Sunday, 15th December 2024

ಗುಜರಾತ್ ವಾಂಕಾನೇರ್ ಶಾಸಕ ದಿಗ್ವಿಜಯ್ ಸಿನ್ಹ್ ಝಲ ನಿಧನ

ಅಹಮದಾಬಾದ್: ಕೇಂದ್ರದ ಪರಿಸರ ಖಾತೆ ಸಚಿವ, ಗುಜರಾತ್ ವಾಂಕಾನೇರ್ ಶಾಸಕ ದಿಗ್ವಿಜಯ್ ಸಿನ್ಹ್ ಝಲ(88) ಅವರು ಭಾನುವಾರ ನಿಧನರಾದರು.

ವಂಕಾನೇರ್ ಕ್ಷೇತ್ರದ ಶಾಸಕರಾಗಿದ್ದ ದಿಗ್ವಿಜಯ್ ಅವರು 1932ರ ಆಗಸ್ಟ್ 20ರಂದು ರಂಜಿತ್ ವಿಲಾಸ್ ಅರಮನೆಯಲ್ಲಿ ಜನಿಸಿ ದರು. ವಾಂಕನೇರ್ ಪ್ರಾಂತ್ಯದ ಕ್ಯಾಪ್ಟನ್ ಮಹಾರಾಣ ರಾಜಶ್ರೀ ಪ್ರತಾಪ್ ಸಿನ್ಹಜಿ ಸಾಹಿಬ್ ಹಾಗೂ ಸಿಸೋಡಿಜಿ ಮಹಾರಾಣಿ ರಾಮ ಕುಮಾರಿ ಸಾಹಿಬಾ ಅವರ ಹಿರಿಯ ಪುತ್ರರು. ದಿಗ್ವಿಜಯ್ ಅವರು ಕೇಂಬ್ರಿಜ್ ವಿವಿಯಿಂದ ಪದವಿ, ದೆಹಲಿ ವಿವಿಯ ಸೈಂಟ್ ಸ್ಟೀಫನ್ ಕಾಲೇಜಿನಿಂದ ಸ್ನಾತಕೋತ್ತರ ಪದವಿ ಪಡೆದರು.

ಕಾಂಗ್ರೆಸ್ ಮೂಲಕ ರಾಜಕೀಯ ರಂಗ ಪ್ರವೇಶಿಸಿದ ದಿಗ್ವಿಜಯ್ ಅವರು 1962ರಲ್ಲಿ ವಾಂಕನೇರ್ ಶಾಸಕರಾದರು. ನಂತರ 80ರ ದಶಕದಲ್ಲಿ ಸುರೇಂದ್ರ ನಗರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಎರಡು ಬಾರಿ ಪರಿಸರ ಸಮಸ್ಯೆಗಳ ಕುರಿತು ಭಾಷಣ ಮಾಡಿದ್ದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily