Wednesday, 8th January 2025

Viral Video: ಈ ಬಸ್‌ ಚಾಲಕನ ಶ್ವಾನ ಪ್ರೀತಿಯನ್ನೊಮ್ಮೆ ನೋಡಿ; ಹೃದಯಸ್ಪರ್ಶಿ ವಿಡಿಯೊ ಭಾರೀ ವೈರಲ್‌

Viral Video

ಶಿಮ್ಲಾ: ಕೆಲವರಿಗೆ ಶ್ವಾನಗಳೆಂದರೆ ತುಂಬಾ ಪ್ರೀತಿ. ನಾಯಿಯನ್ನು ತಮ್ಮ ಮಕ್ಕಳಂತೆ ಸಾಕುವವರು ಇದ್ದಾರೆ. ಇನ್ನು ಕೆಲವರು ಬೀದಿನಾಯಿಗಳನ್ನು ಕೂಡ ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ಹಿಮಾಚಲ ಪ್ರದೇಶದಲ್ಲಿ ಬಸ್ ಚಾಲಕನೊಬ್ಬ ರಸ್ತೆ ಬದಿಯಲ್ಲಿ ಹಸಿವಿನಿಂದ ಓಡಾಡುತ್ತಿದ್ದ ನಾಯಿಗೆ ಬಸ್ ನಿಲ್ಲಿಸಿ ರೊಟ್ಟಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಬಸ್ ಚಾಲಕ ಮತ್ತು ಬೀದಿ ನಾಯಿಯ ನಡುವಿನ ಅವಿನಾಭಾವ ಸಂಬಂಧದ ಹೃದಯಸ್ಪರ್ಶಿ ವಿಡಿಯೊ ಇದೀಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.  

ವೈರಲ್ ವಿಡಿಯೊದಲ್ಲಿ ನಾಯಿ ವಾಹನದ ಕಡೆಗೆ ಓಡಿ ಬರುತ್ತಿರುವುದನ್ನು ನೋಡಿದ ಚಾಲಕ  ಬಸ್ ನಿಲ್ಲಿಸಿ ಹಸಿದಿದ್ದ ನಾಯಿಗೆ ಆಹಾರ ನೀಡಲು ಬಸ್‍ನಿಂದ ಕೆಳಗಿಳಿದಿದ್ದಾರೆ. ಇದು ಒಂದು ದಿನದ ಕತೆಯಲ್ಲ, ಚಾಲಕ ಪ್ರತಿದಿನ ನಾಯಿಗೆ ತಿಂಡಿ ನೀಡುತ್ತಾರಂತೆ. ನಾಯಿ ಪ್ರತಿದಿನ ಬಸ್‌ ಬಳಿ ಓಡಿ ಬಂದು ಚಾಲಕನನ್ನು ಭೇಟಿಯಾಗಿ ಚಾಲಕ ನೀಡುವ ‘ರೊಟ್ಟಿ’ ತಿನ್ನುವ ಅಭ್ಯಾಸವಿಟ್ಟುಕೊಂಡಿತಂತೆ.

ನಿರ್ಜನ ಪ್ರದೇಶದ ಬೀದಿಗಳಲ್ಲಿ ನಾಯಿ ಆಹಾರ ಸಿಗದೆ ಹಸಿದಿರುತ್ತದೆ ಎಂದು ತಿಳಿದ ಬಸ್ ಚಾಲಕ ಪ್ರತಿದಿನ  ಬಸ್ ನಿಲ್ಲಿಸಿ ನಾಯಿಗೆ ‘ರೊಟ್ಟಿ’ ನೀಡಿ ಮಾನವೀಯತೆ ಮೆರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:ಲೈವ್ ಸಂದರ್ಶನದ ವೇಳೆ ಕಾಲಿಗೆ ಗುಂಡು ಹಾರಿಸಿಕೊಂಡ ರ‍್ಯಾಪರ್‌; ವಿಡಿಯೊ ವೈರಲ್

ಪ್ರಾಣಿ ಪ್ರಿಯರಾದ ಬಸ್ ಚಾಲಕ ತನ್ನ ಪ್ರಯಾಣದ ಸಮಯದಲ್ಲಿ ಪ್ರತಿದಿನ ನಾಯಿಗೆ ‘ರೊಟ್ಟಿ’ ನೀಡಲು ವಾಹನವನ್ನು ನಿಲ್ಲಿಸುವ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಅನೇಕ ನೆಟ್ಟಿಗರ ಹೃದಯವನ್ನು ಗೆದ್ದಿದೆ.

Leave a Reply

Your email address will not be published. Required fields are marked *