Sunday, 15th December 2024

ನೀರಿನ ಟ್ಯಾಂಕರ್’ಗೆ ಖಾಸಗಿ ಬಸ್ ಡಿಕ್ಕಿ: ಏಳು ಮಂದಿಗೆ ಗಾಯ

ಮುಂಬೈ : ವಾಶಿಮ್‌ನ ಅಕೋಲಾ ನಾಕಾ ಪ್ರದೇಶದ ಹೋಟೆಲ್ ಈವೆಂಟ್ಸ್ ಬಳಿ ಗುರುವಾರ ಅಪಘಾತ ಸಂಭವಿಸಿದೆ.

ಪುಣೆಯಿಂದ ಯವತ್ಮಾಲ್ ಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಸಮೃದ್ಧಿ ಹೆದ್ದಾರಿಯಲ್ಲಿ ನೀರಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿದೆ.

ನೀರಿನ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಟ್ಯಾಂಕರ್ ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಟ್ಯಾಂಕರ್ ನ ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತ ಪಟ್ಟಿದ್ದು, ಇತರ ಏಳು ಜನರು ಗಾಯಗೊಂಡಿದ್ದಾರೆ.

ನೀರಿನ ಟ್ಯಾಂಕರ್ ನಲ್ಲಿದ್ದ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ. ಗಾಯಗೊಂಡವರನ್ನು ಜಿಲ್ಲಾ ಜನರಲ್ ಆಸ್ಪತ್ರೆಗೆ ಕರೆದೊಯ್ಯ ಲಾಯಿತು. ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಾಶಿಮ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಕೋಲಾಗೆ ಸ್ಥಳಾಂತರಿಸಲಾಗುವುದು.