ತುಮಕೂರು : ಚಿರತೆ ಎಂದರೆ ಎಲ್ಲರೂ ಬೆಚ್ಚಿಬೀಳುತ್ತಾರೆ! ಆದರೆ ಇಲ್ಲೊಬ್ಬ ವ್ಯಕ್ತಿ ಗ್ರಾಮಸ್ಥರ ಜೀವ ಉಳಿಸಲು ಚಿರತೆಯ ಬಾಲವನ್ನು ಕೈಯಲ್ಲಿ ಹಿಡಿಯುವ ಮೂಲಕ ಸಾಹಸ ಮೆರೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್(Viral Video) ಆಗಿದ್ದು, ಜನರ ಗಮನ ಸೆಳೆಯುವ ಮೂಲಕ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ. ಚಿರತೆಯನ್ನು ರಕ್ಷಿಸಲು ಅರಣ್ಯ ಅಧಿಕಾರಿಗಳು ಬರುವವರೆಗೂ ವ್ಯಕ್ತಿ ಚಿರತೆಯ ಬಾಲವನ್ನು ಕೈಯಿಂದ ಹಿಡಿದಿದ್ದ ಎನ್ನಲಾಗಿದೆ.
ತುಮಕೂರು ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿತ್ತು. ಚಿರತೆ ಒಂದೆರಡು ದಿನಗಳಿಂದ ಗ್ರಾಮದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದು, ಗ್ರಾಮಸ್ಥರಲ್ಲಿ ಭಯವನ್ನು ಹುಟ್ಟುಹಾಕಿತ್ತು. ಅನೇಕ ಪ್ರಯತ್ನಗಳ ಹೊರತಾಗಿಯೂ, ಅದನ್ನು ಹಿಡಿಯಲು ಯಾರಿಗೂ ಸಾಧ್ಯವಾಗಲಿಲ್ಲ. ಅದು ಅಲ್ಲದೇ, ಗ್ರಾಮಸ್ಥರು ಹಾಕಿದ ಬಲೆಯಿಂದ ಚಿರತೆ ತಪ್ಪಿಸಿಕೊಂಡಿತ್ತಂತೆ. ನಂತರ ಆನಂದ್ ಎಂಬ ಹಳ್ಳಿಗನು ತನ್ನ ಧೈರ್ಯವನ್ನು ತೋರಿ ತಪ್ಪಿಸಿಕೊಂಡು ಓಡುತ್ತಿದ್ದ ಚಿರತೆಯ ಬಾಲವನ್ನು ಹಿಡಿದು ಎಳೆದಾಡಿದ್ದಾನೆ.
ఏకంగా చిరుతకే చుక్కలు చూపించిన యువకుడు
— Pulse News (@PulseNewsTelugu) January 7, 2025
చిరుత సంచారంతో ఆందోళన చెందిన గ్రామస్తులు
బోనులో బంధించేందుకు అటవీ అధికారుల ప్రయత్నం
తప్పించుకునే ప్రయత్నం చేసిన చిరుత…
పారిపోతుండగా చిరుత తోక పట్టుకొని నిలువరించిన యువకుడు
కర్ణాటక రంగపురలో ఆసక్తికరమైన ఘటన #Leopard #Karnataka… pic.twitter.com/c0Myp2OiPY
ವೈರಲ್ ಆಗಿರುವ ವಿಡಿಯೊದಲ್ಲಿ, ಅರಣ್ಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಸೇರಿದಂತೆ ಒಂದು ಗುಂಪು ಚಿರತೆಯನ್ನು ಬೋನು ಹಾಗೂ ಬಲೆಯನ್ನು ಬಳಸಿ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಚಿರತೆ ಅದರಿಂದ ತಪ್ಪಿಕೊಂಡು ಓಡಿದೆ. ಆಗ ಆನಂದ್ ವೇಗವಾಗಿ ಚಿರತೆಯ ಹಿಂದೆ ಬಂದು ಅದರ ಬಾಲವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ನಂತರ ಅಧಿಕಾರಿಗಳು ಚಿರತೆಯನ್ನು ಬಲೆಯಲ್ಲಿ ಮುಚ್ಚಿ ಹಗ್ಗದಿಂದ ಕಟ್ಟಿ ಅದನ್ನು ಹತ್ತಿರದ ಕಾಡಿನಲ್ಲಿ ಬಿಟ್ಟಿದ್ದಾರೆ.
ಬೆಂಗಳೂರಿನಲ್ಲೂ ಚಿರತೆ ಭೀತಿ ವರದಿಯಾಗಿತ್ತು. ಕಳೆದ ವರ್ಷ ನವೆಂಬರ್ನಲ್ಲಿ 52 ವರ್ಷದ ಮಹಿಳೆಯನ್ನು ಚಿರತೆ ಕಚ್ಚಿ ಕೊಂದಿತ್ತು. ಒಂದು ವಾರದ ನಂತರ, ಅರಣ್ಯ ಇಲಾಖೆಯು ಹಳ್ಳಿಯಿಂದ ಏಳು ವರ್ಷದ ಗಂಡು ಮತ್ತು ಒಂಬತ್ತು ವರ್ಷದ ಹೆಣ್ಣು ಚಿರತೆಗಳನ್ನು ಸೆರೆಹಿಡಿದಿತ್ತು.
ನವೆಂಬರ್ 17ರಂದು ಕರಿಯಮ್ಮ ಎಂಬಾಕೆ ಮನೆಯ ಸಮೀಪದ ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದಾಗ ಚಿರತೆಯೊಂದು ಆಕೆಯ ಮೇಲೆ ದಾಳಿ ಮಾಡಿ ಕಾಡಿಗೆ ಎಳೆದುಕೊಂಡು ಹೋಗಿ ಕೊಂದು ದೇಹದ ಭಾಗಗಳನ್ನು ತಿಂದುಹಾಕಿರುವುದು ವರದಿಯಾಗಿತ್ತು.
ಈ ಸುದ್ದಿಯನ್ನೂ ಓದಿ:ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಯಾರು ಗೊತ್ತಾ? ಬರೋಬ್ಬರಿ 110 ವರ್ಷ ಈಕೆಯ ವಯಸ್ಸು
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ದೊಡ್ಡ ಬೋನುಗಳನ್ನು ನಿಯೋಜಿಸಿ, ಚಿರತೆಗಳನ್ನು ಪತ್ತೆಹಚ್ಚಲು ಈ ಪ್ರದೇಶದ ಸುತ್ತಲೂ ಎಂಟು ಜೋಡಿ ಕ್ಯಾಮೆರಾ ಟ್ರ್ಯಾಪ್ಗಳನ್ನು ಅಳವಡಿಸಿದೆ ಎನ್ನಲಾಗಿದೆ.