ಪಟ್ನಾ: ಕೋವಿಡ್ ಎರಡನೆಯ ಹೆಣಗಳ ರಾಶಿಯೇ ಬೀಳುತ್ತಿರುವ ನಡುವೆಯೇ ಸದ್ದಿಲ್ಲದೇ ಬ್ಲ್ಯಾಕ್ ಫಂಗಸ್(ಕಪ್ಪು ಶಿಲೀಂಧ್ರ) ಬೃಹದಾಕಾರ ತಳೆಯುಯ ಮುನ್ಸೂಚನೆ ನೀಡುತ್ತಿದ್ದು, ಈ ಬೆನ್ನಲ್ಲೇ ವೈಟ್ ಫಂಗಸ್(ಬಿಳಿ ಶಿಲೀಂಧ್ರ) ಪತ್ತೆಯಾಗಿದೆ.
ಬಿಹಾರದ ಪಟ್ನಾದಲ್ಲಿ ನಾಲ್ವರಲ್ಲಿ ವೈಟ್ ಫಂಗಸ್ ಪತ್ತೆಯಾಗಿದೆ. ಏಕೆಂದರೆ ವೈಟ್ ಫಂಗಸ್ ಬ್ಲ್ಯಾಕ್ ಫಂಗಸ್ ಕ್ಕಿಂತಲೂ ಅತಿ ಹೆಚ್ಚು ಅಪಾಯಕಾರಿ ಎನ್ನಲಾಗುತ್ತಿದೆ.
ಈ ನಾಲ್ವರನ್ನು ಎಚ್ಆರ್ ಸಿಟಿ ಸ್ಕ್ಯಾನ್ ಮಾಡಿಸಿದಾಗವೈಟ್ ಫಂಗಸ್ ಪತ್ತೆಯಾಗಿದೆ. ಇದು ಶ್ವಾಸಕೋಶ, ಚರ್ಮ, ಮೂತ್ರ ಪಿಂಡ, ಮೆದುಳು, ಬಾಯಿ ಹಾಗೂ ದೇಹದ ಇತರ ಅಂಗಾಂಗಗಳ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ.
ಬ್ಲ್ಯಾಕ್ ಫಂಗಸ್ ನಂತೆಯೇ ಮಧುಮೇಹಿಗಳಲ್ಲಿ, ಕರೋನಾದಿಂದ ಗುಣಮುಖರಾಗುತ್ತಿರುವವರಲ್ಲಿಯೇ ಈ ವೈಟ್ ಫಂಗಸ್ ಕೂಡ ಪತ್ತೆಯಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.