Murder case: ತನ್ನ ನೀಚ ಕೃತ್ಯ ಕಣ್ಣಾರೆ ಕಂಡಿದ್ದ ಬಾಲಕನನ್ನು ಕೊಲೆಗೈದು ಅಂಗಡಿಯಲ್ಲಿ ಹೂತಿಟ್ಟ ಮೌಲ್ವಿ! ದೇಶವನ್ನೇ ಬೆಚ್ಚಿ ಬೀಳಿಸೋ ಘಟನೆ ಇದು
ಸುಮಾರು ನಾಲ್ಕು ವರ್ಷಗಳ ಹಿಂದಿನ ಭಿವಂಡಿಯ (bhiwandi) 17 ವರ್ಷದ ಬಾಲಕನ ಕೊಲೆ ಪ್ರಕರಣಕ್ಕೆ (Murder case) ಸಂಬಂಧಿಸಿ ಮುಸ್ಲಿಂ ಧರ್ಮಗುರು (Muslim cleric) ಮೌಲಾನಾ ಗುಲಾಮ್ ರಬ್ಬಾನಿ ಶೇಖ್ ನನ್ನು ಬಂಧಿಸಲಾಗಿದೆ. ಈ ಮೂಲಕ ಮಹಾರಾಷ್ಟ್ರ ಪೊಲೀಸರು (Maharashtra Police ) ಬಾಲಕನ ನಾಪತ್ತೆಯ ನಿಗೂಢತೆಯನ್ನು ಭೇದಿಸಿದ್ದಾರೆ. 2020ರಲ್ಲಿ ಭಿವಂಡಿಯ ನವಿಬಸ್ತಿ ಪ್ರದೇಶದಿಂದ ಶೋಯಿರ್ ಶೇಖ್ ಎಂಬ ಬಾಲಕ ನಾಪತ್ತೆಯಾಗಿದ್ದನು.


ಥಾಣೆ: ಸುಮಾರು ನಾಲ್ಕು ವರ್ಷಗಳ ಹಿಂದಿನ ಭಿವಂಡಿಯ (Bhiwandi) 17 ವರ್ಷದ ಬಾಲಕನ ಕೊಲೆ ಪ್ರಕರಣಕ್ಕೆ (Murder case) ಸಂಬಂಧಿಸಿ ಮುಸ್ಲಿಂ ಧರ್ಮಗುರು (Muslim cleric ) ಮೌಲಾನಾ ಗುಲಾಮ್ ರಬ್ಬಾನಿ ಶೇಖ್ ನನ್ನು ಬಂಧಿಸಲಾಗಿದೆ. ಈ ಮೂಲಕ ಮಹಾರಾಷ್ಟ್ರ ಪೊಲೀಸರು (Maharashtra Police ) ಬಾಲಕನ ನಾಪತ್ತೆಯ ನಿಗೂಢತೆಯನ್ನು ಭೇದಿಸಿದ್ದಾರೆ. 2020ರಲ್ಲಿ ಭಿವಂಡಿಯ ನವಿಬಸ್ತಿ ಪ್ರದೇಶದಿಂದ ಶೋಯಿರ್ ಶೇಖ್ ಎಂಬ ಬಾಲಕ ನಾಪತ್ತೆಯಾಗಿದ್ದನು. ಈ ಕುರಿತು ಆತನ ಕುಟುಂಬ ಪ್ರಕರಣ ದಾಖಲಿಸಿ ಮರಳಿ ಮನೆಗೆ ಬಾಲಕ ಬರುತ್ತಾನೆ ಎನ್ನುವ ಆಸೆಯಿಂದ ಕಾದು ಕುಳಿತಿದ್ದರು. ಆದರೆ ಆತ ಕೊಲೆಯಾಗಿರುವುದು, ಇದನ್ನು ತಾವು ನಂಬಿದ್ದ ಧರ್ಮಗುರುಗಳೇ ಮಾಡಿದ್ದಾರೆ ಎನ್ನುವುದು ಈಗ ಅವರಿಗೆ ತಿಳಿದು ಆಘಾತವಾಗಿದೆ.
ಶೋಯಿರ್ ಶೇಖ್ ನನ್ನು ಧರ್ಮಗುರು ಮೌಲಾನಾ ಗುಲಾಮ್ ರಬ್ಬಾನಿ ಶೇಖ್ ಕೊಂದಿದ್ದು, ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಅಂಗಡಿಯ ಕೆಳಗೆ ಹೂತಿಟ್ಟಿದ್ದನು. ಶೋಯಿರ್ ಶೇಖ್ ಅಪಹರಣಕ್ಕೆ ಹೊಸ ಸುಳಿವು ಸಿಕ್ಕಿದ ಬಳಿಕ ಮಹಾರಾಷ್ಟ್ರ ಪೊಲೀಸರು ಪ್ರಕರಣವನ್ನು ಮತ್ತೆ ತೆರೆದು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣ ಭೇದಿಸಿದ್ದು ಹೇಗೆ?
ಮೌಲಾನಾ ತನ್ನ ನೆಹರು ನಗರ ಪ್ರದೇಶದಲ್ಲಿರುವ ಅಂಗಡಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಇದನ್ನು ಶೋಯಿರ್ ಶೇಖ್ ನೋಡಿದ್ದಾನೆ. ಹೀಗಾಗಿ ಕಳಂಕಿತನಾಗುವ ಭಯದಿಂದ ಮೌಲಾನಾ ಆತನ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ಆತನ ದೇಹವನ್ನು ತುಂಡುಗಳಾಗಿ ಕತ್ತರಿಸಿ ತನ್ನ ಅಂಗಡಿಯ ಕೆಳಗೆ ಹೂತುಹಾಕಿದ್ದಾನೆ. ಬಾಲಕ ನಾಪತ್ತೆಯಾಗಿ ಸುಮಾರು ಮೂರು ವರ್ಷಗಳ ಬಳಿಕ ಸ್ಥಳೀಯರೊಬ್ಬರು ಬಾಲಕ ನಾಪತ್ತೆಯಲ್ಲಿ ಮೌಲಾನಾ ಕೈವಾಡದ ಬಗ್ಗೆ ಶಂಕೆ ವ್ಯಕ್ತಪಡಿಸಿ, ಬಾಲಕನ ಕುಟುಂಬಕ್ಕೆ ಎಚ್ಚರಿಕೆ ನೀಡಿದರು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಗುಲಾಮ್ ರಬ್ಬಾನಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ ಮತ್ತು ಬಾಲಕನ ಕತ್ತರಿಸಿದ ದೇಹದ ತುಂಡುಗಳನ್ನು ಹೂತಿಟ್ಟ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಇದನ್ನೂ ಓದಿ: Self Harming: ಬೆಂಗಳೂರಿನಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ
ಬಾಲಕನನ್ನು ಕೊಂದ ಬಳಿಕ ಮೌಲಾನಾ ಆತನ ಕುಟುಂಬದೊಂದಿಗೆ ಹಲವು ಬಾರಿ ಊಟ ಮಾಡಿದ್ದಾನೆ. ತಂತ್ರ ಮಂತ್ರದ ಹೆಸರಿನಲ್ಲಿ ಬಾಲಕ ಮರಳಿ ಬರಲಿ ಎಂದು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಕೂಡ ನಡೆಸಿದ್ದಾನೆ. ಇದಕ್ಕಾಗಿ ಹಣವನ್ನೂ ಪಡೆದಿದ್ದ. ಇದರಿಂದ ಯಾರಿಗೂ ಆತನ ಮೇಲೆ ಅನುಮಾನವೇ ಬಂದಿರಲಿಲ್ಲ.
ಬಂಧನದ ಸೂಚನೆ ಸಿಕ್ಕ ತಕ್ಷಣ ಮೌಲಾನಾ ಬೇರೆ ರಾಜ್ಯಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದ. ಆದರೆ ಅಧಿಕಾರಿಗಳು ಇತ್ತೀಚೆಗೆ ಆತನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮೌಲಾನಾನ ಅಂಗಡಿಯ ಕೆಳಗೆ ದೊರೆತಿರುವ ಬಾಲಕನ ದೇಹದ ಅವಶೇಷಗಳನ್ನು ವಿಧಿವಿಜ್ಞಾನ ತಂಡದೊಂದಿಗೆ ಸೇರಿ ಪೊಲೀಸರು ಪತ್ತೆ ಹಚ್ಚಿದ್ದು, ಅದನ್ನು ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.