Sunday, 15th December 2024

ಪ.ಬಂಗಾಳದಲ್ಲಿ ಬಿಎಫ್.7 ನಾಲ್ಕು ಹೊಸ ಪ್ರಕರಣ ಪತ್ತೆ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಕೋವಿಡ್ 19 ಓಮಿಕ್ರಾನ್ ಉಪ ತಳಿಯಾದ ಬಿಎಫ್.7 ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿವೆ.

ಆರಂಭದಲ್ಲಿ ಗುಜರಾತ್, ಓಡಿಶಾ ಭಾಗದಲ್ಲಿ ಕಾಣಿಸಿಕೊಂಡಿದ್ದ ಈ ರೂಪಾಂತರಿ ವೈರಸ್ ಇದೀಗ ಪಶ್ಚಿಮ ಬಂಗಾಳ ರಾಜ್ಯಕ್ಕೂ ಕಾಲಿಟ್ಟಿದೆ.

ಪಶ್ಚಿಮ ಬಂಗಾಳದಲ್ಲಿ ನಾಲ್ಕು ಬಿಎಫ್. 7 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ವಿಶೇಷವೆಂದರೆ ನಾಲ್ಕು ಮಂದಿ ಒಂದೇ ಕುಟುಂಬದ ಸದಸ್ಯರಾಗಿದ್ದಾರೆ. ಇಡಿ ಕುಟುಂಬವೇ ಇತ್ತೀಚೆಗೆ ಅಮೆರಿಕಕ್ಕೆ ತೆರಳಿ ವಾಪಾಸ್ ರಾಜ್ಯಕ್ಕೆ ಮರಳಿದ್ದರು. ಈ ಹಿನ್ನೆಲೆ ಯಲ್ಲಿ ಅವರು ಬಿಎಫ್. 7 ತಗುಲಿರಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮೆರಿಕದಿಂದ ಒಂದು ಕುಟುಂಬ ನಾಲ್ವರು ಬಂದಿಳಿಯುತ್ತಿದ್ದಂತೆ ಕೋವಿಡ್ ತಪಾಸಣೆ ನಡೆಸಲಾಯಿತು. ಈ ವೇಳೆ ವಿದೇಶಿ ಪ್ರಜೆಗಳು ಸೇರಿದಂತೆ ಇಬ್ಬರು ಅಂತಾ ರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ 19 ಇರುವುದು ದೃಢವಾಯಿತು.

ಆಸ್ಟ್ರೇಲಿಯಾದಿಂದ ಬಂದಿದ್ದ ವಿದೇಶಿ ಪ್ರಜೆಗಳು ಬಿಹಾರದ ಬೋಧಗಯಾಗೆ ಹೋಗುತ್ತಿದ್ದರು. ಸೋಂಕು ಪತ್ತೆಯಾದ ಹಿನ್ನೆಲೆ ಯಲ್ಲಿ ಅವರನ್ನು ಕೋಲ್ಕತ್ತಾದ ಸಾಂಕ್ರಾಮಿಕ ರೋಗಗಳು ಮತ್ತು ಬಿಜಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Read E-Paper click here