Tuesday, 7th January 2025

Viral Video: ಖುಷಿಯಿಂದ ಪಿಜ್ಜಾ ಸವಿಯುತ್ತಿದ್ದವನಿಗೆ ಬಾಯಿಗೆ ಸಿಕ್ಕಿದ್ದೇನು? ವಿಡಿಯೊ ನೋಡಿ

Viral Video

ಪುಣೆ : ಪುಣೆ ಮೂಲದ ವ್ಯಕ್ತಿಯೊಬ್ಬರು ಡೊಮಿನೋಸ್‍ನಿಂದ ಪಿಜ್ಜಾ ಆರ್ಡರ್ ಮಾಡಿದ್ದರು. ಆದರೆ ಆ  ಪಿಜ್ಜಾವನ್ನು ತಿನ್ನುವಾದ ಅದರಲ್ಲಿ ಸಿಕ್ಕಿದ ವಸ್ತುವನ್ನು ಕಂಡು ಅವರು ಹೌಹಾರಿದ್ದಾರೆ. ಹೌದು ಆ ವ್ಯಕ್ತಿ ಆರ್ಡರ್ ಮಾಡಿದ ಪಿಜ್ಜಾದಲ್ಲಿ ಚಾಕುವಿನ ಪೀಸ್ ಸಿಕ್ಕಿದೆ. ಇದನ್ನು ಪುರಾವೆ ಸಹಿತವಾಗಿ ಮಳಿಗೆಯ ಮ್ಯಾನೇಜರ್‌ಗೆ ತೋರಿಸಿದಾಗ ಅವರು ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (Viral Video)ಆಗಿದೆ. 

ಪಿಂಪ್ರಿ-ಚಿಂಚ್ವಾಡ್ ನಿವಾಸಿ ಅರುಣ್ ಕಾಪ್ಸೆ ಶುಕ್ರವಾರ ಸ್ಪೈನ್ ರಸ್ತೆಯ ಜೈ ಗಣೇಶ್ ಎಂಪೈರ್‌ನಲ್ಲಿರುವ ಡೊಮಿನೋಸ್ ಮಳಿಗೆಯಿಂದ ಪಿಜ್ಜಾವನ್ನು ಆರ್ಡರ್ ಮಾಡಿದ್ದರು. ಮನೆಗೆ ಬಂದ ಪಿಜ್ಜಾವನ್ನು ತಿನ್ನುತ್ತಾ ಆನಂದಿಸುತ್ತಿರುವಾಗ, ಕಾಪ್ಸೆಗೆ ತೀಕ್ಷ್ಣವಾದ ವಸ್ತುವೊಂದು ಚುಚ್ಚಿದೆ ಎಂದು ಅನಿಸಿತು. ಆಗ ಅವರು ಅದನ್ನು ಪರಿಶೀಲಿಸಿದಾಗ ಚಾಕುವಿನ ಪೀಸ್‍ ಕಣ್ಣಿಗೆ ಬಿದ್ದಿದೆ.

ಕಾಪ್ಸೆ ತಕ್ಷಣ ಔಟ್ಲೆಟ್ ಮ್ಯಾನೇಜರ್‌ ಅನ್ನು ಸಂಪರ್ಕಿಸಿದ್ದಾರೆ. ಆದರೆ  ಅವರು ಆರಂಭದಲ್ಲಿ ಅವರ ಹೇಳಿಕೆಗಳನ್ನು ತಳ್ಳಿಹಾಕಿದರು. ಕೊನೆಗೆ , ಕಾಪ್ಸೆ ಅದನ್ನು ಪೋಟೊ ತೆಗೆದು ಪುರಾವೆಗಳ ಮೂಲಕ ತಿಳಿಸಿದಾಗ ಮ್ಯಾನೇಜರ್‌ ಕಪ್ಸೆ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಕಾಪ್ಸೆ ತಿಳಿಸಿದ ಪ್ರಕಾರ, ಮ್ಯಾನೇಜರ್ ತಪ್ಪನ್ನು ಒಪ್ಪಿಕೊಂಡರು ಮತ್ತು ಘಟನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊ ಹಂಚಿಕೊಳ್ಳದಂತೆ ಮನವಿ ಮಾಡಿದ್ದರು.  ಈ ವಿಷಯವನ್ನು ಮುಚ್ಚಿಟ್ಟರೆ ಪಿಜ್ಜಾಗೆ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಆದರೆ ಇದನ್ನು ನಿರಾಕರಿಸಿದ ಕಾಪ್ಸೆ, “ಇದು ಕೇವಲ ನಿರ್ಲಕ್ಷ್ಯವಲ್ಲ; ಇದು ಅಪಾಯಕಾರಿ ಘಟನೆ. ಆ ಮಳಿಗೆಯಿಂದ ಪಿಜ್ಜಾಗಳನ್ನು ಖರೀದಿಸುವುದನ್ನು ನಿಲ್ಲಿಸಲು ನಾನು ಪ್ರತಿಯೊಬ್ಬರನ್ನು ಒತ್ತಾಯಿಸುತ್ತೇನೆ. ಇಂತಹ ಅಜಾಗರೂಕತೆಯನ್ನು ಸಹಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:ಪ್ರಯಾಣಿಕನ ಬೋರ್ಡಿಂಗ್ ಪಾಸ್‍ ನೋಡಿ ಶಾಕ್‌ ಆದ ಭದ್ರತಾ ಸಿಬ್ಬಂದಿ; ಅಂತಹದ್ದೇನಿದೆ ಇದ್ರಲ್ಲಿ?

ಈ ನಡುವೆ  ಕಾಪ್ಸೆ ‘ಫುಡ್ ಆ್ಯಂಡ್‌ ಡ್ರಗ್ ಅಡ್‍ಮಿನಿಸ್ಟ್ರೇಷನ್‍’ (ಎಫ್‍ಡಿಎ)ಗೆ ದೂರು ನೀಡಲು ಯೋಜಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಒಪ್ಪಿಕೊಂಡ ಮ್ಯಾನೇಜರ್, ಕ್ಷಮೆಯಾಚಿಸಿದರು ಮತ್ತು ಆ ಪೀಸ್ ನಿಜವಾಗಿಯೂ ಚಾಕುವಿನ ಒಂದು ಭಾಗವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

Leave a Reply

Your email address will not be published. Required fields are marked *