ಉತ್ತರ ಪ್ರದೇಶದ ಝಾನ್ಸಿಯಲ್ಲಿ (Jhansi) ಸರ್ಕಾರಿ ಕಾರಿನ ಬೊನೆಟ್‌ನಲ್ಲಿ ಯುವತಿಯೊಬ್ಬಳು ಅಶ್ಲೀಲವಾಗಿ ನೃತ್ಯ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ (Viral Video) ಆಗಿದ್ದು, ಕಾರು ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲಾಗಿದೆ. ಈ ಘಟನೆ ಉತ್ತರಪ್ರದೇಶದ (Uttarpradesh) ಝಾನ್ಸಿಯಲ್ಲಿ ನಡೆದಿದೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿ ಅನೇಕ ಬಳಕೆದಾರರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದಾಗಿ ಅನೇಕರು ಕಳವಳ ವ್ಯಕ್ತಪಡಿಸಿ ಝಾನ್ಸಿ ಪೋಲೀಸರ ಗಮನಕ್ಕೆ ತಂದರು.
ಝಾನ್ಸಿಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಕಾರಿನ ಬಾನೆಟ್ ಮೇಲೆ ನೃತ್ಯಗಾರ್ತಿ ಪ್ರದರ್ಶನ ನೀಡುತ್ತಿರುವ ವಿಡಿಯೋ ಇದಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ‘ಉತ್ತರ ಪ್ರದೇಶ ಸರ್ಕಾರ’ ಎಂದು ಬರೆದಿದ್ದು, ಎಸ್‌ಡಿಎಂ ವಾಹನದ ಮೇಲೆ ಅದರ ಬೀಕನ್ ಲೈಟ್ ಆನ್ ಆಗಿರುವುದನ್ನು ಕಾಣಬಹುದು.
ಹಿನ್ನೆಲೆಯಲ್ಲಿ ಭೋಜ್‌ಪುರಿ ಹಾಡು ಕೇಳಿಬರುತ್ತಿದ್ದಂತೆ ಯುವತಿ ಮತ್ತು ಯುವಕನೊಬ್ಬ ಕಾರಿನ ಬೊನೆಟ್ ಮೇಲೆ ನೃತ್ಯ ಮಾಡಿದ್ದಾರೆ. ವಿಡಿಯೋದಲ್ಲಿ ಸೈರನ್ ಸದ್ದು ಕೂಡ ಕೇಳಿ ಬರುತ್ತಿದೆ. ಸುತ್ತಮುತ್ತ ನೆರೆದಿದ್ದವರು ಕರೆನ್ಸಿ ನೋಟುಗಳ ಸುರಿಮಳೆಗೈಯುತ್ತಿರುವುದನ್ನು ಕಾಣಬಹುದು.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಕಳಪೆಯಾಗಿದೆ ಎಂದು ಅನೇಕರು ದೂರಿದ್ದು, ವಿಡಿಯೋವನ್ನು ಝಾನ್ಸಿ ಪೊಲೀಸರ ಗಮನಕ್ಕೆ ತಂದಿದ್ದಾರೆ.
ವರದಿಗಳ ಪ್ರಕಾರ ಈ ವಿಡಿಯೋ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಶಹಜಹಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ತಾಡೌಲ್ ಗ್ರಾಮದಲ್ಲಿ ನಡೆದಿರುವಂತದ್ದು ಎನ್ನಲಾಗಿದೆ.
हूटर बज रहा है बत्ती जल रही है, गजब भौकाल है भइया 😳
— Rohit Tripathi journalist (@rohitt_tripathi) November 12, 2024
या तो सरकार में लंबी पकड़ है या तो SDM की मेहरबानी है, जांच हो
SDM/ उत्तर प्रदेश सरकार लिखा है और उसी गाड़ी के ऊपर ठुमके लगाए जा रही है, वायरल वीडियो झांसी का है।@myogiadityanath जी देखिए क्या दशा कर दिए है अधिकारी। pic.twitter.com/XxwOXsXWrp
ಝಾನ್ಸಿ ಪೊಲೀಸರು ವಿಡಿಯೋವನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಷಾಜಹಾನ್‌ಪುರ ಇನ್ಸ್‌ಪೆಕ್ಟರ್‌ಗೆ ಸೂಚಿಸಿದ್ದಾರೆ. ಬಳಿಕ ವಾಹನದ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
Viral Video: ಬಟ್ಟೆಯಂಗಡಿಯಲ್ಲಿ ಮಾಡೆಲ್‌ಗಳೇ ಗೊಂಬೆಗಳು! ಭಾರೀ ವೈರಲಾಗ್ತಿದೆ ಈ ವಿಡಿಯೊ
ಪ್ರಕರಣದ ಬಗ್ಗೆ ನಮಗೆ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಎಸ್‌ಡಿಎಂಗೆ ಶೋಕಾಸ್ ನೊಟೀಸ್ ಕಳುಹಿಸಲಾಗಿದೆ ಎಂದು ಝಾನ್ಸಿಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.