Wednesday, 25th December 2024

WhatsApp Features: ಹೊಸ ವರ್ಷಕ್ಕೆ ಭರ್ಜರಿ ಕೊಡುಗೆ! ಜ.3ರವರೆಗೆ ವಾಟ್ಸಾಪ್‌ನಲ್ಲಿ ಫೆಸ್ಟಿವಲ್ ಥೀಮ್‌ ಫೀಚರ್ಸ್‌ ಫ್ರೀ… ಫ್ರೀ…

whatsapp

ನವದೆಹಲಿ: ಹೊಸ ವರ್ಷದ ತಯಾರಿಯ ಸಂಭ್ರಮ  ಜೋರಾಗಿದೆ. ಈ ನಡುವೆ WhatsApp ತನ್ನ ಬಳಕೆದಾರರಿಗೆ ಹೊಸ ವರ್ಷದ  ವಿಶೇಷ  ಕೊಡುಗೆ ಘೋಷಿಸಿದೆ (WhatsApp Features) ಬಳಕೆದಾರರು  ತಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸಲು ಹೊಸ ವರ್ಷದ ಸಂಭ್ರಮ ಡಬಲ್ ಮಾಡಲು ವಾಟ್ಸಾಪ್‌ ಫೆಸ್ಟಿವಲ್ ಥೀಮ್‌ನಲ್ಲಿ ಕೆಲವೊಂದು  ಫೀಚರ್‌ ಅನ್ನು ಘೋಷಣೆ ಮಾಡಿದೆ. ಈ ಸೌಲಭ್ಯ  ಡಿ.20 ರಿಂದ ಜನವರಿ 3ರವರೆಗೆ ಉಚಿತವಾಗಿ ಲಭ್ಯವಿದೆ.

ಯಾವೆಲ್ಲ  ಫೀಚರ್ಸ್ ಇರಲಿದೆ?

  • ಹೊಸ ವರ್ಷದ ಸಂಭ್ರಮ ಹೆಚ್ಚಿಸಿಕೊಳ್ಳಲು ಬಳಕೆದಾರರು  WhatsApp ವಿಡಿಯೊ ಕರೆಗಳಿಗೆ ವಿಶೇಷ ಫಿಲ್ಟರ್‌ಗಳು ಮತ್ತು ಎಫೆಕ್ಟ್‌ಗಳನ್ನು ಸೇರಿಸುವ ಆಫರ್ ನೀಡಲಿದೆ.
  • ವಾಟ್ಸ್​​ಆ್ಯಪ್​​ ಕೆಲವು ಹೊಸ ವರ್ಷದ ಥೀಮ್‌ಗೆ ಮ್ಯಾಚ್  ಆಗುವ ಅವತಾರ್ ಸ್ಟಿಕ್ಕರ್, ಕ್ಯುರೇಟೆಡ್ ನ್ಯೂ ಇಯರ್ಸ್ ಈವ್ (NYE) ಸ್ಟಿಕ್ಕರ್ ಪ್ಯಾಕ್ ಹಂಚಿಕೊಳ್ಳುವ ಅವಕಾಶ ನೀಡಿದೆ.
  • ಬಳಕೆದಾರರು  ಹೊಸ ವರ್ಷದ ಶುಭಾಶಯ ಸಂದೇಶಗಳನ್ನು ಕಳುಹಿಸಲು ಹೊಸ NYE ಸ್ಟಿಕ್ಕರ್  ಮತ್ತು ಅವತಾರ್ ಸ್ಟಿಕ್ಕರ್‌ಗಳನ್ನು  ತಮ್ಮ ಪ್ರೀತಿ ಪಾತ್ರರಿಗೆ  ಶೇರ್ ಮಾಡಬಹುದು.
  • WhatsApp ಬಳಕೆದಾರರು ಹೊಸ ವರ್ಷದ  ಹಬ್ಬದ ಸಂಭ್ರಮ ಹೆಚ್ಚಿಸಲು  ಎಮೋಜಿಯೊಂದಿಗೆ  ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಹುದು. ಇತರ ಬಳಕೆದಾರರು ಈ  ಸಂದೇಶವನ್ನು ಅನಿಮೇಟೆಡ್ ಸ್ವರೂಪದಲ್ಲಿ ವೀಕ್ಷಿಸಬಹುದು.

ಅಪ್ಡೇಟ್‌ ಮಾಡಬೇಕು

ಈ ಎಲ್ಲಾ ವೈಶಿಷ್ಟ್ಯ ಪಡೆದುಕೊಳ್ಳಲು  ಬಳಕೆದಾರರು  iOS ಸಾಧನಗಳಿಗೆ ಆಪ್ ಸ್ಟೋರ್‌ನಿಂದ ಮತ್ತು Android ಬಳಕೆದಾರರು ಪ್ಲೇ ಸ್ಟೋರ್‌ನಿಂದ WhatsApp ಅಪ್‌ಡೇಟ್ ಮಾಡಿಕೊಳ್ಳುವ ಮೂಲಕ ಈ ಸೌಲಭ್ಯ ಪಡೆದುಕೊಳ್ಳಬಹುದು. ಇನ್ನು ಜನವರಿ 1 ಹೊಸ ವರ್ಷದಿಂದ, ಆಂಡ್ರಾಯ್ಡ್ KitKat ಮತ್ತು ಹಳೆಯ ಆವೃತ್ತಿ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್​ಆ್ಯಪ್ ಅಪ್ಲಿಕೇಶನ್ ರದ್ದು ಆಗಲಿದೆ ಎನ್ನುವ ಮಾಹಿತಿಯನ್ನು WhatsApp ಸಂಸ್ಥೆ ನೀಡಿದೆ. ಹಾಗಾಗಿ  ಜನವರಿ 1 ರಿಂದ ವಾಟ್ಸ್​ಆ್ಯಪ್ ಬಳಕೆ ಮಾಡಲು ಬಳಕೆದಾರರು  ಹೊಸ ವರ್ಷನ್​ಗೆ ಫೋನ್‌ ಅನ್ನು ಅಪ್‌ಗ್ರೇಡ್ ಮಾಡಬೇಕಾಗುತ್ತದೆ.

ಇದನ್ನು ಓದಿ:ವಾಟ್ಸ್’ಆ್ಯಪ್‌ನ ಹೊಸ ಗೌಪ್ಯತೆ ನೀತಿ: ಬದಲಾವಣೆ, ಏಕೆ?