ಲಖನೌ: ಉತ್ತರ ಪ್ರದೇಶದ ಕನೌಜ್‍ನಲ್ಲಿ ಜೈಲಿನಿಂದ ಬಿಡುಗಡೆಯಾದ ಕೈದಿಯೊಬ್ಬ ಜಿಲ್ಲಾ ಕಾರಾಗೃಹದ ಗೇಟ್ ಬಳಿ ಸಖತ್ ಆಗಿ ಡಾನ್ಸ್ ಮಾಡಿದ್ದಾನೆ. ಹನ್ನೊಂದು ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾದಾಗ ಕೈದಿ ಸಂತೋಷದಿಂದ ಕುಣಿದು ಕುಪ್ಪಳಿಸಿದ್ದಾನಂತೆ. ಕೈದಿ ಬ್ರೇಕ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೊ ಮತ್ತು ಜೈಲು ಅಧಿಕಾರಿಗಳು ಅವನ ನೃತ್ಯ ಕೌಶಲ್ಯವನ್ನು ಹೊಗಳುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಕಾನೂನು ಸೇವೆಗಳ ಪ್ರಾಧಿಕಾರದ ವಿಶೇಷ ಕಾರ್ಯಕ್ರಮದ ಸಹಾಯದಿಂದ ಕೈದಿಯನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಕಾನೂನು ಸೇವೆಗಳ ಪ್ರಾಧಿಕಾರ ಸಂಪೂರ್ಣವಾಗಿ ಅಸಹಾಯಕರಾಗಿರುವ ಕೈದಿಗಳಿಗೆ ಸಹಾಯ ಮಾಡುತ್ತಾರೆ. ಚಿಬ್ರಾಮೌ ನಿವಾಸಿ ಶಿವ ಎಂದು ಗುರುತಿಸಲ್ಪಟ್ಟ ಕೈದಿಗೆ ಹಲ್ಲೆ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಮತ್ತು 1,000 ರೂ.ಗಳ ದಂಡವನ್ನು ವಿಧಿಸಲಾಗಿತ್ತು. ಅವನಿಗೆ ಯಾವುದೇ ಕುಟುಂಬವಿಲ್ಲ, ಇದರಿಂದಾಗಿ ಅವನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಯಾರೂ ಇರಲಿಲ್ಲ. ಹಾಗಾಗಿ ಅವನಿಗೆ ಎನ್‍ಜಿಒ ಉಚಿತ ಕಾನೂನು ನೆರವು ನೀಡಿತ್ತು ಮತ್ತು ಜಾಮೀನು ಮೊತ್ತವನ್ನು ಸಹ ಅವರು ವ್ಯವಸ್ಥೆ ಮಾಡಿದ ಕಾರಣ ನಂತರ ಶಿವನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
कन्नौज: जिला जेल से रिहा होते ही बंदी ने जेल गेट पर किया डांस, जेल स्टाफ ने बजाई तालियां
— News1India (@News1IndiaTweet) November 27, 2024
9 महीने से जेल में बन्द था
जुर्माने के 1 हजार रुपये अदा न कर पाने के कारण रिहा नहीं हो पाया था
एक छिबरामऊ का तो दूसरा फतेहपुर का निवासी है#viralvideo @kannaujpolice pic.twitter.com/IXXsKFsGiE
ಕನೌಜ್ ಜಿಲ್ಲಾ ಜೈಲಿನಿಂದ ಹೊರಬಂದ ನಂತರ, ಶಿವ ಜೈಲಿನ ಅಧಿಕಾರಿಗಳ ಮುಂದೆ ಜೈಲಿನ ಗೇಟ್ ಬಳಿ ನೃತ್ಯ ಮಾಡಿದ್ದಾನೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಜೈಲಿನ ಅಧಿಕಾರಿಗಳು ಶಿವನ ಡ್ಯಾನ್ಸ್ ನೋಡಿ ಚಪ್ಪಾಳೆ ತಟ್ಟಿ ಹೊಗಳಿದ್ದಾರೆ. 11 ತಿಂಗಳ ಹಿಂದೆ ಜೈಲಿಗೆ ಹೋದಾಗ ತಾನು ಅನಕ್ಷರಸ್ಥನಾಗಿದ್ದೆ. ಆದರೆ , ಜೈಲಿನೊಳಗೆ ಒದಗಿಸಲಾದ ಉತ್ತಮ ವಾತಾವರಣದಿಂದಾಗಿ ಜೈಲಿನಲ್ಲಿ ಓದಲು, ಬರೆಯಲು ಮತ್ತು ತನ್ನ ಹೆಸರನ್ನು ಸಹಿ ಮಾಡಲು ಕಲಿಯಲು ಸಾಧ್ಯವಾಯಿತು ಎಂದು ಶಿವ ಹೇಳಿದ್ದಾನೆ. ಅಲ್ಲದೇ ಜೈಲಿನಿಂದ ಹೊರಬರುವ ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದೆ. ಆದರೆ, ಎನ್‍ಜಿಒ ಸಹಾಯದಿಂದ ಜೈಲಿನಿಂದ ಬಿಡಿಗಡೆಯಾದೆ. ಮತ್ತೆ ಯಾವುದೇ ಅಪರಾಧದಲ್ಲಿ ತೊಡಗುವುದಿಲ್ಲ ಎಂದು ಹೇಳಿದ್ದಾನೆ.
ಇದನ್ನೂ ಓದಿ:ದಲಿತ ಯುವಕನನ್ನು ಅಮಾನುಷವಾಗಿ ಥಳಿಸಿ ಬರ್ಬರ ಹತ್ಯೆ…ಘೋರ ದೃಶ್ಯ ಕ್ಯಾಮರಾದಲ್ಲಿ ಸೆರೆ!
ಸೋಶಿಯಲ್ ಮೀಡಿಯಾ ಬಳಕೆದಾರರು ಶಿವನ ಡ್ಯಾನ್ಸ್ ಸ್ಟೆಪ್ ಅನ್ನು ಕಂಡು ಹೊಗಳಿದ್ದಾರೆ. “ತನ್ನ ಈ ಕನಸನ್ನು ಈಡೇರಿಸಲು ಅವನು ಜೈಲಿಗೆ ಹೋಗಿದ್ದಾನೆಂದು ತೋರುತ್ತದೆ” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.