Thursday, 12th December 2024

Riyan Parag : ಕೊಹ್ಲಿ, ಗೌತಮ್‌ ಗಂಭೀರ್ ಬಗ್ಗೆ ಹೇಳಿಕೆ ನೀಡಿದ ರಿಯಾನ್ ಪರಾಗ್‌

Riyan Parag

ನವದೆಹಲಿ: ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಆಲ್ರೌಂಡರ್ ರಿಯಾನ್ ಪರಾಗ್ (Riyan Parag) ಭಾರತ ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್ ಕೊಹ್ಲಿ (Virat Kohli) ಜತೆಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ತಂಡದ ಮಾಜಿ ನಾಯಕ ತನ್ನ ಆದರ್ಶ ಮತ್ತು ಅವರು ಬಾಲ್ಯದಿಂದಲೂ ಅವರನ್ನು ಆರಾಧಿಸಿಕೊಂಡು ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ. ಟೀಮ್ ಇಂಡಿಯಾ ಪರ ಆಡಿದ ಅತ್ಯುತ್ತಮ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಬ್ಯಾಟಿಂಗ್‌ನಲ್ಲಿ ಅವರ ಪ್ರದರ್ಶನದಿಂದಾಗಿ ಮಾತ್ರವಲ್ಲ, ಅವರು ತಮ್ಮನ್ನು ತಾವು ಬೆಳೆಸಿಕೊಂಡ ರೀತಿ ವಿಶೇಷವಾಗಿದೆ. ಅವರು ಭಾರತ ಕ್ರಿಕೆಟ್ ತಂಡದ ಮುಖವಾಗಿಯೂ ಇದ್ದಾರೆ. ಅವರ ಆಕ್ರಮಣಕಾರಿ ಸ್ವಭಾವವು ಅವರ ವೃತ್ತಿಜೀವನದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಮತ್ತು ಅವರು ನಿಸ್ಸಂದೇಹವಾಗಿ ಅನೇಕರಿಗೆ ಆದರ್ಶವಾಗಿದ್ದಾರೆ.

ಕೊಹ್ಲಿಯನ್ನು ನೋಡಿ ಬೆಳೆದವರಲ್ಲಿ ರಿಯಾನ್ ಪರಾಗ್ ಕೂಡ ಒಬ್ಬರು. ಯುವ ಆಲ್ರೌಂಡರ್ ವಿರಾಟ್ ಕೊಹ್ಲಿಯಂತೆಯೇ ಆಕ್ರಮಣಕಾರಿ ಸ್ವಭಾವ ಹೊಂದಿದ್ದಾರೆ. ಅವರು ಎದುರಾಳಿ ಆಟಗಾರರಿಗೆ ಕೊಡಬೇಕಾದ್ದನ್ನು ಕೊಟ್ಟೇ ಮೈದಾನದಿಂದ ಆಚೆ ಬರುತ್ತಾರೆ. ಅವರ ಸ್ವಭಾವ ಮತ್ತು ಆಟಗಾರರೊಂದಿಗಿನ ಜಟಾಪಟಿಯಿಂದಾಗಿ ಅವರು ಆಗಾಗ್ಗೆ ಸುದ್ದಿಗೆ ಗ್ರಾಸವಾಗುತ್ತಾರೆ.

ರಿಯಾನ್ ಪರಾಗ್ ಕಳೆದ ಕೆಲವು ವರ್ಷಗಳಿಂದ ದೇಶೀಯ ಸರ್ಕೀಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವವರಲ್ಲಿ ಒಬ್ಬರು. ಅವರು ಐಪಿಎಲ್‌ನಲ್ಲಿ ಛಾಪು ಮೂಡಿಸಿದ್ದರು. ಅವರು ರಾಜಸ್ಥಾನ್ ರಾಯಲ್ಸ್ ಪರ ಅದ್ಭುತ ಪ್ರದರ್ಶನಗಳನ್ನು ನೀಡಿದರು. ಹೀಗಾಗಿ ಭಾರತ ತಂಡಕ್ಕೆ ಎಂಟ್ರಿ ಪಡೆದುಕೊಂಡಿದ್ದರು. ಲಂಕಾ ಪ್ರವಾಸದಲ್ಲಿ ಅವರು ಆಲ್‌ರೌಂಡರ್‌ ಆಗಿಯೂ ಉತ್ತಮವಾಗಿ ಆಡಿದ್ದರು.

ಐಪಿಎಲ್ 2024 ರಲ್ಲಿ ರಿಯಾನ್ ಪರಾಗ್ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡುದ್ದರು. ಅವರು 16 ಪಂದ್ಯಗಳಲ್ಲಿ 4 ಅರ್ಧಶತಕಗಳೊಂದಿಗೆ 573 ರನ್ ಗಳಿಸಿದ್ದರು. ಅವರು ದೊಡ್ಡ ಪಂದ್ಯಗಳಲ್ಲಿ ಮತ್ತು ಒತ್ತಡದ ಸಂದರ್ಭಗಳಲ್ಲಿ ತಮ್ಮ ತಂಡದ ಪರವಾಗಿ ನಿಂತು ಅವರನ್ನು ಗೆಲುವಿನತ್ತ ಕೊಂಡೊಯ್ದಿದ್ದರು ಅವರು ಈ ಋತುವಿನಲ್ಲಿ 4 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ ಮತ್ತು ಮ್ಯಾನೇಜ್ಮೆಂಟ್‌f ನಂಬಿಕೆಯನ್ನು ಉಳಿಸಿಕೊಂಡಿದ್ದರು.

ಇದನ್ನೂ ಓದಿ: Kumar Sangakkara : ಗೌತಮ್ ಗಂಭೀರ್ ಸ್ಥಾನಕ್ಕೆ ಕುಮಾರ ಸಂಗಕ್ಕಾರ ನೇಮಕ?

ಪರಾಗ್ ಅವರನ್ನು ಜಿಂಬಾಬ್ವೆ ವಿರುದ್ಧದ ಟಿ 20 ಐ ಗಾಗಿ ಭಾರತೀಯ ತಂಡಕ್ಕೆ ಹೆಸರಿಸಲಾಗಿತ್ತು. ನಂತರ ಶ್ರೀಲಂಕಾ ವಿರುದ್ಧದ ಟಿ 20 ಐ ಸರಣಿಯ ಭಾಗವಾಗಿದ್ದರು. ನಂತರ ಅವರು ಏಕದಿನ ಪಂದ್ಯಗಳಲ್ಲಿಯೂ ಪಾದಾರ್ಪಣೆ ಮಾಡಿದರು. ಕಿರು ಸ್ವರೂಪದಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, ಅವರು 50 ಓವರ್‌ಗಳ ಸ್ವರೂಪದಲ್ಲಿಯೂ ತಮ್ಮ ಪರಾಕ್ರಮವನ್ನು ಸಾಬೀತುಪಡಿಸಿದ್ದರು. ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ, ಅವರು ಪಾದಾರ್ಪಣೆ ಮಾಡಿದರು ಮತ್ತು ತಕ್ಷಣದ ಪರಿಣಾಮ ಬೀರಿದ್ದರು. ಆಲ್ರೌಂಡರ್ 3 ವಿಕೆಟ್‌ಗಳನ್ನು ಪಡೆದಿದ್ದರು. ಬ್ಯಾಟಿಂಗ್‌ನಲ್ಲಿಯೂ ಉತ್ತಮವಾಗಿ ಕಂಡಿದ್ದರು. ಅವರು ಉತ್ತಮ ರನ್ ಬಾರಿಸಿಲ್ಲವಾದರೂ ಆತ್ಮವಿಶ್ವಾಸದಿಂದ ಕಂಡಿದ್ದರು.

ಗೌತಮ್ ಗಂಭೀರ್ ನನಗೆ ಸಾಕಷ್ಟು ಬೆಂಬಲ ನೀಡಿದ್ದಾರೆ – ರಿಯಾನ್ ಪರಾಗ್

ವಿರಾಟ್ ಕೊಹ್ಲಿ ಅವರೊಂದಿಗೆ ಡ್ರೆಸ್ಸಿಂಗ್ ಕೊಠಡಿ ಹಂಚಿಕೊಳ್ಳುವ ಬಗ್ಗೆ ಮಾತನಾಡಿದ ಪರಾಗ್, ಇದು ಅಮೂರ್ತ ಭಾವನೆ ಮತ್ತು ಕನಸು ಎಂದು ಹೇಳಿದ್ದಾರೆ. ನನ್ನ ಕನಸು ನಿಜವಾದ ಕ್ಷಣ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ನನ್ನ ಆರಾಧ್ಯ ದೈವ. ನಾನು ಯಾವಾಗಲೂ ಬಾಲ್ಯದಿಂದಲೇ ನೋಡಿದ್ದೇನೆ. ವಿರಾಟ್ ಭಾಯ್ ಅವರೊಂದಿಗೆ ಡ್ರೆಸ್ಸಿಂಗ್ ಕೊಠಡಿಯನ್ನು ಹಂಚಿಕೊಳ್ಳುವುದರೊಂದಿಗೆ ನನ್ನ ಕನಸು ನನಸಾಗಿದೆ ಎಂದು ರಿಯಾನ್ ಹೇಳಿದ್ದಾರೆ.

ಮುಖ್ಯ ಕೋಚ್ ಗೌತಮ್ ಗಂಭೀರ್ ಬಗ್ಗೆ ಮಾತನಾಡಿದ ರಿಯಾನ್ ಪರಾಗ್, ನನಗೆ ಸಾಕಷ್ಟು ಸ್ವಾತಂತ್ರ್ಯ, ಬೆಂಬಲ ಮತ್ತು ಸ್ಪಷ್ಟತೆ ಕೊಟ್ಟಿದ್ದಾರೆ ಎಂದು ಹೇಳಿದರು. “ಗೌತಮ್ ಗಂಭೀರ್ ಅವರಿಂದಾಗಿ ನಾನು ಕ್ರಿಕೆಟ್‌ನಲ್ಲಿ ಹೆಚ್ಚು ಸ್ಪಷ್ಟತೆಯನ್ನು ಪಡೆದುಕೊಂಡಿದ್ದೇನೆ. ಅವರು ಉತ್ತಮವಾಗಿ ನನ್ನನ್ನು ನಿರ್ವಹಿಸಿದ್ದಾರೆ,” ರಿಯಾನ್ ಹೇಳಿದ್ದಾರೆ.