಲಿ ಗ್ರೇಟ್ ಖಲಿ(The Great Khali) ಎಂದು ಪ್ರಸಿದ್ಧರಾದ ಕುಸ್ತಿಪಟು ದಲೀಪ್ ಸಿಂಗ್ ರಾಣಾ ಅವರು ಭಾಗವಹಿಸಿದ್ದರು. ಅಲ್ಲಿ ಅವರು ಸಾಧು ಒಬ್ಬರ ಜಡೆ ಹಿಡಿದುಕೊಂಡು ಅವರನ್ನು ಮೇಲಕ್ಕೆತ್ತುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕುಸ್ತಿಪಟು ದಲೀಪ್ ಸಿಂಗ್ ರಾಣಾ ಕೇಸರಿ ಬಟ್ಟೆ ಧರಿಸಿದ ಸಾಧುವೊಬ್ಬರನ್ನು ಕೇವಲ ಮುಷ್ಟಿಯಿಂದ ಎತ್ತುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಅವರ ದೈಹಿಕ ಶಕ್ತಿಯ ಅದ್ಭುತ ಪ್ರದರ್ಶನವು  ಬಾಗೇಶ್ವರ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರನ್ನು ದಿಗ್ಭ್ರಮೆಗೊಳಿಸಿತು ಮತ್ತು ಅವರು ಈ ಸಾಹಸ ನೋಡಿ ಚಪ್ಪಾಳೆ ತಟ್ಟಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೊದಲ್ಲಿ , ಬಾಗೇಶ್ವರ್ ಧಾಮ್ ಸರ್ಕಾರ್ ಮತ್ತು ಸಾಧುವಿನೊಂದಿಗೆ ಗ್ರೇಟ್ ಖಲಿ ಎಂದು ಪ್ರಸಿದ್ಧರಾದ ಕುಸ್ತಿಪಟು ದಲೀಪ್ ಸಿಂಗ್ ರಾಣಾ ಅವರು ವೇದಿಕೆಯ ಮೇಲೆ ನಿಂತಿದ್ದಾರೆ. ಖಲಿಯ ಪಕ್ಕದಲ್ಲಿ ನಿಂತಿದ್ದ ಕೇಸರಿ ಬಣ್ಣ ಬಟ್ಟೆ ಧರಿಸಿದ್ದ ಸಾಧುವೊಬ್ಬರು ದಲೀಪ್ ಸಿಂಗ್ ಬಳಿ ಮೇಲಕ್ಕೆ ಎತ್ತುವಂತೆ ಕೇಳಿದ್ದಾರೆ. ಆಗ ಖಲಿ ಅವರ ಕೂದಲನ್ನು ಹಿಡಿದು ಮೇಲಕ್ಕೆ ಎತ್ತಿದ್ದಾರೆ. ಖಲಿಯ ಶಕ್ತಿ ಖಂಡಿತವಾಗಿಯೂ ಪ್ರಶಂಸನೀಯವಾಗಿದ್ದರಿಂದ, ಎಲ್ಲರೂ ಹೊಗಳಿ ಚಪ್ಪಾಳೆ ತಟ್ಟಿದ್ದಾರೆ.

ಇದನ್ನೂ ಓದಿ:ಅಬ್ಬಾ…! ಓವರ್‌ ಸ್ಪೀಡ್‌ ಎಂಥಾ ಅಪಾಯ ತಂದೊಡಿತು…ಈ ವಿಡಿಯೊ ನೋಡಿದ್ರೆ ಶಾಕ್‌ ಆಗುತ್ತೆ

ಸನಾತನ ಏಕತಾ ಪಾದಯಾತ್ರೆಯನ್ನು ಈ ನವೆಂಬರ್‌ನಲ್ಲಿ ಬಾಬಾ ಬಾಗೇಶ್ವರದಲ್ಲಿ ನಡೆಸಲಾಗಿದೆ. ಇದರಲ್ಲಿ ಸಾಧುಗಳು ‘ಪಾದಯಾತ್ರೆ’ ನಡೆಸಿದ್ದಾರೆ ಮತ್ತು ಛತ್ತರ್‌ಪುರದಿಂದ ಮಧ್ಯಪ್ರದೇಶದ ಒರ್ಚಾಗೆ 160 ಕಿಲೋಮೀಟರ್ ತನಕ ಪಾದಯಾತ್ರೆ ಮಾಡಿದ್ದಾರೆ. ವರದಿಗಳ ಪ್ರಕಾರ, ಈ ಕಾರ್ಯಕ್ರಮಕ್ಕೆ ವಾರಣಾಸಿಯ ಕೆಲವರು ಸೇರಿದಂತೆ ಅನೇಕ ಸಾಧುಗಳ ಬೆಂಬಲ ಮತ್ತು ಪ್ರೋತ್ಸಾಹ ದೊರೆತಿದೆ.

ಅಷ್ಟೇ ಅಲ್ಲದೇ ಚಲನಚಿತ್ರ ತಾರೆಯರು, ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತು ಇತರರಂತಹ ಜನಪ್ರಿಯ ವ್ಯಕ್ತಿಗಳು ಬಾಗೇಶ್ವರ್ ಧಾಮ್ ಸರ್ಕಾರ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಜಯ್ ದತ್, ಕೈಲಾಶ್ ವಿಜಯವರ್ಗಿಯಾ ಮತ್ತು ಇತರ ಅನೇಕ ಪ್ರಸಿದ್ಧ ವ್ಯಕ್ತಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಫೋಟೋಗಳು ದಿ ಗ್ರೇಟ್ ಖಲಿಯ ವೈರಲ್ ವಿಡಿಯೊದೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ.