ಮಧುಗಿರಿ: ತಾಲ್ಲೂಕಿನ ಕೊಡಿಗೇನಹಳ್ಳಿಯಲ್ಲಿ ನ.೨೭ ರ ಭಾನುವಾರ, ಸಮಯ ಬೆಳಿಗ್ಗೆ ೧೧.೩೦ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆ ಮತ್ತು ನಿರ್ವಹಣಾ ಸಮಿತಿ ವತಿಯಿಂದ ಸಂವಿಧಾನ ಪಿತಾಮಹ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆ ಹಬ್ಬದ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿ ಪರ ಚಿಂತಕರಾದ ಡಾ.ಕೆ. ನರಸಿಂಹಪ್ಪ ಕಾಳೇನಹಳ್ಳಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂವಿಧಾನ ಪಿತಾಮಹ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಯನ್ನು ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರು, ಶಾಸಕರಾದ ಸತೀಶ್ ಜಾರಕಿ ಹೊಳಿ ಲೋಕಾ ರ್ಪಣೆ ಮಾಡುವರು.
ನಾಮ ಫಲಕ ಮತ್ತು ಸಂದೇಶ ಫಲಕಗಳ ಅನಾವರಣವನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾದ ಎ. ನಾರಾಯಣಸ್ವಾಮಿರವರು ನೇರವೇರಿಸ ಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ರವರು ನೇರವೇರಿಸುವರು.
ಮುಖ್ಯ ಅತಿಥಿಗಳಾಗಿ ಮಾಜಿ ಕೇಂದ್ರ ಸಚಿವರಾದ ಕೆ.ಹೆಚ್. ಮುನಿಯಪ್ಪನವರು, ವಿಶ್ರಾಂತ ಅಪರ ಮುಖ್ಯ ಕಾರ್ಯದರ್ಶಿಗಳಾದ ಬಿ.ಹೆಚ್. ಅನಿಲ್ ಕುಮಾರ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಎಂ.ವಿ. ವೀರಭದ್ರಯ್ಯರವರು ವಹಿಸಲಿದ್ದು ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರು, ಹಾಗೂ ಕೆ.ಪಿ.ಸಿ.ಸಿ, ಉಪಾಧ್ಯಕ್ಷರಾದ ಕೆ.ಎನ್. ರಾಜಣ್ಣ ಅವರು ಉಪಸ್ಥಿತರಿರುವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ರವರು ರಚಿಸಿರುವ ವಚನಗಳು ಮತ್ತು ಸಂವಿಧಾನ ಕೃತಿಯನ್ನು ಮಾಜಿ ಸಚಿವರಾದ ಎಚ್.ಆಂಜನೇಯರವರು ಬಿಡುಗಡೆ ಮಾಡುವರು. ಡಾ. ಕೆ. ನರಸಿಂಹಪ್ಪ ಕಾಳೇನಹಳ್ಳಿ ಅವರು ಬರೆದಿರುವ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್‌ರವರ ನುಡಿಮುತ್ತುಗಳು ಎಂಬ ಕೃತಿಯನ್ನು ಜನಮುಖಿ ಸಂಸ್ಥೆ ಹಾಗೂ ಸಮಿತಿಯ ಮಹಾಪೊಷಕರಾದ ಎಲ್.ಸಿ. ನಾಗರಾಜುರವರು ಬಿಡುಗಡೆ ಮಾಡಲಿದ್ದಾರೆ ಎಂದರು.
ಪ್ರಧಾನ ಭಾಷಣಕಾರರಾಗಿ ಹೆಚ್.ಎನ್. ನಾಗಮೋಹನ್‌ದಾಸ್ ರವರು ಡಾ ಅಂಬೇಡ್ಕರ್ ರವರ ಆಶಯಗಳು ಮತ್ತು ಮೀಸಲಾತಿ ಕುರಿತು ಮಾತನಾಡಲಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ಅಂಬೇಡ್ಕರ್‌ರವರ ಆಶಯಗಳು ಮತ್ತು ಮಹಿಳಾ ಸಬಲೀಕರಣ ಕುರಿತು ಮಾತನಾಡಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ದಲಿತ ಒಕ್ಕೂಟದ ಅಧ್ಯಕ್ಷ ಡಾ. ಸಂಜೀವಮೂರ್ತಿ, ಪತ್ರಕರ್ತ ಡಾ. ಮಹಾರಾಜು, ತಾ.ಪಂ ಮಾಜಿ ಸದಸ್ಯ ಜೆ.ಡಿ.ವೆಂಕಟೇಶ್ , ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಗುಂಡಗಲ್ಲು ಶಿವಣ್ಣ, ಜೆಡಿಎಸ್ ಮುಖಂಡ ಪಿ.ಬಿ. ರಂಗಧಾಮಯ್ಯ ಹಾಗೂ ವಿವಿಧ ಸಂಘಟನೆಗಳ ಮುಖಂಡರು , ಪದಾಧಿಕಾರಿಗಳು ಮತ್ತಿತರರು ಇದ್ದರು.