ಗ್ರೂಪ್‌ಗಳ ಸದಸ್ಯರು ಪೋಸ್ಟ್ ಮಾಡಿದ ಆಕ್ಷೇಪಾರ್ಹ ವಿಷಯಗಳಿಗೆ ವಾಟ್ಸಾಪ್ ಗ್ರೂಪ್ ನಿರ್ವಾ ಹಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂಬ ಬಾಂಬೆ ಹೈಕೋರ್ಟ್‌ನ ತೀರ್ಮಾನವನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಪುನರುಚ್ಚರಿಸಿದೆ.
ಆದಾಗ್ಯೂ, ಅಪರಾಧದಲ್ಲಿ ನಿರ್ವಾಹಕರು ಭಾಗಿಯಾಗಿದ್ದಾರೆಂದು ತೋರಿಸುವ ಮತ್ತೊಂದು ವಿಷಯವನ್ನು ಸಂಗ್ರಹಿಸಿದರೆ, ಅವರನ್ನು ಕಾನೂನಿನ ಪ್ರಕಾರ ವಿಚಾರಣೆಗೆ ಒಳಪಡಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರು ಕೇವಲ ವಾಟ್ಸಾಪ್ ಗ್ರೂಪ್‌ನ ನಿರ್ವಾಹಕರು. ಗುಂಪಿನ ಸದಸ್ಯರು ಕಳುಹಿಸುವ ಸಂದೇಶಗಳಿಗೆ ಅವರು ಜವಾಬ್ದಾರರಾಗಿರುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ದೂರುದಾರರ ಪ್ರಕಾರ, ಅರ್ಜಿದಾರರು ಪ್ರಾಮಾಣಿಕತೆಯ ಕೊರತೆ ಹೊಂದಿದ್ದು, ಸದಸ್ಯರನ್ನು ಮೊದಲು ಗ್ರೂಪ್‌ನಿಂದ ತೆಗೆದು ನಂತರ ಮತ್ತೆ ಸೇರಿಸಿ ದಾಗಿನಿಂದ ಗ್ರೂಪ್ ಅಡ್ಮಿನ್ ಮತ್ತು ಸದಸ್ಯರ ನಡುವೆ ಪಿತೂರಿ ನಡೆದಿದೆ ಎಂದು ಆರೋಪಿಸಲಾಗಿತ್ತು.