Sunday, 15th December 2024

ಗೋಣಿ ಚೀಲದಲ್ಲಿ ಮುಸುಕು ಧರಿಸಿದ್ದ ಮಹಿಳೆಯ ಮೃತದೇಹ ಪತ್ತೆ

ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಪರ್ತಾಪುರ್ ಪ್ರದೇಶದಲ್ಲಿ ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಬೀದಿ ನಾಯಿಗಳು ಶವವನ್ನು ತಿನ್ನಲು ಯತ್ನಿಸಿದಾಗ ಮೃತದೇಹ ಇರುವುದು ಪತ್ತೆಯಾಗಿದೆ.

ಮಹಿಳೆಯ ಶವ ಕಾಶಿ ಗ್ರಾಮದ ಕೊಳದ ಬಳಿ ಪತ್ತೆಯಾಗಿದೆ. ಶವವನ್ನು ಗುರುತಿಸಲು ಪೊಲೀಸ ರಿಗೆ ಸಾಧ್ಯವಾಗಿಲ್ಲ. ಆಕೆಯನ್ನು ಬೇರೆ ಕಡೆ ಕೊಂದು ಶವವನ್ನು ಗ್ರಾಮದಲ್ಲಿ ಎಸೆದು ಹೋಗಿರಬ ಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸ ಲಾಗಿದೆ.

ಬೀದಿ ನಾಯಿಗಳು ಶವವನ್ನು ಎಳೆದುಕೊಂಡು ಹೋಗಿ ತಿನ್ನಲು ಯತ್ನಿಸುತ್ತಿರುವುದನ್ನು ಕಂಡು ಗ್ರಾಮಸ್ಥರಿಗೆ ಗೋಣಿ ಚೀಲದ ಬಗ್ಗೆ ಅನುಮಾನ ಮೂಡಿದೆ.

ಗ್ರಾಮಸ್ಥರು ಚೀಲವನ್ನು ತೆರೆದಾಗ ಮುಸುಕು ಧರಿಸಿದ್ದ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿದ ನಂತರ ಎಎಸ್ಪಿ(ಬ್ರಹ್ಪುರಿ) ವಿವೇಕ್ ಯಾದವ್ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.