ನ್ಯೂಯಾರ್ಕ್ : ನ್ಯೂಯಾರ್ಕ್‍ನ ಯೂಟ್ಯೂಬರ್ ಬಂಗಾಳಿ ಪಾಕಪದ್ಧತಿಯನ್ನು ಅನ್ವೇಷಿಸಲು ನ್ಯೂಯಾರ್ಕ್‍ನಲ್ಲಿರುವ ಬಂಗಾಳಿ ರೆಸ್ಟೋರೆಂಟ್‍ಗೆ ಭೇಟಿ ನೀಡಿ, ಅಲ್ಲಿದ್ದವರ ಜೊತೆ ಬಂಗಾಳಿಯಲ್ಲಿ ಮಾತನಾಡಿ ಫುಡ್ ಆರ್ಡರ್ ಮಾಡಿದ್ದಾರೆ. ಅವರು ಸರಳವಾಗಿ ಬಂಗಾಳಿ ಭಾಷೆ ಮಾತನಾಡುವುದನ್ನು ಕಂಡು ಎಲ್ಲರೂ ಶಾಕ್ ಆಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಕ್ಸಿಯಾಮನ್ನಿಕ್(ನಿಜವಾದ ಹೆಸರು ಅರಿಹ್ ಸ್ಮಿತ್) ಎಂಬುವವರು ಅಂಗಡಿಯವರೊಂದಿಗೆ ಬಂಗಾಳಿಯಲ್ಲಿ ಮಾತನಾಡಿದ್ದಾರೆ. ಇವರಿಗೆ ಹೊಸ ಭಾಷೆಗಳನ್ನು ಕಲಿಯುವುದು ಮತ್ತು ವಿಭಿನ್ನ ಸಂಸ್ಕೃತಿಗಳನ್ನು ಅನ್ವೇಷಿಸುವುದು ಎಂದರೆ ತುಂಬಾ ಇಷ್ಟವಂತೆ. ಜಾಕ್ಸನ್ ಹೈಟ್ಸ್‌ಗೆ ಭೇಟಿ ನೀಡಿ ಅದನ್ನು “ಪುಟ್ಟ ಬಾಂಗ್ಲಾದೇಶ” ಎಂದು ಕರೆದಿದ್ದಾರೆ. ಯಾಕೆಂದರೆ ಕ್ವೀನ್ಸ್‌ನಲ್ಲಿರುವ ಈ ಸ್ಥಳವು ಅನೇಕ ಬಂಗಾಳಿ ರೆಸ್ಟೋರೆಂಟ್‍ಗಳಿಗೆ ನೆಲೆಯಾಗಿದೆ. ಕ್ಸಿಯಾವೊಮಾ ರಸ್ತೆಬದಿಯ ಅಂಗಡಿಯಿಂದ ಟೋಪಿಯನ್ನು ಖರೀದಿಸಿದ್ದಾರೆ ಮತ್ತು ಅವರು ಬಂಗಾಳಿ ಭಾಷೆ ಮಾತನಾಡುವುದನ್ನು ಕಂಡು ಅಂಗಡಿಯವರು ಶಾಕ್ ಆಗಿದ್ದಾರಂತೆ.
ಸ್ಮಿತ್ ಬಂಗಾಳಿಯಲ್ಲಿ ಆರ್ಡರ್ ಮಾಡುತ್ತಿದ್ದಾಗ, ಅಂಗಡಿಯವನು, ” ನೀವು ಬಂಗಾಳಿ ಭಾಷೆಯನ್ನು ಹೇಗೆ ಮಾತನಾಡುತ್ತೀರಿ?” ಎಂದು ಅವರನ್ನು ಕೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅವರು ನಗುತ್ತಾ, “ನಾನು ಅದನ್ನು ಕಲಿಯುತ್ತಿದ್ದೇನೆ” ಎಂದಿದ್ದಾರೆ. ನಂತರ ಅವರು ಕೆಲವು ಸಹ ಗ್ರಾಹಕರೊಂದಿಗೆ ಸಂವಹನ ನಡೆಸಿದ್ದಾರೆ.
ಮುಂದೆ ಅವರು ಫ್ರೇಮ್ ಚಹಾ ಅಂಗಡಿಗೆ ಹೋಗಿದ್ದಾರೆ. ಅಲ್ಲಿ ಸ್ಮಿತ್ ಕೆಲವು ಬಾಂಗ್ಲಾದೇಶಿ ಮಹಿಳೆಯರನ್ನು ಭೇಟಿಯಾಗಿ ಮಾತನಾಡಿದ್ದಾರೆ. “ನೀವು ಎಂದಾದರೂ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದೀರಾ?” ಎಂದು ಅವರು ಕೇಳಿದ್ದಕ್ಕೆ “ಇಲ್ಲ, ನಾನು ಎಂದಿಗೂ ಅಲ್ಲಿಗೆ ಹೋಗಿಲ್ಲ ಆದರೆ ಇಷ್ಟಪಡುತ್ತೇನೆ.” ಎಂದಿದ್ದಾರೆ. ಹೀಗೆ ಅವರು ಅಲ್ಲಿ ಅನೇಕ ಅಂಗಡಿಗಳಿಗೆ ಭೇಟಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:‘ಶ್ರೀಜನಾ ಸುಬೇದಿಯಂತೆ ಇರಿ, ನಿಖಿತಾ ಸಿಂಘಾನಿಯಾ ರೀತಿ ಅಲ್ಲ’ ಎಂದ ನೆಟ್ಟಿಗರು; ಕಾರಣವೇನು?
ಈ ವಿಡಿಯೊ ಯೂಟ್ಯೂಬ್‍ನಲ್ಲಿ ವೈರಲ್ ಆಗಿದ್ದು, ಪ್ಲಾಟ್‍ಫಾರ್ಮ್‍ನಲ್ಲಿ ಹಂಚಿಕೊಂಡಾಗಿನಿಂದ ಇದು 2,30,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಇತರ ಭಾಷೆಗಳು ಮತ್ತು ಸಂಸ್ಕೃತಿಗಳನ್ನು ಗೌರವಿಸಿದ್ದಕ್ಕಾಗಿ ಅನೇಕ ಬಳಕೆದಾರರು ಸ್ಮಿತ್ ಅವರನ್ನು ಹೊಗಳಿದ್ದಾರೆ. ಒಬ್ಬ ವ್ಯಕ್ತಿಯು ವ್ಲಾಗರ್ ಅನ್ನು ಹೊಗಳಿ, “ನೀವು ಬಂಗಾಳಿಯನ್ನು ಕಲಿತ ನಂತರ ಎಷ್ಟು ಚೆನ್ನಾಗಿ ಮಾತನಾಡುತ್ತೀರಿ ಎಂಬುದು ನಂಬಲಾಗದು. ಬಂಗಾಳಿ ಒಂದು ಸುಂದರವಾದ ಭಾಷೆ ಆದರೆ ಅದನ್ನು ಕರಗತ ಮಾಡಿಕೊಳ್ಳುವುದು ಕಷ್ಟ” ಎಂದಿದ್ದಾರೆ.