Thursday, 12th December 2024

369 ಅಡಿ ಎತ್ತರದ ‘ವಿಶ್ವ ಸ್ವರೂಪಂ’ ಶಿವ ಪ್ರತಿಮೆ ಅನಾವರಣ ಇಂದು

ಜೈಪುರ: ರಾಜಸ್ಥಾನದ ರಾಜ್‌ಸಮಂದ್‌ ಜಿಲ್ಲೆಯ ನಾಥದ್ವಾರದಲ್ಲಿ ನಿರ್ಮಾಣ ಗೊಂಡಿರುವ 369 ಅಡಿ ಎತ್ತರದ ‘ವಿಶ್ವ ಸ್ವರೂಪಂ’ ಶಿವ ಪ್ರತಿಮೆಯನ್ನು ಶನಿವಾರ ಅನಾವರಣಗೊಳಿಸಲಾಗುತ್ತದೆ. ಇದು ವಿಶ್ವದ ಅತೀ ಎತ್ತರದ ಪ್ರತಿಮೆ ಎಂದು ಹೇಳಲಾ ಗಿದೆ.

ಆಧ್ಯಾತ್ಮಿಕ ನಾಯಕ ಮೊರಾರಿ ಬಾಪು, ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಮತ್ತು ವಿಧಾನಸಭೆಯ ಸ್ಪೀಕರ್‌ ಸಿ.ಪಿ.ಜೋಶಿ ಸಮ್ಮುಖದಲ್ಲಿ ಪತ್ರಿಮೆ ಅನಾವರಣಗೊಳ್ಳಲಿದೆ.

ಅ.29ರಿಂದ ನ.6ರವರೆಗೆ 9 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ’ ಎಂದು ತತ್‌ ಪದಮ್‌ ಸಂಸ್ಥಾನ ಟ್ರಸ್ಟಿ ಮದನ್‌ ಪಾಲಿವಾಲ್‌ ತಿಳಿಸಿದ್ದಾರೆ.

ಧ್ಯಾನಸ್ಥ ರೂಪದಲ್ಲಿರುವ ಪ್ರತಿಮೆ ಉದಯ್‌ಪುರದಿಂದ 45 ಕಿಲೋಮೀಟರ್‌ ದೂರ ದಲ್ಲಿದ್ದು, ತತ್‌ ಪದಮ್‌ ಸಂಸ್ಥಾನ ಇದನ್ನು ನಿರ್ಮಿಸಿದೆ. ಪ್ರತಿಮೆಯು 20 ಕಿ.ಮೀ ದೂರ ದವರೆಗೆ ಗೋಚರಿಸುತ್ತದೆ. ಇದರ ನಿರ್ಮಾಣಕ್ಕೆ ಮೂರು ಸಾವಿರ ಟನ್‌ ಉಕ್ಕು ಮತ್ತು ಕಬ್ಬಿಣ, 2.5 ಲಕ್ಷ ಕ್ಯೂಬಿಕ್ ಟನ್‌ ಕಾಂಕ್ರಿಟ್‌ ಮತ್ತು ಮರಳು ಬಳಕೆಯಾಗಿದೆ.