Thursday, 9th January 2025

World’s Oldest Person: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಯಾರು ಗೊತ್ತಾ? ಈಕೆಯ ವಯಸ್ಸು ಬರೋಬ್ಬರಿ 116 ವರ್ಷ

World's Oldest Person

ಡಿಸೆಂಬರ್‌ನಲ್ಲಿ ಜಪಾನ್‍ ಪ್ರಧಾನಿ ಟೊಮಿಕೊ ಇಟುಕಾ ಅವರ ನಿಧನರಾದ ನಂತರ ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ ಬ್ರೆಜಿಲ್‍ನ ಇನಾಹ್ ಕ್ಯಾನಬಾರೊ ಲ್ಯೂಕಾಸ್ ಎಂಬ ಕ್ರಿಶ್ಚಿಯನ್ ನನ್(ಕ್ರೈಸ್ತ ಸನ್ಯಾಸಿನಿ) ವಿಶ್ವದ ಅತ್ಯಂತ ಹಿರಿಯ(World’s Oldest Person) ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂಬುದಾಗಿ ವರದಿಯಾಗಿದೆ. ಲ್ಯೂಕಾಸ್ ಅವರಿಗೆ ಈಗ  116 ವರ್ಷವಾಗಿದ್ದರಿಂದ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಲ್ಯೂಕಾಸ್ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಮಾತ್ರವಲ್ಲ, ಅತ್ಯಂತ ಹಿರಿಯ ಸನ್ಯಾಸಿನಿಯೂ ಆಗಿದ್ದಾರೆ. 1908ರಲ್ಲಿ ಜನಿಸಿದ ಇವರು ಪೋಪ್ ಫ್ರಾನ್ಸಿಸ್ ಅವರ ಆಶೀರ್ವಾದದೊಂದಿಗೆ 2018 ರಲ್ಲಿ ತಮ್ಮ110 ನೇ ಜನ್ಮದಿನವನ್ನು ಆಚರಿಸಿದ್ದಾರೆ.

ಇನಾಹ್ ಕ್ಯಾನಬಾರೊ ಲ್ಯೂಕಾಸ್ ಯಾರು?
ಇನಾಹ್ ಕ್ಯಾನಬಾರೊ ಲ್ಯೂಕಾಸ್ ಬ್ರೆಜಿಲ್‍ನ ರಿಯೊ ಗ್ರಾಂಡೆ ಡೊ ಸುಲ್‍ನಲ್ಲಿ 1908ರಲ್ಲಿ ಜೊವಾವೊ ಆಂಟೋನಿಯೊ ಮತ್ತು ಮರಿಯಾನಾ ಕ್ಯಾನಬಾರೊ ಎಂಬ ದಂಪತಿಯ ಮಗಳಾಗಿ ಜನಿಸಿದ್ದಾರೆ.  ಇವರು ನೋಡುವುದಕ್ಕೆ ತುಂಬಾ ವೀಕ್‌ ಆಗಿದ್ದರಿಂದ ಜಾಸ್ತಿ ವರ್ಷ ಬದುಕುಳಿಯುದಿಲ್ಲ ಎಂದು ಅನೇಕರು ಅನುಮಾನಪಟ್ಟಿದ್ದರಂತೆ.ಆದರೆ ಈಗ ನೂರಕ್ಕೂ ಹೆಚ್ಚು ವರ್ಷ ಬದುಕಿ ಎಲ್ಲರ ಅನುಮಾನವನ್ನು ಹುಸಿಗೊಳಿಸಿದ್ದಾರೆ.

ಲ್ಯೂಕಾಸ್ ತಮ್ಮ ಜೀವನವನ್ನು ಆಧ್ಯಾತ್ಮಿಕ ಪ್ರಯಾಣದಲ್ಲಿ ಕಳೆಯಲು ನಿರ್ಧರಿಸಿದ್ದರಂತೆ. ಹೀಗಾಗಿ ಇವರು ಸನ್ಯಾಸಿ ಆಗಲು ನಿರ್ಧರಿಸಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, ಬ್ರೆಜಿಲ್ ಸನ್ಯಾಸಿನಿ ಲ್ಯೂಕಾಸ್ 1900 ರ ದಶಕದಿಂದ ಬದುಕುಳಿದ ಮೂವರಲ್ಲಿ ಒಬ್ಬರು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:ಈ ಬಸ್‌ ಚಾಲಕನ ಶ್ವಾನ ಪ್ರೀತಿಯನ್ನೊಮ್ಮೆ ನೋಡಿ; ಹೃದಯಸ್ಪರ್ಶಿ ವಿಡಿಯೊ ಭಾರೀ ವೈರಲ್‌

ಟೊಮಿಕೊ ಇಟಾಕಾ ಅವರ ಸಾವು
ಇನಾ ಕ್ಯಾನಬಾರೊ ಲ್ಯೂಕಾಸ್ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಬಿರುದನ್ನು ಪಡೆಯುವ ಮೊದಲು, ಜಪಾನ್‍ನ ಟೊಮಿಕೊ ಇಟುಕಾ ಎಂಬ ಮಹಿಳೆ 116 ವರ್ಷ ಮತ್ತು 220 ದಿನಗಳ (ಡಿಸೆಂಬರ್‌ವರೆಗೆ) ಕಾಲ ಬದುಕಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದರಂತೆ. ಆದರೆ ಮೇ 1908 ರಲ್ಲಿ ಜನಿಸಿದ ಇಟುಕಾ ಡಿಸೆಂಬರ್ 2024 ರಲ್ಲಿ ನಿಧನರಾದರು. ಆದರೆ 1908ರಲ್ಲಿ  ಜನಿಸಿದ ಬ್ರೆಜಿಲ್ ಸನ್ಯಾಸಿನಿ ಲ್ಯೂಕಾಸ್  ಇನ್ನೂ ಜೀವಂತವಾಗಿರುವ ಕಾರಣ ಅವರು ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *