Friday, 10th January 2025

Year-Ender 2024: ಈ ವರ್ಷ ನೆಟ್ಟಿಗರಿಗೇ ಶಾಕ್‌ ಕೊಟ್ಟ ಸ್ಪೆಷಲ್‌ ಖಾದ್ಯಗಳ ವಿಡಿಯೊ ಇಲ್ಲಿದೆ!

viral video

ನವದೆಹಲಿ: 2024ಕ್ಕೆ  ಬೈ ಬೈ ಹೇಳುವ ಸಮಯ ಬಂದೇ ಬಿಟ್ಟಿದೆ (Year-Ender 2024). ಇನ್ನೇನು ಹೊಸ ವರ್ಷ ವೆಲ್ ಕಮ್ ಮಾಡುವ ಸಮಯ. ಈ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವಿಲಕ್ಷಣ ರೆಸಿಪಿಗಳು ಕಾಣಿಸಿಕೊಂಡು ಬಹಳಷ್ಟು  ವೈರಲ್ ಆಗಿ  ಇಂಥದ್ದೊಂದು ರೆಸಿಪಿ ಟ್ರೈ  ಮಾಡೋಕೆ ಸಾಧ್ಯನಾ ಎಂದು ಕೆಲವರು ಅಚ್ಚರಿ ಪಟ್ಟಿದ್ದರು. ಅಂತಹ ಸ್ಪೇಷಲ್ ಖಾದ್ಯಗಳ ವಿಡಿಯೊ ಇಲ್ಲಿದೆ.

ಡೀಸೆಲ್ ಪರಾಠ:

ಈ ವರ್ಷ ಹೆಚ್ಚು ವೈರಲ್ ಆದ ರಿಸಿಪಿಗೆ  ಡೀಸೆಲ್ ಪರಾಟವು ಸೇರಿದೆ. ಚಂಡೀಗಢ ಮೂಲದ ಡಾಬಾ ವೊಂದರಲ್ಲಿ  ಡೀಸೆಲ್ ಪರಾಟ ತಯಾರಿಸುವ ವೀಡಿಯೊ ಬಹಳಷ್ಟು  ವೈರಲ್ ಆಗಿತ್ತು. ಪರಾಟ ತಯಾರಿಸುವಾಗ  ವ್ಯಕ್ತಿ ಡೀಸೆಲ್ ಎಂದು ಹೇಳಿಕೊಳ್ಳುವ ದ್ರವ ಮಿಶ್ರಣವನ್ನು ಸೇರಿಸುವ ದೃಶ್ಯ ವೈರಲ್ ಆಗಿತ್ತು. ಆದರೆ ಈ ಆಹಾರ ತಯಾರಿಕೆಯಲ್ಲಿ ಯಾವುದೇ ಡಿಸೇಲ್ ಬಳಸಲಾಗಿಲ್ಲ ಎಂದು ಅಲ್ಲಿನ ಮಾಲೀಕರು ಸ್ಪಷ್ಟಪಡಿಸಿದ್ದರು. ಈ ವಿಡಿಯೊ ಈ ವರ್ಷ ಹೆಚ್ಚು ವೈರಲ್ ಆದ ಖಾದ್ಯ ಇದಾಗಿದೆ.

 ಮಿಸಲ್ ಪಿಜ್ಜಾ:

ಇಟಲಿಯ  ಉಪಾಹಾರ ಗೃಹದಲ್ಲಿ ಈ ಖಾದ್ಯ ಮಾಡುವ ವಿಧಾನ ಕಂಡು ನೋಡುಗರು ಅಚ್ಚರಿ ಪಟ್ಟಿದ್ದರು. ಪಿಜ್ಜಾ ಬ್ರೆಡ್‌ನ ಮೇಲೆ ಸ್ವಲ್ಪ ಸಾಸ್, ಮೇಯನೇಸ್ ಅನ್ನು ಹಾಕುವ  ಜೊತೆಗೆ ಈ ವಿಡಿಯೊ ಆರಂಭವಾಗುತ್ತದೆ. ನಂತರ ಅದಕ್ಕೆ  ನಮ್‌ಕೀನ್, ಮಟ್ಕಿ, ಕತ್ತರಿಸಿದ ಈರುಳ್ಳಿ ಮತ್ತು ಕೊತ್ತಂಬರಿ ಪದಾರ್ಥಗಳನ್ನು ಸೇರಿಸುವ ಮೂಲಕ  ಪಿಜ್ಜಾವನ್ನು ಒಲೆಯಲ್ಲಿ ಬೇಯಿಸಿ ಸಣ್ಣ ಪೀಸ್‌ಗಳಾಗಿ ಮಾಡಿ  ಮಿಸಲ್ ತರ್ರಿಯೊಂದಿಗೆ ಬಡಿಸಲಾಗುತ್ತದೆ. ಈ ವಿಡಿಯೊ ಕೂಡ ಈ ವರ್ಷ ಹೆಚ್ಚು ಟ್ರೆಡಿಂಗ್‌ನಲ್ಲಿತ್ತು.

ಗುಲಾಬ್ ಜಾಮೂನ್ ದೋಸೆ:

ವ್ಯಾಪಾರಿಯೊಬ್ಬರು  ಗುಲಾಬ್ ಜಾಮೂನ್ ದೋಸೆ ಮಾಡುವ ವಿಡಿಯೊ ಈ ವರ್ಷ ಬಹಳಷ್ಟು ವೈರಲ್ ಆಗಿತ್ತು.  ಸಾಮಾನ್ಯ ಮಸಾಲೆ ದೋಸೆಗೆ  ಅಲೂಗೆಡ್ಡೆ ಇನ್ನಿತರ ಪದಾರ್ಥಗಳ ಬದಲಾಗಿ ವ್ಯಾಪಾರಿಯು ಜಾಮೂನು ಸೇರಿಸಿದ್ದಾರೆ. ಜಾಮೂನ್ ಉಂಡೆಗಳನ್ನು ಮಾಡಿ ದೋಸೆ ಮೇಲೆ ಹಾಕಿ ಚಮಚದಿಂದ ಸಣ್ಣಗೆ ಪೀಸ್ ಮಾಡಿ ದೋಸೆಯ ಮೇಲೆಲ್ಲ ಹರಡುವ ದೃಶ್ಯ ಬಹಳಷ್ಟು ವೈರಲ್ ಆಗಿತ್ತು.

 ಪಾನ್ ಮಸಾಲಾ ಆಮ್ಲೆಟ್:

ವ್ಯಾಪಾರಿಯೊಬ್ಬರು ಪಾನ್ ಮಸಾಲಾ ಸೇರಿಸಿ ಆಮ್ಲೆಟ್ ತಯಾರಿಸುವ  ವಿಡಿಯೊ ಕೂಡ ಈ ವರ್ಷ ಹೆಚ್ಚು ಟ್ರೆಂಡಿಂಗ್‌ನಲ್ಲಿತ್ತು. ಮೊಟ್ಟೆಯ ಹಳದಿ ಲೋಳೆಗೆ ಪಾನ್ ಮಸಾಲಾ ಪುಡಿಯನ್ನು ಸೇರಿಸುವ ಈ ವೀಡಿಯೊ ನೋಡುಗರನ್ನು ಅಚ್ಚರಿ ಪಡಿಸಿತ್ತು. ವಿಮಲ್ ಪಾನ್ ಮಸಾಲದ ಪ್ಯಾಕೆಟ್ ತೆರೆದು ಮೊಟ್ಟೆಯ ಮಿಶ್ರಣಕ್ಕೆ ಸೇರಿಸಿ ಆಮ್ಲೆಟ್ ತಯಾರಿಸುವ ವಿಡಿಯೊಗೆ ನೆಟ್ಟಿಗರು ಆಶ್ಚರ್ಯ ಪಟ್ಟಿದ್ದರು.

ಐಸ್ ಕ್ರೀಮ್ ಪಾವ್:

ವ್ಯಕ್ತಿಯೊಬ್ಬರು ವಡಾ ಪಾವ್ ಸಿದ್ಧ ಮಾಡುವುದರೊಂದಿಗೆ ಈ ವಿಡಿಯೋ  ಆರಂಭವಾಗಲಿದ್ದು  ಈ ವ್ಯಕ್ತಿ ಮೊದಲು  ಪಾವ್‌ನೊಳಗೆ ಕೆಲವು ಸಾಸ್‌ಗಳನ್ನು ಹಾಕಿ, ಬಳಿಕ   ವ್ಯಕ್ತಿ ವೆನಿಲ್ಲಾ ಫ್ಲೇವರ್‌ ರೀತಿ ಕಾಣುವ ಐಸ್‌ ಕ್ರೀಮ್‌ ಅನ್ನೂ  ಪಾವ್ ನೊಳಗೆ ತುಂಬುತ್ತಾರೆ. ಬಳಿಕ  ಐಸ್ ಕ್ರಿಮ್ ಜೊತೆ ಪಾವ್ ಪ್ರೈ ಮಾಡಿ  ಕೊಡುತ್ತಾರೆ.ಈ ವಿಡಿಯೊ ಕೂಡ ಈ ವರ್ಷ ಬಹಳಷ್ಟು ವೈರಲ್ ಆಗಿದೆ.

ಈ ಸುದ್ದಿಯನ್ನೂ ಓದಿ:2024 Flashback: 2024ರಲ್ಲಿ ಹೆಚ್ಚು ವೈರಲ್ ಆದ ಫೋಟೊ, ವಿಡಿಯೊ ಯಾವುದು ಗೊತ್ತಾ?