ಅಲಿಘರ್: ಸಾಹಿತಿ ಹಾಗೂ ಮಾಜಿ ಸಂಸದ ಜಮಾಲ್ ಖ್ವಾಜಾ ವಯೋ ಸಹಜ ಕಾಯಿಲೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
1957 ರಲ್ಲಿ ಅಲಿಘರ್ ಲೋಕಸಭಾ ಕ್ಷೇತ್ರದಿಂದ ಆರಿಸಿ ಬಂದು ಸಂಸದರಾಗಿದ್ದ ಖ್ವಾಜಾ 1960ರಲ್ಲಿ ಆಫ್ಘಾನಿಸ್ತಾನಕ್ಕೆ ತೆರಳಿದ್ದ ಭಾರತೀಯ ಸಂಸ್ಕೃತಿ ನಿಯೋಗದ ನೇತೃತ್ವ ವಹಿಸಿದ್ದರು.
1962ರಲ್ಲಿ ರಾಜಕೀಯದಿಂದ ದೂರ ಸರಿದು ಅಲಿಘರ್ ಮುಸ್ಲೀಂ ವಿಶ್ವವಿದ್ಯಾಲಯದಲ್ಲಿ ಸೇವೆ ಆರಂಭಿಸಿ 1980ರಲ್ಲಿ ವಿವಿಯ ಕಲಾ ವಿಭಾಗದ ಡೀನ್ ಆಗಿದ್ದರು. ತತ್ವಜ್ಞಾನ , ಖುರಾನ್ ಭೋದಿಸುವಂತೆ ಜೀವನ ಸಾಗಿಸುವುದು ಹೇಗೆ ಎಂಬುದು ಸೇರಿದಂತೆ 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಖ್ಯಾತ ಸಾಹಿತಿಯಾಗಿ ಗುರುತಿಸಿಕೊಂಡಿದ್ದರು. 92 ರ ಹರಯದಲಿ ಇಹ ಲೋಕ ತ್ಯಜಿಸುವ ಮೂಲಕ ಖ್ವಾಜಾ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.