Saturday, 14th December 2024

ದುಬಾರಿ ವಾಚ್‌ಗಳ ಕಳ್ಳಸಾಗಣೆ: ಓರ್ವನ ಬಂಧನ

ನವದೆಹಲಿ: ದುಬೈನಿಂದ ದುಬಾರಿ ವಾಚ್‌ಗಳ ಕಳ್ಳಸಾಗಣೆ ಮಾಡಲು ಯತ್ನಿಸಿದ ಪ್ರಯಾಣಿಕನೊಬ್ಬನನ್ನು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಏಳು ಕೈಗಡಿಯಾರಗಳು, 27 ಕೋಟಿ ಮೌಲ್ಯದ ʻಜಾಕೋಬ್ ಆಯಂಡ್ ಕೋʼ ವಜ್ರಖಚಿತ ಬಿಳಿ ಚಿನ್ನದ ವಾಚ್‌ ಮತ್ತು ಐಫೋನ್ 14 ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿ ದ್ದಾರೆ.

ಇವುಗಳ ಒಟ್ಟು ಮೌಲ್ಯ ₹28.17 ಕೋಟಿ ಎಂದು ಅಂದಾಜಿಸಲಾಗಿದೆ.

ಉತ್ಪನ್ನಗಳ ಮೇಲಿನ ತೆರಿಗೆ ಮತ್ತು ಸುಂಕ ತಪ್ಪಿಸಲು ಕಳ್ಳಸಾಗಣೆ ಮಾಡಲಾಗುತ್ತಿದೆ. ಅಮೆರಿಕದ ಆಭರಣ ವ್ಯಾಪಾರಿ ಮತ್ತು ವಾಚ್‌ಮೇಕರ್ ಜಾಕೋಬ್ ಆಂಡ್ ಕಂಪನಿ ತಯಾರಿಸಿದ ವಾಚ್ ಚಿನ್ನದಿಂದ ಮಾಡಲ್ಪಟ್ಟಿದ್ದು ವಜ್ರದ ಹರಳುಗಳನ್ನು ಹೊಂದಿ ರುವುದಾಗಿ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.