Wednesday, 8th January 2025

Viral Video: ಖಡ್ಗಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೆ ಆಗಿದ್ದೇನು? ವಿಡಿಯೊ ಇದೆ

Viral Video

ದಿಸ್ಪುರ್: ಏಕ ಕೊಂಬಿನ ಖಡ್ಗಮೃಗಗಳಿಗೆ ನೆಲೆಯಾಗಿರುವ ಅಸ್ಸಾಂನ ಕಾಜಿರಂಗಾ ರಾಷ್ಟ್ರೀಯ ಉದ್ಯಾನವು ಪ್ರಕೃತಿ ಉತ್ಸಾಹಿಗಳಿಗೆ ನೆಚ್ಚಿನ ತಾಣವಾಗಿದೆ. ಇಲ್ಲಿ ಜೀಪ್ ಸಫಾರಿ ಮಾಡುತ್ತಾ ಸಂದರ್ಶಕರಿಗೆ ಒಂದು ಕೊಂಬಿನ ಖಡ್ಗಮೃಗಗಳು ಮತ್ತು ಇತರ ಪ್ರಾಣಿಗಳನ್ನು ಹತ್ತಿರದಿಂದ ನೋಡುವ ಅವಕಾಶವನ್ನು ನೀಡುತ್ತದೆ. ಆದರೆ ಈ ಮೋಜಿನ ಸವಾರಿ ಇಲ್ಲೊಬ್ಬ ತಾಯಿ-ಮಗಳಿಗೆ ಬಹಳ ಅಪಾಯಕಾರಿಯಾಗಿದೆ. ಅವರು ಸ್ವಲ್ಪದರಲ್ಲೇ ತಮ್ಮ ಪ್ರಾಣದೊಂದಿಗೆ ಪಾರಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವೈರಲ್  ವಿಡಿಯೊದಲ್ಲಿ, ಖಡ್ಗಮೃಗವು ಉದ್ಯಾನವನದೊಳಗೆ ಹೋಗುತ್ತಿದ್ದಾಗ ಅದರ ಹಿಂದೆ ಪ್ರವಾಸಿಗರನ್ನು ತುಂಬಿಕೊಂಡು ಬಂದಿರುವ ಸಫಾರಿ ಜೀಪು ಬಂದಿದೆ. ಈ ನಡುವೆ  ಪ್ರವಾಸಿಗರಿಂದ ತುಂಬಿರುವ ಮೂರು ಜೀಪುಗಳು ಬಲ ತಿರುವು ತೆಗೆದುಕೊಳ್ಳುವಾಗ ಮೊದಲ ಎರಡು ಜೀಪುಗಳು ವೇಗವಾಗಿ ಚಲಿಸುತ್ತಿದ್ದಂತೆ, ಸಮತೋಲನ ಕಳೆದುಕೊಂಡು ಯುವತಿಯೊಬ್ಬಳು ತನ್ನ ತಾಯಿಯೊಂದಿಗೆ ನೆಲದ ಮೇಲೆ ಬಿದ್ದಿದ್ದಾಳೆ. ಇಬ್ಬರೂ ಸಹಾಯಕ್ಕಾಗಿ ಕೂಗಿದ್ದಾರೆ.

ಆ ಕ್ಷಣದಲ್ಲಿ, ಮತ್ತೊಂದು ಖಡ್ಗಮೃಗವು ಪ್ರವಾಸಿಗರ ವಾಹನದ ಮೇಲೆ ದಾಳಿ ಮಾಡಲು ಸಮೀಪಿಸಿದೆ. ಕೋಪದಿಂದ ಬರುತ್ತಿರುವ ಖಡ್ಗಮೃಗವನ್ನು ನೋಡಿ, ಮೂರನೇ ಜೀಪ್ ಹಿಂದಕ್ಕೆ ಹೋಗಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಬಗೋರಿ ಶ್ರೇಣಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ವರದಿ ಪ್ರಕಾರ, ಇಬ್ಬರು ಮಹಿಳೆಯರು ಅಪಾಯದಿಂದ ಪಾರಾಗಿದ್ದಾರೆ. ಪ್ರವಾಸಿಗರೊಬ್ಬರು ಈ ಭಯಾನಕ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು  ವೈರಲ್ ಆಗಿದ್ದು, ಪ್ರವಾಸಿಗರ ಸುರಕ್ಷತೆಯ ಬಗ್ಗೆ ಕಳವಳ ಮೂಡಿದೆ. ಕಾಜಿರಂಗಾ ಆಡಳಿತವು ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಸಫಾರಿ ಸಮಯದಲ್ಲಿ ಪ್ರವಾಸಿಗರು ಜಾಗರೂಕರಾಗಿರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ಗೋವಾದಲ್ಲಿ ‘ಮಹಾ ಕುಂಭಮೇಳ’; ನೀರಿನ ಪ್ರವಾಹಕ್ಕೆ ಕೊಚ್ಚಿ ಹೋದ ಮರಳು ಮಾದರಿ ವಿಡಿಯೊ ವೈರಲ್

ಕಾಜಿರಂಗ ರಾಷ್ಟ್ರೀಯ ಉದ್ಯಾನವು ಕಳೆದ ಎರಡು ದಶಕಗಳಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದೆ. 2024 ರ ಅಕ್ಟೋಬರ್‌ನಲ್ಲಿ ಶುರುವಿನಲ್ಲಿಯೇ 1,64,636 ಜನರು ಭೇಟಿ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಉದ್ಯಾನವನವು ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಮೇ ತಿಂಗಳವರೆಗೆ ತೆರೆದಿರುತ್ತದೆ, ನಂತರ ಇದು ಮಾನ್ಸೂನ್ ವಿರಾಮವನ್ನು ತೆಗೆದುಕೊಳ್ಳುತ್ತದೆ.

Leave a Reply

Your email address will not be published. Required fields are marked *