ಜಮ್ಮು: ಅಮರನಾಥ್ ಯಾತ್ರೆ ಸೋಮವಾರದಿಂದ ಆರಂಭವಾಗಿದ್ದು ಆನ್‍ಲೈನ್ ಆರತಿ, ವರ್ಚುಯಲ್ ದರ್ಶನಕ್ಕೆ ಆದ್ಯತೆ ನೀಡಲಾಗಿದೆ. ಆಗಸ್ಟ್ 22ರವರೆಗೂ ಅಮರನಾಥ ಯಾತ್ರೆ ಚಾಲ್ತಿಯಲ್ಲಿರಲಿದೆ. ಭಕ್ತಾಧಿಗಳು ನೇರವಾಗಿ ಪವಿತ್ರ ಯಾತ್ರೆಗೆ ಬರುವುದನ್ನು ನಿಷೇಧಿಸಲಾಗಿದೆ.
ಪ್ರತಿದಿನ ಬೆಳಗ್ಗೆ 6 ಗಂಟೆ ಮತ್ತು ಸಂಜೆ 5 ಗಂಟೆಗೆ ಆರತಿಯನ್ನು ಆನ್‍ಲೈನ್ ಮೂಲಕ ದರ್ಶನ ಮಾಡ ಲಾಗುವುದು. ವೆಬ್‍ಸೈಟ್‍ನಲ್ಲಿ ತಲಾ ಅರ್ಧಗಂಟೆ ಆನ್‍ಲೈನ್ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅಮರನಾಥ ಶೈರಿನ್ ಮಂಡಳಿಯ ಸಿಇಒ ತಿಳಿಸಿದ್ದಾರೆ.
ಕೋವಿಡ್ ಕಾರಣದಿಂದಾಗಿ ಕಳೆದ ವರ್ಷ ಅಮರನಾಥ ಯಾತ್ರೆ ರದ್ದುಗೊಳಿಸಲಾಗಿತ್ತು, ಈ ವರ್ಷ ನೇರವಾಗಿ ಯಾತ್ರೆಗೆ ಅವಕಾಶ ಕಲ್ಪಿಸದೆ ಆನ್‍ಲೈನ್ ಮೂಲಕವೇ ದರ್ಶನ ಮತ್ತು ಆರತಿ ಪಡೆಯಲು ಅವಕಾಶ ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪೂಜೆ ಮಾಡುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು.