Sunday, 22nd December 2024

Viral Video: ಶ್ವಾನದ ಪರಿಸರ ಕಾಳಜಿಗೆ ನೆಟ್ಟಿಗರು ಫುಲ್‌ ಫಿದಾ! ಅಷ್ಟಕ್ಕೂ ಅದು ಮಾಡಿದ್ದೇನು ಗೊತ್ತಾ?

Viral Video

ದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳು ಮನುಷ್ಯರಂತೆಯೇ ಜವಾಬ್ದಾರಿ, ಮಾನವೀಯತೆಯಿಂದ ನಡೆದುಕೊಳ್ಳುವ ವಿಡಿಯೊಗಳು ಆಗಾಗ ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಮತ್ತೊಂದು ವಿಡಿಯೊ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ವಿಡಿಯೊದಲ್ಲಿ ಶ್ವಾನವೊಂದು ಪರಿಸರ ಪ್ರೇಮ, ಸ್ವಚ್ಛತೆ ಬಗೆಗಿನ ಕಾಳಜಿಯನ್ನು ಮೆರೆದಿರುವುದನ್ನು ಕಾಣಬಹುದಾಗಿದೆ. ನಾಯಿಯೊಂದು ಪರಿಸರ ಸಂರಕ್ಷಣೆ ಮಾಡುವ ಸಲುವಾಗಿ ನೀರಿಗೆ ಎಸೆಯಲ್ಪಟ್ಟ ಕಸವನ್ನು ಮೇಲಕ್ಕೆ ಎತ್ತಿ ಪರಿಸರ ಕಾಳಜಿವಹಿಸುತ್ತಿರುವ ವೀಡಿಯೋ ಫುಲ್ ವೈರಲ್ (Viral Video)ಆಗುತ್ತಿದೆ.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿದಿದ್ದರು ಕೂಡ ಈ ಹೊಣೆ ನಿರ್ವಹಣೆ ವಿಚಾರದಲ್ಲಿ ನಾವು ಎಡವುತ್ತಿದ್ದೇವೆ ಎನ್ನಬಹುದು. ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿರುವ ಈ ವಿಡಿಯೋದಲ್ಲಿ ನಾಯಿಗೆ  ಪ್ರಕೃತಿ ಮತ್ತು ಪರಿಸರದ ಬಗ್ಗೆ  ಇರುವ ಜವಾ ಬ್ದಾರಿಯ ಬಗ್ಗೆ ತಿಳಿ ಹೇಳುವಂತಿದೆ. ಪರಿಸರ ಕಾಪಾಡುವ ಜವಾಬ್ದಾರಿ ನಾಯಿಗಿದೆ ಆದರೆ ಮನುಷ್ಯನಿಗೆ ಈ ಬುದ್ದಿ ಇಲ್ಲ ಎಂದು ನೆಟ್ಟಿಗರು ಚರ್ಚೆ ಶುರುವಿಟ್ಟುಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?!

ಸತತ ಐದಾರು ಬಾರಿ ನಾಯಿ ಮೆಟ್ಟಿಲಿಂದ ಇಳಿದು ನೀರಿನಲ್ಲಿ ತೇಲುವ ಬಾಟಲಿಯನ್ನು ಬಾಯಿಂದ ಕಚ್ಚಿ ಪುನಃ ಮೇಲೆ ಬಂದು ಕಸದ ಬುಟ್ಟಿಗೆ ಹಾಕುವುದು ಕಂಡರೆ ಅದರ ಪರಿಸರ ಸ್ವಚ್ಛತೆಯ ಕಾಳಜಿ ಮಾನವನಿಗೂ ಮಿಗಿಲಾಗಿದ್ದು ಎಂಬುದು ಅರಿವಾಗಲಿದೆ. ಈ ವಿಡಿಯೋದಲ್ಲಿ ‌ ತ್ಯಾಜ್ಯ ವಸ್ತುಗಳನ್ನು ನೀರಿನಿಂದ  ತೆಗೆಯಲು ಯಾವುದೇ ಹಿಂಜರಿಕೆಯಿಲ್ಲದೆ ನೀರಿಗೆ ಜಿಗಿದು  ನಾಯಿ ತನ್ನ ಬಾಯಿಯಲ್ಲಿ ಕಸವನ್ನು ಆರಿಸಿಕೊಂಡು ದಡಕ್ಕೆ ಈಜುತ್ತಿರುವುದು ಕಂಡುಬಂದಿದೆ. ಸ್ಥಳೀಯರು ಹರಿಯುವ ನೀರಿಗೆ ಪ್ಲಾಸ್ಟಿಕ್ ಬಾಟಲಿ, ಇತರೆ ಪ್ಲಾಸ್ಟಿಕ್ ತ್ಯಾಜ್ಯ ಎಸೆದಿದ್ದು ಅದನ್ನು ನಾಯಿ ಒಂದೊಂದಾಗಿ ಹೆಕ್ಕಿ ತಂದು ಕಸದ ಬುಟ್ಟಿಗೆ ಎಸೆಯುತ್ತಿದೆ. ಈ ಮೂಲಕ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಜನರಿಗೆ ಅರಿವು ಮೂಡಿಸುತ್ತಿದೆ. 

ಜಲ ಸಂರಕ್ಷಣೆ ಅರಿವು

ಜಲ ಸಂರಕ್ಷಣೆ ಪ್ರಾಮುಖ್ಯತೆ ಸಾರುವ ಈ ಒಂದು ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಪ್ಲಾಸ್ಟಿಕ್ ಪರಿಸರಕ್ಕೆ ಹಾನಿ ಎಂದು ತಿಳಿದಿದ್ದರೂ ಕೂಡ ಅದನ್ನು ನಿತ್ಯ ಬಳಸುತ್ತಿದ್ದೇವೆ. ಪರಿಸರಕ್ಕೆ ಹಾನಿಯಾಗದಂತೆ ಇಂತಹ ಪ್ಲಾಸ್ಟಿಕ್ ಕಸವನ್ನು ಕಸದ ಬುಟ್ಟಿಗೆ ಹಾಕಲು ಸೂಚಿಸಿದರೂ ಅನೇಕರು ಈ ಸೂಚನೆ ಉಲ್ಲಂಘನೆ ಮಾಡಿ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇಂತಹ ಜನರಿಗೆ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ನಾಯಿ ತನ್ನ ಜವಾಬ್ದಾರಿ ಮೇರೆದಂತಿದೆ. ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ನಾಯಿಯನ್ನು ರಿಯಲ್ ಹೀರೋ ಎಂದು ಕರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Children Kidnap: ಬೆಳಗಾವಿಯಲ್ಲಿ ಹಾಡ ಹಗಲೇ ಇಬ್ಬರು ಮಕ್ಕಳ ಕಿಡ್ನಾಪ್;‌ ವಿಡಿಯೋ ವೈರಲ್‌