Monday, 6th January 2025

Viral Video: ಶುಂಠಿ ಕಾಫಿ, ಫಿಲ್ಟರ್ ಕಾಫಿ‌ ಓಕೆ; ಕಾರ್ನ್ ಕಾಫಿ ಸವಿದಿದ್ದೀರಾ? ಇಲ್ಲಿದೆ ಮೇಕಿಂಗ್‌ ವಿಡಿಯೊ

Viral Video

ಸಿಂಗಾಪುರ: ಕಾಫಿ ಅಂದಾಕ್ಷಣ ಹಲವು ವೆರೈಟಿ ಕಣ್ಣಮುಂದೆ ಸುಳಿಯುತ್ತದೆ.‌ ಶುಂಠಿ ಕಾಫಿ, ಮಸಾಲ ಕಾಫಿ, ರೋಸ್  ಕಾಫಿ, ಫಿಲ್ಟರ್ ಕಾಫಿ  ಹೀಗೆ ಹಲವು ರೀತಿಯ ಕಾಫಿಗಳಿವೆ. ಆದರೆ ಕಾರ್ನ್ (ಜೋಳ) ಕಾಫಿ ಮಾಡೋದನ್ನು ನೀವು ನೋಡಿದ್ದೀರಾ?  ಇಂತಹ ಕಾಫಿಯ ಹೆಸರನ್ನು ನೀವು ಈಗ ಮೊದಲ ಬಾರಿಗೆ ಕೇಳಿರಬೇಕು. ಇದೀಗ ವಿಲಕ್ಷಣ ಆಹಾರ, ಪಾನೀಯ ತಯಾರಿಸುವ  ವಿಡಿಯೊ ಸೋಶಿಯಲ್  ಮೀಡಿಯಾದಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡುತ್ತದೆ. ಅಂತಹದ್ದೇ ವಿಡಿಯೊ ಇಲ್ಲಿದೆ. ವ್ಯಕ್ತಿಯೊಬ್ಬರು ಹಾಲು, ಸಕ್ಕರೆ ಹಾಕಿ ತಯಾರಿಸಿದ ಕಾಫಿಗೆ ಕಾರ್ನ್ ಹಾಕಿ ಸವಿಯುವ ವಿಡಿಯೊವೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ (Viral Video).

ಕೆಲ ದಿನಗಳ ಹಿಂದೆಯಷ್ಟೇ  ಜಾಮೂನು  ಇರಿಸಿ ಪರೋಟಾ, ಓರಿಯೋ ವೈನ್ , ಪಾನ್ ಆಮ್ಲೆಟ್ ಇತ್ಯಾದಿ ಹಲವು ವಿಲಕ್ಷಣ ಆಹಾರ ತಯಾರಿಸುವ ವಿಡಿಯೊ ನೆಟ್ಟಿಗರಿಗೆ ಅಚ್ಚರಿ ಹುಟ್ಟಿಸಿತ್ತು. ಇದೀಗ ಕಾರ್ನ್ ಹಾಕಿ ಕಾಫಿ ತಯಾರಿಸಿದ ವಿಡಿಯೊ ಕೂಡ ನೋಡುಗರನ್ನು ಅಚ್ಚರಿ ‌ಪಡಿಸಿದೆ. ಸಿಂಗಾಪುರದ ವ್ಯಕ್ತಿಯೊಬ್ಬರು ಕಾರ್ನ್ ಕಾಫಿ ಮಾಡಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಉಂಟು ಮಾಡಿದೆ. ವ್ಯಕ್ತಿಯೊಬ್ಬರು ತಯಾರಿಸಿದ ಒಂದು ಕಪ್  ಕಾಫಿಗೆ ಒಂದು ಚಮಚ ಸ್ವೀಟ್ ಕಾರ್ನ್ ಅನ್ನು ಬೆರೆಸಿ ಕಾಫಿ ಸವಿಯುವ ವಿಡಿಯೊ ಇದಾಗಿದೆ.

ಹಾಲು, ಸಕ್ಕರೆ ಹಾಕಿ ತಯಾರಿಸಿದ ಕಾಫಿಗೆ ಕಾರ್ನ್ ಹಾಕಿ ಈ ವ್ಯಕ್ತಿ ಸವಿದಿದ್ದಾರೆ. foodmakescalhappy ಅನ್ನುವ  ಇನ್ಸ್ಟಾಗ್ರಾಮ್  ಖಾತೆಯಲ್ಲಿ  ಈ‌ ಕಾಫಿ‌ ಮಾಡುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ವಿಡಿಯೊ  ವೈರಲ್ ಆಗಿದ್ದು ಲಕ್ಷಕ್ಕೂ  ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 

ಸಾಮಾನ್ಯವಾಗಿ  ಕಾಫಿಗೆ  ಏಲಕ್ಕಿ ಮತ್ತು ಶುಂಠಿಯನ್ನು ಸೇರಿಸಿ ಕುಡಿಯುತ್ತೇವೆ. ಆದರೆ ಕಾಫಿಗೆ ಕಾರ್ನ್ ಹಾಕಿ‌ ಬೆರೆಸಿ  ಸವಿಯುದು ಹೊಸದು. ಕಾರ್ನ್ ಕಾಫಿ ತಯಾರಿಸಲು  ದೊಡ್ಡ ಕೆಲಸವೇನು ಅಲ್ಲ‌. ಆದರೆ ಕಾಫಿಗೆ  ಕಾರ್ನ್ ಸೇರಿಸಿ ಕುಡಿಯುವ ಈ ವಿಲಕ್ಷಣತೆ  ಪಾನೀಯ ಬಗ್ಗೆ ನೆಟ್ಟಿಗರು  ಪ್ರತಿ‌ಕ್ರಿಯೆ  ನೀಡುವಂತೆ  ಮಾಡಿದೆ. ಈ ವಿಡಿಯೊ ನೋಡಿದ ಜನರು ತಾವೂ ಈ ಕಾಫಿ ತಯಾರಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು  ಈ ಕಾಫಿ ಯನ್ನು ನಾನು  ಟ್ರೈ ಮಾಡಿಯೇ ಮಾಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರರು ಇದು ನೋಡಲು ನಿಜವಾಗಿಯೂ ಚೆನ್ನಾಗಿ ಕಾಣುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನು ಓದಿ:‌Viral Video: ಬಿಬಿಎಂಪಿ ನಿರ್ಲಕ್ಷ್ಯ; 83ರ ಇಳಿ ವಯಸ್ಸಿನಲ್ಲಿ ಬೀದಿ ಕಸ ಗುಡಿಸುವ ಅಜ್ಜ: ವಿಡಿಯೊ ವೈರಲ್