Sunday, 15th December 2024

Kapil Parmar : ಪ್ಯಾರಾಲಿಂಪಿಕ್ಸ್‌ ಜೋಡೋದಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಬರೆದ ಕಪಿಲ್ ಪರ್ಮಾರ್‌

Kapil Parmar

ಪ್ಯಾರಿಸ್ : ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಜೂಡೋ ಪಟು ಕಪಿಲ್ ಪರ್ಮಾರ್ (Kapil Parmar) ಗುರುವಾರ ಜೂಡೋದಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ತಂದು ಇತಿಹಾಸ ನಿರ್ಮಿಸಿದ್ದಾರೆ. ಪುರುಷರ 60 ಕೆ.ಜಿ ಜೆ 1 ವಿಭಾಗದಲ್ಲಿ ಅವರು ಬ್ರೆಜಿಲ್‌ನ ಎಲಿಯೆಲ್ಟನ್ ಡಿ ಒಲಿವೇರಾ ಅವರನ್ನು ಕೇವಲ 33 ಸೆಕೆಂಡುಗಳಲ್ಲಿ ಸೋಲಿಸಿ ಕಂಚಿನ ಪದಕ ಗೆದ್ದರು. ಕಪಿಲ್ ಪರ್ಮಾರ್‌ ಸಾಧನೆಯೊಂದಿಗೆ ಸಾಧನೆಯೊಂದಿಗೆ ಭಾರತ 5 ಚಿನ್ನ, 9 ಬೆಳ್ಳಿ ಮತ್ತು 11 ಕಂಚಿನೊಂದಿಗೆ ಒಟ್ಟು 25 ಪದಕಗಳನ್ನು ಗೆದ್ದಿದೆ. ಪ್ಯಾರಾ ಜೂಡೋ ಸೆಮಿಫೈನಲ್‌ನಲ್ಲಿ 24 ವರ್ಷದ ಪರ್ಮಾರ್ ಇರಾನ್ನ ಎಸ್.ಬನಿತಾಬಾ ಖೋರ್ರಾಮ್ ಅಬಾದಿ ವಿರುದ್ಧ 0-10 ಅಂತರದಲ್ಲಿ ಸೋತಿದ್ದರು.

2022ರ ಏಷ್ಯನ್ ಗೇಮ್ಸ್‌ನಲ್ಲಿ ಇದೇ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಪರ್ಮಾರ್, ಕ್ವಾರ್ಟರ್ ಫೈನಲ್‌ನಲ್ಲಿ ವೆನೆಜುವೆಲಾದ ಮಾರ್ಕೊ ಡೆನ್ನಿಸ್ ಬ್ಲಾಂಕೊ ವಿರುದ್ಧ 10-0 ಅಂತರದಲ್ಲಿ ಜಯ ಸಾಧಿಸಿದ್ದರು. ಆದಾಗ್ಯೂ, ಅವರು ಇಂದು ಎರಡೂ ಪಂದ್ಯಗಳಲ್ಲಿ ಹಳದಿ ಕಾರ್ಡ್ ಪಡೆದರು. ನಾಲ್ವರು ಸಹೋದರರು ಮತ್ತು ಒಬ್ಬ ಸಹೋದರಿಯಲ್ಲಿ ಕಿರಿಯವರಾದ ಕಪಿಲ್ ಮಧ್ಯಪ್ರದೇಶದ ಶಿವೋರ್ ಎಂಬ ಹಳ್ಳಿಯಿಂದ ಬಂದವರು. ಅವರ ತಂದೆ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಅವರ ಸಹೋದರಿ ಪ್ರಾಥಮಿಕ ಶಾಲೆ ನಡೆಸುತ್ತಿದ್ದಾರೆ. ಬಾಲ್ಯದಲ್ಲಿ, ಕಪಿಲ್ ಹೊಲಗಳಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನ ಪಂಪ್ ಅನ್ನು ಸ್ಪರ್ಶಿಸಿದ್ದರು ತೀವ್ರ ವಿದ್ಯುತ್ ಆಘಾತದಿಂದ ಬದುಕುಳಿದರೂ ಅವರು ಕೋಮಾದಲ್ಲಿ ಸಾಕಷ್ಟು ವರ್ಷಗಳ ಕಾಲ ಇದ್ದರು.

ಇದನ್ನೂ ಓದಿ: Riyan Parag : ಕೊಹ್ಲಿ, ಗೌತಮ್‌ ಗಂಭೀರ್ ಬಗ್ಗೆ ಹೇಳಿಕೆ ನೀಡಿದ ರಿಯಾನ್ ಪರಾಗ್‌

ಚೇತರಿಸಿಕೊಂಡಿದ್ದ ಅವರು ಕ್ರೀಡಾಕ್ಷೇತ್ರಕ್ಕೆ ಲಗ್ಗೆ ಇಟ್ಟರು. ತಮ್ಮ ಸಾಧನೆ ಹಾದಿಯಲ್ಲಿ ಇದ್ದ ಅಡೆತಡೆಗಳನ್ನು ಮೀರಿದ ಅವರು ಜೋಡೊ ಪಟುವಾಗಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಆರಂಭಿಸಿದರು. ಅಂತಾರಾಷ್ಟ್ರೀಯ ಮಟ್ಟಕ್ಕೆ ಪ್ರವೇಶ ಪಡೆದ ಅವರು ಇದೀಗ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ.