Thursday, 9th January 2025

Viral News: ಮನೆಗೆ ಕನ್ನ ಹಾಕಲು ಬಂದವನು ಏನೂ ಸಿಗದೇ ಸಿಟ್ಟಿನಲ್ಲಿ ಮಹಿಳೆಗೆ ಕಿಸ್‌ ಮಾಡಿಬಿಟ್ಟ!

Mumbai Shocker

ಮುಂಬೈ: ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ ಮನೆಯಲ್ಲಿದ್ದ ಮಹಿಳೆಗೆ ಚುಂಬಿಸಿ ಪರಾರಿಯಾಗಿರುವ ವಿಚಿತ್ರ ಘಟನೆ ಮುಂಬೈನ(Mumbai Shocker) ಮಲಾಡ್ ಉಪನಗರದಲ್ಲಿ ನಡೆದಿದೆ. ಈ ಘಟನೆ ಜನವರಿ 3, 2025 ರಂದು ಮಲಾಡ್‍ನ ಕುರಾರ್ ಪ್ರದೇಶದಲ್ಲಿ ನಡೆದಿದೆ. ದರೋಡೆ ಮಾಡುವ ಉದ್ದೇಶದಿಂದ ಮನೆಗೆ ಹೊಕ್ಕ ಕಳ್ಳನಿಗೆ ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಸಿಗದಿದ್ದಾಗ ಆತ ಈ ಕೃತ್ಯ ಎಸಗಿದ್ದಾನೆ(Viral News).

ಕಳ್ಳ ಚುಂಬಿಸಿದ್ದರಿಂದ ಆಘಾತಗೊಂಡ ಮಹಿಳೆ ತಕ್ಷಣ ಪೊಲೀಸರನ್ನು ಸಂಪರ್ಕಿಸಿ ಆರೋಪಿಯ ವಿರುದ್ಧ ದೂರು ನೀಡಿದ್ದಾರೆ. ಅಧಿಕಾರಿಗಳು ತಕ್ಷಣ ಪ್ರತಿಕ್ರಿಯಿಸಿ ಮಹಿಳೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ಮತ್ತು ಪುರಾವೆಗಳ ಸಂಗ್ರಹಿಸಿ ನಂತರ ಪೊಲೀಸರು ಶೀಘ್ರದಲ್ಲಿಯೇ ಆರೋಪಿಯನ್ನು ಗುರುತಿಸಿ ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಆರೋಪಿ ಮಲಾಡ್‌ನ ಕುರಾರ್‌ ನಿವಾಸಿಯಾಗಿದ್ದು, ಯಾವುದೇ ಕೆಲಸವಿಲ್ಲದೆ ನಿರುದ್ಯೋಗಿದ್ದಾನೆ ಮತ್ತು ಆರೋಪಿಯ ವಿರುದ್ಧ  ಈ ಹಿಂದೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಪ್ರಕಾರ, ಮಹಿಳೆ  ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ತಿಳಿದ ಆರೋಪಿ ಮನೆಗೆ ನುಗ್ಗಿ ಬಾಗಿಲು ಲಾಕ್ ಮಾಡಿ ಮಹಿಳೆಯ  ಬಾಯಿ ಮುಚ್ಚಿ ಬೆಲೆ ಬಾಳುವ ವಸ್ತುಗಳನ್ನು ನೀಡುವಂತೆ ಕೇಳಿದ್ದಾನೆ. ಆದರೆ ಮಹಿಳೆ ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳಿಲ್ಲ,ಚಿನ್ನಾಭರಣಗಳಿಲ್ಲ ಎಂದು ಹೇಳಿದ್ದಕ್ಕೆ ಕೋಪಗೊಂಡ ಆರೋಪಿ ಆಕೆಗೆ ಮುತ್ತಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ದುಬಾರಿ ಕಾರಿನಲ್ಲಿ ಬಂದು ಮೊಟ್ಟೆ ವ್ಯಾಪಾರಿಗೆ ಟೋಪಿ ಹಾಕಿದ “ಅಂಡಾ ಚೋರ್”! ವಿಡಿಯೊ ವೈರಲ್‌

ಕಳ್ಳ ಮಹಿಳೆಗೆ ಮುತ್ತಿಟ್ಟ ಘಟನೆ ಇದೇ ಮೊದಲಲ್ಲ, ಈ ಹಿಂದೆ ಬ್ರೆಜಿಲ್‍ನಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯ ಸಮೀಪವಿರುವ ಔಷಧಾಲಯಕ್ಕೆ ಭೇಟಿ ನೀಡಿದ್ದರು.  ಆ ಸಮಯದಲ್ಲಿ ಇಬ್ಬರು ದರೋಡೆಕೋರರು ಅಂಗಡಿಗೆ ನುಗ್ಗಿದರು. ಆದರೆ ವಿಚಿತ್ರವೆಂದರೆ ಕ್ಯಾಶ್ ಕೌಂಟರ್‌ನಲ್ಲಿದ್ದ ಹಣವನ್ನು ದರೋಡೆ ಮಾಡಿದ್ದಾನೆ. ಆದರೆ  ಕೊನೆಗೆ ದರೋಡೆಕೋರನೊಬ್ಬ ಮಹಿಳೆಯ ಹಣೆಗೆ ಮುತ್ತಿಟ್ಟು ಪರಾರಿಯಾಗಿದ್ದನಂತೆ.

Leave a Reply

Your email address will not be published. Required fields are marked *