Thursday, 9th January 2025

Viral Video: ಗರ್ಲ್‌ಫ್ರೆಂಡ್‌ಗಾಗಿ ಡಿಸಿಪಿ ಕಚೇರಿ ಬಳಿಯೇ ಗ್ಯಾಂಗ್‌ಸ್ಟರ್‌ನಿಂದ ಕಾರ್‌ ಸ್ಟಂಟ್- ಪೊಲೀಸರೇ ಸ್ಟನ್‌! ಈತನ ಮೇಲಿದೆ 30 ಕೇಸ್‌

ಕಾನ್ಪುರ: ಗ್ಯಾಂಗ್‌ಸ್ಟರ್ (Gangster) ಒಬ್ಬ ತನ್ನ ಗರ್ಲ್ ಫ್ರೆಂಡ್ (Girl Friend) ಬರ್ತ್ ಡೇಯನ್ನು (Birthday) ಪಬ್ಲಿಕ್ ಪ್ಲೇಸ್‌ನಲ್ಲಿ ಧಾಮ್ ಧೂಂ ಎಂದು ಆಚರಿಸಿಕೊಂಡ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (viral Video) ಆಗುತ್ತಿದೆ. ಪೊಲೀಸರಿಗೆ ಚಾಲೆಂಜ್ ಹಾಕುವ ರೀತಿಯಲ್ಲಿ ಈ ಗ್ಯಾಂಗ್ ಸ್ಟರ್ ತನ್ನ ಗರ್ಲ್ ಫ್ರೆಂಡ್ ಬರ್ತ್ ಡೇ ಆಚರಿಸಿದ್ದು ಹಲವಾರು ಎಸ್‌ಯುವಿ (SUV)ಗಳೊಂದಿಗೆ ಡಿಸಿಪಿ ಕಚೇರಿ (DCP Office) ಹಿಂಭಾಗದಲ್ಲೇ ಸ್ಟಂಟ್ ನಡೆಸಿದ್ದು ಇದೀಗ ವೈರಲ್ ಆಗುವ ಮೂಲಕ ವಿವಾದಕ್ಕೂ ಕಾರಣವಾಗಿದೆ.

ಕಾನ್ಪುರದ (Kanpur) ಬಾರ್ರಾ ಪೊಲೀಸ್ ಠಾಣಾ (Barra Police Station) ವ್ಯಾಪ್ತಿಯ ಡಿಸಿಪಿ ಕಚೇರಿ ಹಿಂಬಾಗದಲ್ಲೇ ಈ ವಿಡಿಯೋ ಶೂಟ್ ಮಾಡಿರುವುದು ಇದೀಗ ಬಹಿರಂಗಗೊಂಡಿದೆ. ಈ ಗ್ಯಾಂಗ್‌ಸ್ಟರ್ ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಿ, ಸುಮಾರು 12 ವಾಹನಗಳೊಂದಿಗೆ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಿರುವ ವಿಡಿಯೋ ಇದಾಗಿದ್ದು, ಗ್ಯಾಂಗ್‌ಸ್ಟರ್ ಇದ್ದ ವಾಹನದಲ್ಲಿ ಆತನ ಗರ್ಲ್‌ಫ್ರೆಂಡ್ ಇರುವುದನ್ನೂ ಕಾಣಬಹುದಾಗಿದೆ.

ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವಂತೆ ಈ ಗ್ಯಾಂಗ್‌ಸ್ಟರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ವಿಡಿಯೋದಲ್ಲಿರುವಂತೆ ಗ್ಯಾಂಗ್ ಸ್ಟರ್ ಕಪ್ಪು ಮಹಿಂದ್ರಾ ಸ್ಕಾರ್ಪಿಯೋ ವಾಹನವನ್ನು ಡ್ರೈವ್ ಮಾಡುತ್ತಿದ್ದು, ಇದಕ್ಕೆ ನಂಬರ್ ಪ್ಲೇಟ್ ಇಲ್ಲದಿರುವುದನ್ನು ಕಾಣಬಹುದಾಗಿದೆ, ಇದರ ಹಿಂದೆ ಇನ್ನಷ್ಟು ಎಸ್.ಯು.ವಿ.ಗಳು ಫಾಲೋ ಮಾಡ್ಕೊಂಡು ಬರುವುದನ್ನೂ ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಕಾರಿಗೆ ಸೈರನ್ ಮತ್ತು ವಿಂಡೋ ಗ್ಲಾಸ್‌ಗಳಿಗೆ ಕಪ್ಪು ಟಿಂಟ್ ಹಾಕಿರುವುದನ್ನು ಗಮನಿಸಬಹುದು.

ಇನ್ನು ಈ ಗ್ಯಾಂಗ್‌ಸ್ಟರ್‌ನ ಗರ್ಲ್‌ಫ್ರೆಂಡ್ ಎಂದು ಹೇಳುವಾಕೆ ಕ್ಯಾಮರಾ ಕಡೆಗೆ ಕೈ ಬೀಸುತ್ತಿರುವುದನ್ನೂ ಸಹ ಕಾಣಬಹುದಾಗಿದೆ. ಈ ಕಾರುಗಳು ರಸ್ತೆಗಳಲ್ಲಿ ವೇಗವಾಗಿ ಸಾಗುತ್ತಾ, ಮೈದಾನದಂತಿರುವ ಜಾಗದಲ್ಲಿ ಮರಕ್ಕೆ ಸುತ್ತು ಹಾಕುತ್ತಾ ಸ್ಟಂಟ್ ಮಾಡುತ್ತಿರುವುದೂ ಸಹ ವಿಡಿಯೋದಲ್ಲಿ ದಾಖಲಾಗಿದೆ. ಈ ಸಂದರ್ಭದಲ್ಲಿ ಗ್ಯಾಂಗ್ ಸ್ಟರ್ ಸಹ ಕೆಮರಾದತ್ತ ಕೈಬೀಸುತ್ತಿರುವುದನ್ನು ಕಾಣಬಹುದಾಗಿದೆ.

30 ವರ್ಷ ಪ್ರಾಯದ ಈ ಗ್ಯಾಂಗ್‌ಸ್ಟರ್ ವಿರುದ್ಧ ಈಗಾಗಲೇ 30 ಗಂಭೀರ ಪ್ರಕರಣಗಳಿವೆ. ಇವುಗಳಲ್ಲಿ, ಟಿನೇಜ್ ಯುವತಿಯೊಬ್ಬಳ ಜೊತೆ ಆಕ್ಷೇಪಾರ್ಹ ವಿಡಿಯೋ ಮಾಡಿರುವ ಘಟನೆಗೆ ಸಂಬಂಧಿಸಿದ ಗಂಭೀರ ಪ್ರಕರಣವೂ ಸೇರಿದೆ. ಇನ್ನು, ಅತ್ಯಾಚಾರ ಸಂತ್ರಸ್ತೆಯಾಗಿರುವ ವೈದ್ಯ ದಂಪತಿಯ ಪುತ್ರಿಯೊಬ್ಬಳಿಗೆ ಬೆದರಿಕೆಯೊಡ್ಡಿರುವ ಪ್ರಕರಣವೂ ಈತನ ಮೇಲಿದೆ. ಮಾತ್ರವಲ್ಲದೇ ಪೊಲೀಸರು ಈ ಹಿಂದೆ ಈತನ ವಿರುದ್ಧ ಗ್ಯಾಂಗ್‌ಸ್ಟರ್ ಕಾಯ್ದೆಯನ್ನೂ ಸಹ ಹಾಕಿದ್ದರು ಎಂದು ಮಾಹಿತಿಗಳಿಂದ ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ: Thala Ajith: 180 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದ್ದ ತಲ ಅಜಿತ್‌ ರೇಸಿಂಗ್‌ ಕಾರು ಅಪಘಾತ; ವಿಡಿಯೊ ವೈರಲ್‌

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಗ್ಯಾಂಗ್‌ಸ್ಟರ್ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಗಳು ಕೇಳಿಬಂದ ಹಿನ್ನಲೆಯಲ್ಲಿ, ಕಾನ್ಪುರ ಪೊಲೀಸರು ಆರೋಪಿಯನ್ನು ಬಂಧಿಸುವ ಕುರಿತಾಗಿ ಮಾಹಿತಿ ನೀಡಿದ್ದಾರೆ. ‘ಈ ಘಟನೆಗೆ ಸಂಬಂಧಿಸಿದಂತೆ ಬರ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಬಂಧಿತ ಸೆಕ್ಷನ್ ಗಳಡಿಯಲ್ಲಿ ಆರೊಪಿ ವಿರುದ್ಧ ಪ್ರಕರಣ ದಾಖಲುಗೊಂಡಿದೆ. ಪ್ರಮುಖ ಆರೋಪಿ ಸಹಿತ ಆತನ ಇನ್ನಿಬ್ಬರು ಜೊತೆಗಾರರನ್ನು ಈಗಾಗಲೇ ಬಂಧಿಸಲಾಗಿದೆ.’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *