ಅಮೃತಸರ: ಅಂತಾರಾಜ್ಯ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ (Weapons Smuggling) ದಂಧೆಯನ್ನು ಪಂಜಾಬ್ ಪೊಲೀಸರು ( Punjab Police) ಭೇದಿಸಿದ್ದಾರೆ. ಕಾರ್ಯಾಚರಣೆಯಲ್ಲಿ 7 ಮಂದಿಯನ್ನು ಅರೆಸ್ಟ್ ಮಾಡಲಾಗಿದ್ದು, ಬಂಧಿತರಿಂದ 12 ಪಿಸ್ತೂಲ್, 16 ಮ್ಯಾಗಜಿನ್ ಮತ್ತು 23 ಲೈವ್ ಕಾರ್ಟ್ರಿಡ್ಜ್‌ಗಳನ್ನು ಸೀಜ್ ಮಾಡಲಾಗಿದೆ. ಈ ಗ್ಯಾಂಗ್ ಅಕ್ರಮವಾಗಿ ಶಸ್ತ್ರಾಸ್ತ್ರವನ್ನು ಕಳ್ಳ ಸಾಗಣೆ ಮಾಡುತ್ತಿತ್ತು ಎನ್ನಲಾಗಿದೆ.
ಬಂಧಿತರನ್ನು ಅಮೃತಸರದ ಚೆಹರ್ತಾ ನಿವಾಸಿಗಳಾದ ಕರಂಜೀತ್ ಸಿಂಗ್ ಅಲಿಯಾಸ್ ಧನ್ನಿ, ಜಶನ್‌ದೀಪ್ ಸಿಂಗ್ ಅಲಿಯಾಸ್ ಮಾಯಾ ಚಿಲ್ಲಾರ್, ಇಶ್ಮೀತ್ ಸಿಂಗ್ ಅಲಿಯಾಸ್ ರಿಶು, ಅಮೃತಪಾಲ್ ಸಿಂಗ್ ಅಲಿಯಾಸ್ ಸ್ಪುರ ಮತ್ತು ದಿಲ್‌ಪ್ರೀತ್ ಸಿಂಗ್ ಅಲಿಯಾಸ್ ದಿಲ್ ಎಂದು ಗುರುತಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮುಖ್ಯಸ್ಥ ಗೌರವ್ ಯಾದವ್ ಶುಕ್ರವಾರ ತಿಳಿಸಿದ್ದಾರೆ.
In a major breakthrough, Amritsar Commissionerate Police has dismantled an interstate illegal weapons smuggling module linked to USA-based Dilpreet Singh, apprehending seven operatives and seizing 12 pistols, 16 magazines, and 23 live cartridges.
— DGP Punjab Police (@DGPPunjabPolice) October 31, 2024
Preliminary investigations… pic.twitter.com/L1Oy5bjZUN
ಮಧ್ಯಪ್ರದೇಶದಿಂದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಇವರು ವಿವಿಧ ಗ್ಯಾಂಗ್‌ಗಳಿಗೆ ಅಕ್ರಮವಾಗಿ ಶಸ್ತ್ರಾಸ್ತ್ರವನ್ನು ನೀಡುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ. ಆರೋಪಿ ಧನ್ನಿ ಹಾಗೂ ಸಹೋದರ ಜಶಾಂದೀಪ್ ಮತ್ತು ಇಶ್ಮೀತ್ ಮಧ್ಯಪ್ರದೇಶದಿಂದ ಶಸ್ತ್ರಾಸ್ತ್ರಗಳನ್ನು ತಂದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅರೋಪಿಗಳಿಗೆ ಯುಎಸ್ಎ ಮೂಲದ ಅಕ್ರಮ ಶಸ್ತ್ರಾಸ್ತ್ರ ಸಾಗಾಟಗಾರ ದಿಲ್ಪ್ರೀತ್ ಸಿಂಗ್ ಕುಮ್ಮಕ್ಕು ನೀಡಿದ್ದ ಎಂಬುದು ತನಿಖೆ ವೇಳೆ ಬಯಲಾಗಿದೆ.
ಇದನ್ನೂ ಓದಿ : Social Media: ಕೃತಕ ಬುದ್ಧಿಮತ್ತೆ ಸಾಮರ್ಥ್ಯ ವರ್ಧನೆಗೆ ಸೋಶಿಯಲ್ ಮೀಡಿಯಾಗಳಿಂದ ಮಾಹಿತಿ ಕಳ್ಳತನ
ಮಧ್ಯಪ್ರದೇಶದಿಂದ ರಾಜ್ಯಕ್ಕೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರ ತಂಡಗಳು ಚೆಹರ್ತಾ ಮತ್ತು ಬಾಬಾ ಬಕಲಾ ಪ್ರದೇಶದಿಂದ ಆರೋಪಿಗಳನ್ನು ವಶಕ್ಕೆ ಪಡೆದಿವೆ.
ಇತ್ತೀಚೆಗೆ ಮಧ್ಯಪ್ರದೇಶದಿಂದ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ಐದು ಪಿಸ್ತೂಲ್‌ಗಳು ಮತ್ತು ಎರಡು ಮ್ಯಾಗಜಿನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಂಧಿತರನ್ನು ಗುರ್ಮೀತ್ ಸಿಂಗ್, ರೋಷನ್ ಲಾಲ್ ಮತ್ತು ಅಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಫರೀದ್‌ಕೋಟ್ ಎಸ್‌ಎಸ್‌ಪಿ ಪ್ರಜ್ಞಾ ಜೈನ್ ಮಾತನಾಡಿ, ರೋಷನ್ ಲಾಲ್ ವಿರುದ್ಧ ಈಗಾಗಲೇ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 14 ಕೊಲೆ, ಕಳ್ಳತನ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದರು.