Tuesday, 7th January 2025

Viral Video: ಕೆಲವೇ ನಿಮಿಷದಲ್ಲಿ ಕಲಾತ್ಮಕ ರಂಗೋಲಿ ರಚಿಸಿದ ಮಹಿಳೆಯ ಕೈ ಚಳಕಕ್ಕೆ ನೆಟ್ಟಿಗರು ಫಿದಾ

viral video

ನವ ದೆಹಲಿ: ನೀವು ಸಾಕಷ್ಟು ಬಗೆಯ ಕಲ್ಮಾತಕ  ರಂಗೋಲಿ ರಚನೆಯನ್ನು ನೋಡಿರಬಹುದು. ಕೆಲವು ಮಹಿಳೆಯರು ರಂಗೋಲಿ  ರಚಿಸುವಲ್ಲಿ‌  ಬಹಳಷ್ಟು ಪರಿಣಿತರಾಗಿರುತ್ತಾರೆ. ಆದರೆ ಇಲ್ಲೊಬ್ಬರು ಮಹಿಳೆ ಬಣ್ಣದ ಪುಡಿಗಳನ್ನು ಜೋಡಿಸುವ ಬದಲು ಬಣ್ಣದ ಪುಡಿಗಳನ್ನು ಚದುರಿಸಿ ಅದಕ್ಕೆ ಕಲಾತ್ಮಕ ವಿನ್ಯಾಸ ನೀಡುವ ವಿಡಿಯೊವೊಂದು  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವರ್ಣರಂಜಿತ  ರಂಗೋಲಿ ರಚನೆಯ  ಕೈಚಳಕಕ್ಕೆ  ನೋಡುಗರು ಮನ ಸೋತಿದ್ದಾರೆ (Viral Video).

ಸದ್ಯ ಈ ವಿಡಿಯೊ  ಸೋಶಿಯಲ್ ಮೀಡಿಯಾದಲ್ಲಿ‌ ಟ್ರೆಂಡ್ ಉಂಟು ಮಾಡಿದ್ದು ನೋಡುಗರು  ಬಲು ಆಸಕ್ತಿಯಿಂದಲೇ ಈ  ಅದ್ಬುತ ರಂಗೋಲಿಯ ದೃಶ್ಯ ನೋಡುತ್ತಿದ್ದಾರೆ. ಹೀಗಾಗಿ ಈ ವಿಡಿಯೊ  ಸಾಕಷ್ಟು ವ್ಯೂವ್ಸ್‌ ಗಳಿಸುವಲ್ಲಿಯೂ ಯಶಸ್ವಿಯಾಗಿದ್ದು ಮಹಿಳೆಯ  ಕೈಚಳಕಕ್ಕೆ  ನೋಡುಗರು ಮನ ಸೋತಿದ್ದಾರೆ. 

ವಿಡಿಯೊದಲ್ಲಿ ಏನಿದೆ?

ಮಹಿಳೆಯೊಬ್ಬರು ಬಣ್ಣದ ಪುಡಿಗಳನ್ನು ಎರಚಿ ಅತ್ಯಾಕರ್ಷಕ ವಿನ್ಯಾಸವನ್ನು ರೂಪಿಸುವುದು  ವಿಡಿಯೊದಲ್ಲಿ ಕಂಡುಬಂದಿದೆ. ಇಲ್ಲಿ ವಿಶೇಷ ಏನೆಂದರೆ  ಮಹಿಳೆಯು ಪುಡಿಯನ್ನು ಎಚ್ಚರಿಕೆಯಿಂದ ಜೋಡಿಸುವ ಬದಲು ಪುಡಿಯನ್ನು ಎಸೆದು ಕೇವಲ 3 ನಿಮಿಷದಲ್ಲಿ ತ್ವರಿತವಾಗಿ  ವರ್ಣರಂಜಿತ ವಿನ್ಯಾಸವನ್ನು ರಚಿಸುತ್ತಾಳೆ. ಈ ರಂಗೋಲಿ ವಿಧಾನವು ಸಾಂಪ್ರದಾಯಿಕ ರಂಗೋಲಿ ತಯಾರಿಕೆಗೆ ಸವಾಲಿನ ಪ್ರಶ್ನೆ ಎಂದೇ ಹೇಳಬಹುದು.

ಈ ವಿಡಿಯೊ ವೀಕ್ಷಕರಿಂದ ಹಲವಾರು ಪ್ರತಿಕ್ರಿಯೆ ಪಡೆದುಕೊಂಡಿದ್ದು, ರಂಗೋಲಿ ಮಾಡುವ ಹೊಸ ವಿಧಾನ ಬಹಳಷ್ಟು  ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ರೀತಿಯ ರಂಗೋಲಿ  ವಿನ್ಯಾಸಕ್ಕೆ  ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ಒಬ್ಬ  ಬಳಕೆದಾರ ಇದು ನೋಡುಗರನ್ನು  ಸಮ್ಮೋಹನಗೊಳಿಸುವಂತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಇದು ಸಾಂಪ್ರದಾಯಿಕ ರಂಗೋಲಿಯಲ್ಲ.  ಇದು ನನ್ನಂತಹ ಕಲಾತ್ಮಕವಲ್ಲದವರಿಗೂ ಮಾಡಬಹುದಾಗಿದೆ  ಎಂದು ಹೇಳಿದ್ದಾರೆ. ಮತ್ತೊಬ್ಬರು ಮಹಿಳೆಯ ಜಾಣ್ಮೆಯನ್ನು ಶ್ಲಾಘಿಸಿದ್ದಾರೆ. ಇನ್ನೊಬ್ಬ  ಬಳಕೆದಾರರು ಇದು ಸುಂದರವಾಗಿದೆ  ಆದರೆ   ಶ್ರಮದಾಯಕ ವಿನ್ಯಾಸ ಅಲ್ಲ ಎಂದಿದ್ದಾರೆ.

ಇದನ್ನು ಓದಿ: BBK 11: ಸದ್ಯಕ್ಕಿಲ್ಲ ಬಿಗ್ ಬಾಸ್ ಫಿನಾಲೆ: ವೀಕ್ಷಕರಿಗೆ ಸಿಕ್ಕತು ಭರ್ಜರಿ ಗುಡ್ ನ್ಯೂಸ್

Leave a Reply

Your email address will not be published. Required fields are marked *