Tuesday, 7th January 2025

Viral Video: ನಡುರಸ್ತೆಯಲ್ಲಿ ಡೇಂಜರಸ್‌ ಸ್ಟಂಟ್! ಹುಚ್ಚಾಟ ಮೆರೆದ ಯುವಕರಿಗೆ ಚುರುಕು ಮುಟ್ಟಿಸಿದ ಖಾಕಿ!

Viral Video

ನೊಯ್ಡಾ: ‘ಸ್ಕ್ವಿಡ್ ಗೇಮ್ಸ್’ ಸೀಸನ್ 2 ರ ‘ರೌಂಡ್ ಅಂಡ್ ರೌಂಡ್’ ಹಾಡಿಗೆ ಸ್ಟಂಟ್ ಮಾಡಿ ನೊಯ್ಡಾದ ಮೂವರು ಯುವಕರು ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದಾರೆ. ಇವರ ಅಪಾಯಕಾರಿಯಾದ ಸ್ಟಂಟ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಇದರ ಪರಿಣಾಮವಾಗಿ ಅವರಿಗೆ 33,000 ರೂ.ಗಳ ಭಾರಿ ದಂಡ ವಿಧಿಸಲಾಗಿದೆ.

ಈ ಘಟನೆಯಲ್ಲಿ ಮೂವರು ಯುವಕರು ದೆಹಲಿ ನೋಂದಾಯಿತ ಟೊಯೊಟಾ ಫಾರ್ಚೂನರ್ ಎಸ್‌ಯುವಿ ಕಾರನ್ನು ಬಳಸಿದ್ದಾರೆ.  ಮತ್ತು ಅದರ ಬಾನೆಟ್ ಮೇಲೆ ಬಿಜೆಪಿ ಧ್ವಜ ಇರಿಸಿ ತಡರಾತ್ರಿ, ಯುವಕರು ಸಕರ್ಲ್  ಸುತ್ತಲೂ ಸ್ಟಂಟ್‍ ಮಾಡಿದ್ದಾರೆ. ಆ ಮೂಲಕ ಅವರು  ಸ್ಕ್ವಿಡ್ ಗೇಮ್ಸ್ ನೊಯ್ಡಾ ಆವೃತ್ತಿಯ ಸ್ಪಿನ್-ಆಫ್ ಮರುಸೃಷ್ಟಿಸಿದ್ದಾರೆ.

ಈ ವೈರಲ್ ವಿಡಿಯೊದಲ್ಲಿ, ಒಬ್ಬ ವ್ಯಕ್ತಿ ಎಸ್‌ಯುವಿಯ ವಿಂಡ್ ಶೀಲ್ಡ್ ಮೇಲೆ ಕುಳಿತಿದ್ದರೆ, ಇತರ ಇಬ್ಬರು ಕಾರಿನ ಡೋರ್ ಅನ್ನು ಹಿಡಿದುಕೊಂಡಿದ್ದಾರೆ. ಅದರ ಜೊತೆ ಸ್ಕ್ವಿಡ್ ಗೇಮ್ಸ್‌ನ ರೌಂಡ್ ಆಂಡ್ ರೌಂಡ್ ಹಾಡು ಹಿನ್ನೆಲೆಯಲ್ಲಿ ಕೇಳುತ್ತಿದೆ. ಮೂವರೂ ಹಾಡು ಮತ್ತು ಎಸ್ ಯುವಿಯಲ್ಲಿ ಸವಾರಿ ಮಾಡುತ್ತಾ ಆ ಕ್ಷಣವನ್ನು ಆನಂದಿಸಿದ್ದಾರೆ. ಆದರೆ ಸಂಚಾರ ಮತ್ತು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ಕ್ರಮಗಳನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೊಳ್ಳಲಾಗಿದ್ದು, ಇದು ತಕ್ಷಣ ಟೀಕೆಗೆ ಗುರಿಯಾಗಿದೆ.

ಅಪಾಯಕಾರಿ ಚಾಲನೆ, ವಿಮೆ ಇಲ್ಲದೆ ವಾಹನ ಚಲಾಯಿಸುವುದು, ಟಿಂಟೆಡ್ ಗ್ಲಾಸ್ ಬಳಸುವುದು ಮತ್ತು ಸೀಟ್ ಬೆಲ್ಟ್ ಧರಿಸದಿರುವುದು ಸೇರಿದಂತೆ ಅನೇಕ ಉಲ್ಲಂಘನೆಗಳಿಗಾಗಿ ನೋಯ್ಡಾ ಪೊಲೀಸರು ಕಾರಿನ ಮಾಲೀಕರ ವಿರುದ್ಧ 33,000 ರೂ.ಗಳ ವಿಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ಕುಡಿದ ಮತ್ತಿನಲ್ಲಿದ್ದ ಮಾಲೀಕನನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ದ ಗೂಳಿ; ವಿಡಿಯೊ ನೋಡಿ

ನೋಯ್ಡಾ ಪೊಲೀಸರು ಕಿಡಿಗೇಡಿ ವ್ಯಕ್ತಿಗಳ ವಿರುದ್ಧ ತಕ್ಷಣದ ಕ್ರಮ ಕೈಗೊಂಡಿದ್ದರೂ, ಎಸ್‌ಯುವಿಯ ಮಾಲೀಕರು ಯಾರು ಮತ್ತು ಮಾಲೀಕರು ಬಿಜೆಪಿಯೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂಬ ಬಗ್ಗೆ ಯಾವುದೇ ವರದಿಗಳಿಲ್ಲ. ಎಸ್‌ಯುವಿಯಲ್ಲಿ ಬಿಜೆಪಿ ಧ್ವಜವನ್ನು ಬಳಸಿರುವುದರಿಂದ ಕಾರು ಪಕ್ಷದ ಕಾರ್ಯಕರ್ತ ಅಥವಾ ನಾಯಕನ ಒಡೆತನದಲ್ಲಿದೆ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಆದರೆ  ಈ ವಿಷಯದಲ್ಲಿ ಭಾಗಿಯಾಗಿರುವ ಎಸ್‌ಯುವಿಯ ಮಾಲೀಕರ ಬಗ್ಗೆ ವಿವರಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.