ಜಮ್ಮು: ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಮಹಿಳಾ ಒಳನುಸುಳು ಕೋರಳನ್ನು ಬಿಎಸ್ಎಫ್ ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಡಿ ಭದ್ರತಾ ಪಡೆ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಎಸ್ಪಿಎಸ್ ಸಂಧು ಮಾತ ನಾಡಿ, ಭಾನುವಾರ ರಾತ್ರಿ ಆರ್ಎಸ್ ಪುರ ಸೆಕ್ಟರ್ನಲ್ಲಿ ಅಲರ್ಟ್ ಪಡೆಗಳು ಒಳನುಗ್ಗುವವರನ್ನು ತಟಸ್ಥಗೊಳಿಸಿದವು. ‘ಬಿಎಸ್ಎಫ್ ಪಡೆಗಳು ಅನು ಮಾನಾಸ್ಪದ ಚಲನ ವಲನ ಗಮನಿಸಿದವು. ಐಬಿ ದಾಟದಂತೆ ಒಳನುಗ್ಗುವವ ರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದವು. ಆದರೆ ಆಕ್ರಮಣಕಾರಿಯಾಗಿ ಗಡಿ ಬೇಲಿಗಳತ್ತ ಓಡುತ್ತಲೇ ಇದ್ದರು’ ಎಂದು ಜಮ್ಮುವಿನ ಬಿಎಸ್ಎಫ್ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದರು.