Saturday, 14th December 2024

ಅಮರನಾಥ ಯಾತ್ರೆ: 40,223 ಭಕ್ತರ ಭೇಟಿ, ಐವರ ಸಾವು

ಶ್ರೀನಗರ: ದಕ್ಷಿಣ ಕಾಶ್ಮೀರದ ಅಮರನಾಥ ಯಾತ್ರೆ ಈ ವರ್ಷ ಆರಂಭವಾದಾಗಿನಿಂದ ಒಟ್ಟು 40,223 ಭಕ್ತರು ಭೇಟಿ ನೀಡಿದ್ದಾರೆ. ಐವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

‘ಚಂದನ್ವಾರಿ-ಶೇಷನಾಗ್ ಮಾರ್ಗದಿಂದ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ವೀರಿಂದರ್ ಗುಪ್ತಾ ಎಂಬ ಯಾತ್ರಿ ಕಾಣೆಯಾಗಿದ್ದಾರೆ.

ದೆಹಲಿಯ ಜೈ ಪ್ರಕಾಶ್, ಬರೇಲಿಯ ದೇವೆಂದರ್ ತಯಾಲ್ (53) ಮತ್ತು ಬಿಹಾರದ ಲಿಪೋ ಶರ್ಮಾ (40) ಎಂಬ ಮೂವರು ಹೃದಯಾಘಾತದಿಂದ ನಿಧನರಾಗಿದ್ದಾರೆ.’ ‘ಮಹಾರಾಷ್ಟ್ರದ ಜಗನ್ನಾಥ್ (61) ಪಿಸುಟಾಪ್‌ನಲ್ಲಿ ಆರೋಗ್ಯ ಸ್ಥಿತಿಯಿಂದ ಹಾಗೂ ರಾಜಸ್ಥಾನದ ಅಶು ಸಿಂಗ್ (46) ಎಂಜಿ ಟಾಪ್‌ನಲ್ಲಿ ಕುದುರೆಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಜೂನ್ 30ರಂದು ಪ್ರಾರಂಭವಾಗಿರುವ ಅಮರನಾಥ ಯಾತ್ರೆ ಆಗಸ್ಟ್ 11 ರಂದು ಮುಕ್ತಾಯಗೊಳ್ಳಲಿದೆ.