Tuesday, 7th January 2025

Viral Video: ಬರೋಬ್ಬರಿ 600 ಕೆ.ಜಿ ತೂಕದ ಖಡ್ಗಮೃಗ ಹೆಗಲ ಮೇಲೆ ಹೊತ್ತು ಸಾಗಿದ ಅರಣ್ಯಾಧಿಕಾರಿಗಳು- ವಿಡಿಯೊ ನೋಡಿ

Viral Video

ನವದೆಹಲಿ: ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬರೋಬ್ಬರಿ 600ಕೆಜಿ ತೂಕದ ಖಡ್ಗಮೃಗದ ಮರಿಯನ್ನು ಅರಣ್ಯಾಧಿಕಾರಿಗಳು ಹೆಗಲ ಮೇಲೆ ಹೊತ್ತು ದಟ್ಟ ಕಾಡಿನಲ್ಲಿ ಅಲೆದಾಡಿರುವ ಘಟನೆ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊವೊಂದು ನೆಟ್ಟಿಗರ ಗಮನ ಸೆಳೆದಿದೆ(Viral Video)

ಇದು ಯಾವ ಪ್ರದೇಶದಲ್ಲಿ ನಡೆದ ಘಟನೆ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಖಡ್ಗಮೃಗದ ಮರಿಯನ್ನು ರಕ್ಷಿಸಲು ಅರಣ್ಯ ಅಧಿಕಾರಿಗಳ ತಂಡವು ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ.

ಸುಮಾರು 600 ರಿಂದ 700 ಕಿಲೋಗ್ರಾಂಗಳಷ್ಟು ತೂಕವಿರುವ ಖಡ್ಗಮೃಗದ ಮರಿಯು ತನ್ನನ್ನು ತಾನು ಬಿಡಿಸಿಕೊಳ್ಳಲು ಸಾಧ್ಯವಾಗದೆ ಒದ್ದಾಡುತ್ತಿತ್ತು. ಆಗ ಇದನ್ನು ನೋಡಿದ ಅರಣ್ಯ ಅಧಿಕಾರಿಗಳ ತಂಡವು ತ್ವರಿತವಾಗಿ ಕಾರ್ಯನಿರ್ವಹಿಸಿ ಪ್ರಾಣಿಯನ್ನು ಉಳಿಸಲು ಯೋಜನೆಯನ್ನು ರೂಪಿಸಿತು. ನಂತರ ಅವರು, ಮರಿಯನ್ನು ರಕ್ಷಿಸಲು ಜೌಗು ಪ್ರದೇಶಕ್ಕೆ ಇಳಿದು ಎಚ್ಚರಿಕೆಯಿಂದ ಮರದ ಹಲಗೆಯ ಮೇಲೆ ಮರಿಯನ್ನು ಕೂರಿಸಿ ತಮ್ಮ ಭುಜಗಳ ಮೇಲೆ ಅದನ್ನು ಹೊತ್ತುಕೊಂಡು ಅಲ್ಲಿಂದ  ಸುರಕ್ಷಿತವಾದ ಸ್ಥಳಕ್ಕೆ ಬಂದಿದ್ದಾರೆ.

ಈ ಅಸಾಧಾರಣ ರಕ್ಷಣಾ ಕಾರ್ಯಾಚರಣೆಯ ವಿಡಿಯೊವನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಹಂಚಿಕೊಂಡಿದ್ದಾರೆ.” 600-700 ಕೆಜಿ ತೂಕದ ಖಡ್ಗಮೃಗದ ಮರಿಯನ್ನು ನಮ್ಮ ತಂಡಗಳು ಹೆಗಲ ಮೇಲೆ ಎತ್ತಿಕೊಂಡು ರಕ್ಷಿಸಿದ್ದಾರೆ” ಎಂದು ತಿಳಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿ ಅನೇಕರಿಂದ  ಪ್ರಶಂಸೆ ವ್ಯಕ್ತವಾಗಿದೆ.

ಈ ಸುದ್ದಿಯನ್ನೂ ಓದಿ:ಈ ವೃದ್ಧನ ಸಾಹಸಕ್ಕೊಂದು ಸಲಾಂ! ಹಗ್ಗದಲ್ಲೇ 1 ಕಿ.ಮೀ. ದೂರ ಜಾರಿದ ವಿಡಿಯೊ ವೈರಲ್

ಕಸ್ವಾನ್ ಅವರ ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ  ಅರಣ್ಯ ಅಧಿಕಾರಿಗಳನ್ನು ಹೊಗಳಿ ಅನೇಕರು ಕಾಮೆಂಟ್ ಮಾಡಿದ್ದಾರೆ. ಹಾಗೇ ಅನೇಕರು ಅಧಿಕಾರಿಗಳಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ನೆಟ್ಟಿಗರು ಕಾಮೆಂಟ್ ಮಾಡಿ, “ಇದು ನಂಬಲಾಗದ ಕೆಲಸ! ಅಂತಹ ದೊಡ್ಡ ಪ್ರಾಣಿಯನ್ನು ಉಳಿಸಿದ್ದಕ್ಕಾಗಿ ತಂಡಕ್ಕೆ ಅಭಿನಂದನೆಗಳು” ಎಂದಿದ್ದಾರೆ.  ಇನ್ನೊಬ್ಬರು , “ನಿಜವಾಗಿಯೂ ಸ್ಪೂರ್ತಿದಾಯಕ. ಈ ಅಧಿಕಾರಿಗಳ ಸಮರ್ಪಣೆಗೆ ಸಾಟಿಯಿಲ್ಲ.” ಎಂದಿದ್ದಾರೆ. ಮತ್ತೊಬ್ಬರು “ ಈ ಜನರೇ ನಿಜವಾದ ಹೀರೋಗಳು” ಎಂದಿದ್ದಾರೆ.

Leave a Reply

Your email address will not be published. Required fields are marked *