ಉಜ್ಜಯಿನಿ: ದೇಶದಲ್ಲಿ ದಿನಕ್ಕೊಂದು ಅತ್ಯಾಚಾರ, ಲೈಂಗಿಕ ಕಿರುಕುಳ(Physical Abuse) ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ(Kolkata doctor murder case) ಪ್ರಕರಣ ಮಾಸುವ ಮುನ್ನವೇ ಅಂತಹದ್ದೇ ಒಂದು ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ರಸ್ತೆ ಬದಿಯಲ್ಲಿ ಕಿರಾತಕನೋರ್ವ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಅಶ್ಲೀಲ ಘಟನೆಯನ್ನು ಮತ್ತೊರ್ವ ವ್ಯಕ್ತಿ ರೆಕಾರ್ಡ್ ಮಾಡಿಕೊಂಡಿದ್ದು, ಇದೀಗ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಏನಿದು ಘಟನೆ?
ನಗಡಾ ಪ್ರದೇಶದ ಪ್ರಕಾಶ್‌ನಗರದಲ್ಲಿ ಈ ನಾಗರಿಕ ಸಮಾಜವೇ ತಲೆ ತಗ್ಗಿಸುವ ಘಟನೆ ನಡೆದಿದೆ. ಮಹಿಳೆಯೊಬ್ಬಳಿಗೆ ಮದ್ಯಪಾನ ಮಾಡಿಸಿ, ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೋರ್ವ ಆಕೆಯ ಜೊತೆ ರಸ್ತೆ ಬದಿಯಲ್ಲೇ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ಹೀನ ಕೃತ್ಯವನ್ನು ಮೊಹಮ್ಮದ್ ಸಲೀಂ(43) ಎಂಬಾತ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದೀಗ ಪೊಲೀಸರು ಸಲೀಂನನ್ನು ಅರೆಸ್ಟ್ ಮಾಡಿದ್ದು, ವಿಡಿಯೋದಲ್ಲಿರುವ ವ್ಯಕ್ತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
A woman was raped on a busy road in MP's Ujjain on Wednesday afternoon. It happened on a footpath in Koyla Phatak area, one of the city's busiest intersections. Scores of people witnessed it but none intervened. Instead, someone filmed it.
— Sameena Kousar (@SameenaKousar4) September 6, 2024
It is heart-wrenching to see this all. pic.twitter.com/OFGNi8ecbJ
ಇನ್ನು ಈ ಬಗ್ಗೆ ಉಜ್ಜೈನ್ ಎಸ್‌ಪಿ ಪ್ರದೀಪ್ ಶರ್ಮಾ ಪ್ರತಿಕ್ರಿಯಿಸಿದ್ದು, ಈ ಸಂಬಂಧ ನಾಗ್ಡಾದ ಪ್ರಕಾಶ್ ನಗರದ ನಿವಾಸಿ ಮೊಹಮ್ಮದ್ ಸಲೀಂ (43) ಎಂಬಾತನನ್ನು ಬಂಧಿಸಿದ್ದೇವೆ. ನಾವು ಆತನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದೇವೆ, ಅದರಲ್ಲಿ ನಾವು ವೀಡಿಯೊವನ್ನು ವಶಪಡಿಸಿಕೊಂಡಿದ್ದೇವೆ. ಈ ಈ ಹಿಂದೆಯೂ ಕ್ರಿಮಿಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ತಿಳಿದು ಬಂದಿದೆ. ಪ್ರಸ್ತುತ, ಸಲೀಂ ವಿರುದ್ಧ ಭಾರತೀಯ ನ್ಯಾಯ್ ಸಹಿತಾ (ಬಿಎನ್‌ಎಸ್) ಸೆಕ್ಷನ್ 72, 77 ಮತ್ತು 294 ಮತ್ತು ಐಟಿ ಕಾಯ್ದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಸಿಎಂ ಯಾದವ್ ಕಿಡಿ
ಇನ್ನು ಘಟನೆ ಬಗ್ಗೆ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಪ್ರತಿಕ್ರಿಯಿಸಿದ್ದು, ಮಧ್ಯಪ್ರದೇಶದಲ್ಲಿ ಕಾನೂನು ಕಟ್ಟುನಿಟ್ಟಾಗಿದೆ. ಅಪರಾಧ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರನ್ನೂ ಬಿಡಲಾಗುವುದಿಲ್ಲ. ಉಜ್ಜಯಿನಿ ಇರಲಿ ಅಥವಾ ಇಡೀ ರಾಜ್ಯವೇ ಇರಲಿ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಾವೆಲ್ಲರೂ ಉತ್ತಮ ಆಡಳಿತಕ್ಕೆ ಬದ್ಧರಾಗಿದ್ದೇವೆ. ಅದರಲ್ಲಿ ರಾಜಕೀಯ ಮಾಡುವವರು ಕೋಲ್ಕತ್ತಾ ಘಟನೆಯ ಬಗ್ಗೆ ಅವರು ಮಾತನಾಡುವುದಿಲ್ಲ. ನಾವೆಲ್ಲರೂ ಕಾನೂನಿನ ನಿಯಮಕ್ಕೆ ಬದ್ಧರಾಗಿದ್ದೇವೆ. ಎಲ್ಲಿ ಯಾವುದೇ ತೊಂದರೆ ಇದ್ದರೂ ಅದನ್ನು ಕಟ್ಟುನಿಟ್ಟಾಗಿ ನಿಭಾಯಿಸುತ್ತೇವೆ ಎಂದು ಸಿಎಂ ಯಾದವ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Physical Abuse: ಮಹಿಳೆಯ ಬಾಯಿ ಮುಚ್ಚಿ ಎಳೆದೊಯ್ಯಲು ಯತ್ನಿಸಿದ ವ್ಯಕ್ತಿಗೆ ಗೂಸಾ, ಮರ್ಮಾಂಗ ಜಖಂ