ಗಾಜಿಯಾಬಾದ್ : ವಕ್ಫ್ ಬೋರ್ಡ್ ತಿದ್ದುಪಡಿ (Waqf Board Amendment Bill) ಮಸೂದೆ ಕುರಿತು ದೆಹಲಿಯ ರಾಮ್ಲೀಲಾ ಮೈದಾನದಲ್ಲಿ (Delhi’s Ramlila Maidan) ಮುಸ್ಲಿಂ ಧರ್ಮಗುರು ತೌಕೀರ್ ರಜಾ (Muslim cleric Tauqeer Raza ) ಅವರು ಆಯೋಜಿಸಿದ್ದ ಸಮಾವೇಶವನ್ನು ತಡೆಯುತ್ತೇನೆ ಎಂದು ಹೇಳಿದ್ದ ದಾಸ್ನಾ ದೇವಸ್ಥಾನದ ಅರ್ಚಕ, ಧಾರ್ಮಿಕ ಗುರು ಯತಿ ನರಸಿಂಹಾನಂದ (Yati Narsinghanand) ಅವರನ್ನು ಪೊಲೀಸರು ಭಾನುವಾರ ಗೃಹಬಂಧನದಲ್ಲಿರಿಸಿದ್ದಾರೆ (House Arrest) ಎಂದು ತಿಳಿದು ಬಂದಿದೆ.
ದೆಹಲಿಯಲ್ಲಿ ನಡೆಯಲಿರುವ ಮುಸ್ಲಿಂ ಸಮುದಾಯದ ಸಮಾವೇಶದಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವಂತೆ ನರಸಿಂಹಾನಂದ ಶುಕ್ರವಾರ ಹಿಂದೂ ಸಮುದಾಯ ಕರೆ ನೀಡಿದ್ದರು. ಭಾನುವಾರ ಪೊಲೀಸರು ಅವರನ್ನು ತಡೆದಾಗ ಅರ್ಚಕ ಮತ್ತು ಅವರ ಶಿಷ್ಯರು ದೇವಾಲಯದ ಆವರಣದಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲು ಪ್ರಾರಂಭಿಸಿದರು. ನಂತರ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ.
ಪ್ರಕರಣದ ಬಗ್ಗೆ ಮಾತನಾಡಿದ ವೇವ್ ಸಿಟಿ ಎಸಿಪಿ ಲಿಪಿ ನಾಗಾಯಾಚ್ ಮಾತನಾಡಿ ಭಾನುವಾರ ಬೆಳಗ್ಗೆ ನರಸಿಂಹಾನಂದ್ ಮತ್ತು ಅವರ ಶಿಷ್ಯರು ದೆಹಲಿಗೆ ತೆರಳಲು ತಮ್ಮ ವಾಹನಗಳನ್ನು ಹತ್ತುತ್ತಿದ್ದಾಗ ಅವರ ಪ್ರಯಾಣವನ್ನು ನಿರ್ಬಂಧಿಸಿ ಅವರನ್ನು ಗೃಹ ಬಂಧನದಲ್ಲಿರಿಸಿದ್ದೇವೆ ಎಂದು ಹೇಳಿದ್ದಾರೆ. ರಾಝಾ ಮದ್ನಿ ಮತ್ತು ಓವೈಸಿ (OYC) ಹಿಂದೂಗಳ ಸಜ್ಜನಿಕೆಯನ್ನು ತಮ್ಮ ದೌರ್ಬಲ್ಯವಾಗಿ ತೆಗೆದುಕೊಂಡಿದ್ದಾರೆ ಎಂದು ನರಸಿಂಹಾನಂದ್ ಹೇಳಿಕೆ ನೀಡಿದ್ದರು. ಹಿಂದೂಗಳನ್ನು ಹೆದರಿಸಲು ಅವರು ಗುಂಪಾಗಿ ಸೇರುತ್ತಾರೆ ಎಂದು ಹೇಳಿದ್ದರು.
ನರಸಿಂಹಾನಂದ್ ಅವರ ಹೇಳಿಕೆಗಳಿಗೆ ಧರ್ಮಗುರು ತೌಕೀರ್ ರಜಾ ವಾಗ್ದಾಳಿ ನಡೆಸಿದ್ದು, ಅರ್ಚಕರ ವಿರುದ್ಧ ಪ್ರಧಾನಿ ಮೋದಿ ಮತ್ತು ಸರ್ಕಾರ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ದೇಶದಲ್ಲಿ ಎರಡು ರೀತಿಯ ಕಾನೂನುಗಳು ಜಾರಿಯಲ್ಲಿವೆ. ಒಂದು ಸಾಮಾನ್ಯ ನಾಗರಿಕರಿಗೆ ಮತ್ತು ಇನ್ನೊಂದು ಮುಸ್ಲಿಮರಿಗೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : The Sabarmati Report: ಉತ್ತರ ಪ್ರದೇಶದಲ್ಲೂ ‘ದಿ ಸಾಬರಮತಿ ರಿಪೋರ್ಟ್’ ತೆರಿಗೆ ಮುಕ್ತ; ಸಿಎಂ ಯೋಗಿ ಆದಿತ್ಯನಾಥ್ ಘೋಷಣೆ
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಯತಿ ನರಸಿಂಹಾನಂದ ಅವರು, ಪ್ರತಿ ದಸರಾಕ್ಕೆ ರಾವಣನನ್ನು ಸುಡುವುದಾದರೆ ಇನ್ನು ಮುಂದೆ ಮೊಹಮ್ಮದ್ ಪೈಗಂಬರರ ಮೂರ್ತಿಯನ್ನು ಸುಟ್ಟು ಹಾಕಿ ಎಂದು ಕರೆ ನೀಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲಾಗುತ್ತಿದ್ದಂತೆ ಮುಸ್ಲಿಂ ಸಮುದಾಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.