Sunday, 22nd December 2024

Viral News: ಕೈದಿಯ ಗುದದ್ವಾರದಲ್ಲಿತ್ತು ಮೊಬೈಲ್ ಫೋನ್; ಎಕ್ಸ್‌ರೇಯಿಂದ ಶಾಕಿಂಗ್ ಸಂಗತಿ ಬಯಲು

Gujarat Shocker

ಅಹ್ಮದಾಬಾದ್‌: ಗುಜರಾತ್‍ನ(Gujarat Horror) ಭಾವ್‌ನಗರ ಜೈಲಿನಲ್ಲಿದ್ದ ಕೈದಿಯೊಬ್ಬ ತನ್ನ ಗುದದ್ವಾರದಲ್ಲಿ ಮೊಬೈಲ್ ಫೋನ್ ಅಡಗಿಸಿಟ್ಟ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಜೈಲಿನ ಆಡಳಿತಾಧಿಕಾರಿಗಳಿಗೆ ಕೈದಿಯ ಮೇಲೆ  ಅನುಮಾನ ಬಂದು ತಕ್ಷಣ ಕೈದಿಯ ಗುದನಾಳದ ಎಕ್ಸ್-ರೇ ತೆಗಿಸಿದಾಗ ನಂತರ ಈ ವಿಚಾರ ಬಯಲಾಗಿದೆ.  ಎಕ್ಸ್-ರೇಯಲ್ಲಿ ಕೈದಿಯ ಗುದದ್ವಾರದಲ್ಲಿ ಮೊಬೈಲ್ ಪೋನ್ ಇರುವುದು ಕಂಡುಬಂದಿದೆ. ಇದು ಜೈಲಿನ ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ(Viral News).

33 ವರ್ಷದ ರವಿ ಬರೈಯಾ ಎಂಬ ಕೈದಿಯ ಗುದದ್ವಾರದಲ್ಲಿ ಮೊಬೈಲ್ ಪೋನ್ ಪತ್ತೆಯಾಗಿದೆ. ಘಟನೆಯ ನಂತರ ಭಾವನಗರ ಜಿಲ್ಲಾ ಕಾರಾಗೃಹದ ಉಸ್ತುವಾರಿ ಜೈಲರ್ ವಿಷ್ಣುಜಿ ವಘೇಲಾ ಅವರು ನೀಲಂ ಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 223 ಮತ್ತು ಕೈದಿಗಳ ಕಾಯ್ದೆಯ ಸೆಕ್ಷನ್ 42, 43 ಮತ್ತು 45 (12) ಅನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಘೇಲಾ ಅವರ ಪ್ರಕಾರ, ಡಿಸೆಂಬರ್ 4 ರ ಸಂಜೆ, ಸ್ಥಳೀಯ ತನಿಖಾ ದಳವು ಜೈಲಿನ ಆವರಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಶೋಧದ ಸಮಯದಲ್ಲಿ, ಜೈಲಿನ ಒಂದು ವಿಭಾಗದಲ್ಲಿ ಜೋಡಿಸಲಾದ ಮೊಬೈಲ್ ಫೋನ್ ಚಾರ್ಜರ್ ಪತ್ತೆಯಾಗಿದೆ. ಬ್ಯಾರಕ್‍ನಲ್ಲಿದ್ದ ಎಲ್ಲ ಕೈದಿಗಳನ್ನು ವಿಚಾರಣೆ ನಡೆಸಿದಾಗ, ರವಿ ಬರೈಯಾ ವರ್ತನೆ ಅನುಮಾನವನ್ನು ಉಂಟುಮಾಡಿದೆ. ಹಾಗಾಗಿ ಆತನ ದೇಹವನ್ನು ಸಂಪೂರ್ಣವಾಗಿ  ತಪಾಸನೆ ನಡೆಸಿದಾ ಯಾವ ವಸ್ತುವು ಪತ್ತೆಯಾಗಲಿಲ್ಲ. ಆದರೆ ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಮೇರೆಗೆ, ಜೈಲು ಅಧಿಕಾರಿಗಳು, ಬರೈಯಾ ಗುದದ್ವಾರದಲ್ಲಿ ಏನನ್ನಾದರೂ ಬಚ್ಚಿಟ್ಟಿರಬಹುದು ಎಂದು ಶಂಕಿಸಿ, ಅವನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

Gujarat Shocker

ನಂತರ ವೈದ್ಯಕೀಯ ಅಧಿಕಾರಿ ಹೆಚ್ಚಿನ ಪರೀಕ್ಷೆಗಾಗಿ ಬರೈಯಾ ಅವನನ್ನು ಭಾವನಗರದ ಸಾರಥಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆಸ್ಪತ್ರೆಯಲ್ಲಿ ನಡೆಸಿದ ಎಕ್ಸ್-ರೇಯಲ್ಲಿ ಅವನ ಗುದದ್ವಾರದಲ್ಲಿ ಮೊಬೈಲ್ ಫೋನ್ ಅಡಗಿಸಿಟ್ಟಿರುವುದು ದೃಢಪಟ್ಟಿದೆ. ನಂತರ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ದಿನದಲ್ಲಿ ಸಾವಿರ ಮಂದಿಯೊಂದಿಗೆ ಸೆಕ್ಸ್‌ ಮಾಡುವುದೇ ಗುರಿ: ಟ್ರೇನಿಂಗ್‌ನಲ್ಲಿ ಬ್ಯುಸಿ ಆದ ನಟಿ!

ಮೂಲಗಳ ಪ್ರಕಾರ, ಬರೈಯಾ ಅವನನ್ನು ಅಕ್ಟೋಬರ್ 19, 2024 ರಿಂದ ಭಾವನಗರ ಜಿಲ್ಲಾ ಜೈಲಿನಲ್ಲಿರಿಸಲಾಗಿದ್ದು, ಸೆಕ್ಷನ್ 87, 64 (2) (ಐ) (ಎಂ), 65 (ಎ) ಮತ್ತು ವರ್ತೇಜ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಆರೋಪಗಳನ್ನು ಎದುರಿಸುತ್ತಿದ್ದಾನೆ. ನಿಷೇಧಿತ ಮೊಬೈಲ್ ಫೋನ್ ಮತ್ತು ಚಾರ್ಜರ್ ಜೈಲಿಗೆ ಹೇಗೆ ತೆಗೆದುಕೊಂಡು ಬಂದಿದ್ದಾನೆ ಮತ್ತು  ಬರೈಯಾ ಎಷ್ಟು ಸಮಯದಿಂದ ಈ ಪೋನ್‍ ಅನ್ನು ಬಳಸುತ್ತಿದ್ದನು ಎಂಬುದರ ಬಗ್ಗೆ ತನಿಖಾಧಿಕಾರಿಗಳು ತನಿಖೆ ನಡೆಸಿದ್ದಾರೆ.