Monday, 25th November 2024

ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕಾಗಿದೆ

ತುಮಕೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ “ಪ್ರವೀಣ್ ನೆಟ್ಟಾರು”ರವರ ಕೊಲೆ ಖಂಡನೀಯ, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಸಾಮಾನ್ಯ ಹಿಂದೂ ಕಾರ್ಯಕರ್ತರಿಗೆ ಈ ಸರಕಾರದಲ್ಲಿ ರಕ್ಷಣೆ ಇಲ್ಲದಿರುವುದು ವಿಷಾದನೀಯ. ಇದನ್ನು ಖಂಡಿಸಿ ರಾಜಿನಾಮೆ ನೀಡುವುದರಿಂದ ಏನು ಸಾಧಿಸಲಾಗುವುದಿಲ್ಲ. ಹಿಂದೂ ಯುವಕರ ಮೇಲೆ ಹಲ್ಲೆಯಾಗು ತ್ತಿರುವುದು ಕೊಲೆ ಮಾಡುತ್ತಿರುವುದನ್ನು ನೋಡಿದಲ್ಲಿ ಹಿಂದೂ ಯುವ ಶಕ್ತಿಯನ್ನು ಹಾಳು ಮಾಡಲು ಒಂದು ಸಂಚು ಎಂದು ಹೇಳಬೇಕಾಗಿದೆ. ಭಾರತ ದೇಶವನ್ನು ಇಸ್ಲಾಮೀ ಕರಣಗೊಳಿಸಲು ಮೂಲಭೂತವಾದಿ ಇಸ್ಲಾಂ ಜನರು ಈ ತರಹದ ಕೃತ್ಯ ಮಾಡುತ್ತಿದ್ದಾರೆ ಎಂದರು.

ವಿರೋಧ ಪಕ್ಷಗಳು ಅದರಲ್ಲಿಯೂ ಕಾಂಗ್ರೆಸ್ ಹಿಂದೂ ಸಮಾಜ ಶಕ್ತಿಯನ್ನು ಹಾಳು ಮಾಡುತ್ತಿರುವುದನ್ನು ಖಂಡಿಸಲೇ ಬೇಕಾಗಿದೆ. ರಾಜಕಾರಣ, ಅಧಿಕಾರಕ್ಕೋಸ್ಕರ ಹಿಂದೂ ಜಾತಿ/ವರ್ಗದ ವ್ಯವಸ್ಥೆ ಬಳಸಿಕೊಂಡು ಒಂದೊಂದು ವರ್ಗದವರನ್ನು ಎತ್ತಿ ಕೊಳ್ಳುತ್ತಾ ಆಯಾ ವರ್ಗದ ಜಾತಿ ರಾಜಕೀಯ ನಾಯಕರು ನಿಂತಿರುವುದು ಈ ರಾಜ್ಯದ ದುರ್ದೈವ. ವಿದ್ಯಾ ಸಂಸ್ಥೆಗಳ ಕೆಲವು ಪ್ರಾದ್ಯಾಪಕರು – ಬಂಡಾಯ ಸಾಹಿತಿಗಳು ಎಂದು ಕರೆಸಿಕೊಳ್ಳುವ ಒಂದು ವರ್ಗ ಬುದ್ದಿ ಜೀವಿಗಳು ಎಂಬ ಹೆಸರಿನಲ್ಲಿ ಹಿಂದೂ ಸಮಾಜವನ್ನು ಒಡೆಯುತ್ತಿರುವುದು ಒಂದು ವಿಪರ್ಯಾಸ.

ಜಾತಿಗಳ ಹೆಸರಿನಲ್ಲಿ ಹುಟ್ಟಿಕೊಳ್ಳುತ್ತಿರುವ ಸಂಘ ಸಂಸ್ಥೆಗಳು ಒಂದು ಕಡೆ ಹಿಂದೂ ಸಮಾಜವನ್ನು ಛಿದ್ರಮಾಡುತ್ತಿವೆ. ಈ ಮೇಲಿನ ಸಂಗತಿಗಳಿಂದ ಹಿಂದೂ ಸಮಾಜವು ಹಾಳಾಗುತ್ತಿದ್ದು ಇದರ ಬಗ್ಗೆ ಹಿಂದು ಸಮಾಜವನ್ನು ಎಚ್ಚರಿಸಬೇಕಾದ ಮಠಾಧೀಶರುಗಳು ಸುಮ್ಮನಿರುವುದು ಜನತೆಯ ದುರ್ದೈವ. ಪ್ರಜ್ಞಾವಂತ ಯುವ ಸಂಘಟನೆಗಳು ಯುವಕರುಗಳು ಇಂತಹ ಘಟನೆಗಳು ನಡೆದಲ್ಲಿ ಪಕ್ಷಪಾತ ಮಾಡದೆ ನಾವು ದೇಶಕ್ಕಾಗಿ ನಮ್ಮ ನೆಲ ಜಲಕ್ಕಾಗಿ ಒಗ್ಗಟ್ಟಾಗಿ ಎದ್ದೇಳಬೇಕಾಗಿದೆ ಎಂದರು.

2018ರಿಂದ ಈಚೆಗೆ ಸುಮಾರು 40ರಿಂದ 50 ಪ್ರಕರಣಗಳು ನಡೆದಿರುವುದರಿಂದ ರಾಜ್ಯದ ಅಭಿವೃದ್ದಿಗೆ ಹಿನ್ನಡೆಯಾಗಿದೆ. ಹಿಂದೂ ಸಂಘಟನೆಗಳನ್ನು ದಿಕ್ಕು ತಪ್ಪಿಸುತ್ತಿರುವ ವಿರೋಧ ಪಕ್ಷಗಳು ಈ ರಾಜ್ಯದ ನೆಮ್ಮದಿ ಕೆಡಿಸಲು ಹೊರಟಿದ್ದಾರೆ. ಆ.ಉ.ಪಾಳ್ಯ ಶಿವಮೊಗ್ಗ ಮಂಗಳೂರು ಇಂತಹ ಪ್ರದೇಶಗಳಲ್ಲಿ ಈ ರೀತಿಯ ಪ್ರಕರಣಗಳು ನಡೆಯುತ್ತಿದ್ದು ಗೃಹ ಇಲಾಖೆ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲವೆಂಬುದು ಜನಜನಿತ ಎಂದರು.

ಗುಪ್ತದಳ ನಿಷ್ಟ್ರಿಯವಾಗಿದೆ

ಪ್ರಭಾವಿ ಅಧಿಕಾರಿಗಳು ಆಯಾ ಕಟ್ಟಿನ ಸ್ಥಳದಲ್ಲಿ ಹೊರತು, ಸರ್ಕಾರಕ್ಕೆ / ಪ್ರಜೆಗಳಿಗೆ ನಿಷ್ಠೆ ಹೊಂದಿರುವ ಅಧಿಕಾರಿಗಳು ಇಲಾಖೆಗಳಲ್ಲಿ ಕಾಣುತ್ತಿಲ್ಲ. ಈ ದೇಶ ಶಾಂತಿ ಕ್ರಾಂತಿ ಹೋರಾಟ ನಡೆಸಿ ಸ್ವಾತಂತ್ರ ಪಡೆದುಕೊಂಡಿದೆ, ಸ್ವಾತಂತ್ರ ನಂತರ ತುರ್ತು ಪರಿಸ್ಥತಿ ವಿಮೋಚನೆಗಾಗಿ ಯುವ ಶಕ್ತಿಯನ್ನು ಒಗ್ಗೂಡಿಸಿ ನಡೆಸಿರುವ ಚಳುವಳಿಯನ್ನು ನೋಡಿದೆ.

5 ವರ್ಷಗಳ ಹಿಂದೆಯೇ ಇಸ್ಲಾಮೀಕಣಕ್ಕಾಗಿ ದೇಶ ವಿಭಜನೆ ಹೊಂದಿ ಪಾಕಿಸ್ತಾನದ ಹೆಸರಿನಲ್ಲಿ ಬೇರೆಯಾದ ವ್ಯಕ್ತಿಗಳು ಪುನಃ ಈ ದೇಶಕ್ಕೆ ತೊಂದರೆ ಮಾಡಲು ಹೊರಟಿರುವವರ ವಿರುದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕಾಗಿದೆ.ಈ ಸಂಘಟನೆಗಳ ದುಷ್ಕರ್ಮಿಗಳಿಗೆ ಜೈಲಿನಲ್ಲಿ ಎಲ್ಲಾ ಸೌಲಭ್ಯ ಸವಲತ್ತುಗಳು ಸಿಗುತ್ತಿದ್ದು ಇದಕ್ಕೆ ಕಾರಣವೇನು?ಕರಾವಳಿಯಲ್ಲಿ ನಡೆಯುತ್ತಿರುವ ಉಗ್ರಗಾಮಿ ಚಟುವಟಿಕೆಗಳ ಬಗ್ಗೆ ರಾಷ್ಟಿçÃಯ ಮಟ್ಟದಲ್ಲಿ ಚರ್ಚೆಯಾಗಬೇಕಾಗಿದೆ.

ಈ ದೇಶ ರಾಜ್ಯ ಹಿತಕ್ಕೆ ಧಕ್ಕೆ ತರುತ್ತಿರುವ ರಾಜಕೀಯ ಪಕ್ಷಗಳನ್ನು ಜನತೆ ತಿರಸ್ಕರಿಸಬೇಕಾಗಿದೆ.ಇಲ್ಲಿಯ ನೆಲ, ಜಲ, ಉಪಯೋ ಗಿಸಿಕೊಂಡು ಜೀವನ ನಡೆಸುತ್ತಿರುವ ಇಸ್ಲಾಂ ಜನತೆ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದು, ಇದರ ಬಗ್ಗೆ ಹಿಂದೂ ಸಮಾಜ ದಂಗೆ ಎದ್ದರೆ ಮುಂದಿನ ಪರಿಸ್ಥಿತಿ ಊಹಾತೀತ. ಈ ದೇಶ ನಮ್ಮದು, ಸಂವಿಧಾನ ನಮ್ಮದು, ನಮ್ಮ ನೆಲದ ಕಾನೂನಿಗೆ ನಮ್ಮ ರಾಷ್ಟಿçÃಯತೆಗೆ ಗೌರವ ಕೊಡುವ ಹಾಗಿದ್ದರೆ ಈ ದೇಶದಲ್ಲಿ ಇರಲಿ. ಇಲ್ಲವಾದರೇ ನೀವು ಧರ್ಮ ನಿಷ್ಟರಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳಲೇಬೇಕಾಗಿದೆ.

ತುಮಕೂರಿನ ಎಲ್ಲಾ ಕೋಮು-ಜಾತಿ ಜನತೆಯ ಬಗ್ಗೆ ನನಗೆ ಅಪಾರವಾದ ಅಭಿಮಾನವಿದೆ ಗೌರವವಿದೆ. ನಾವು ತುಮಕೂರು ಬೆಳವಣಿಗೆಗೆ ಒಂದಾಗಿ ಇರೋಣ, ಸಮಾಜದ ಶಾಂತಿ ಹಾಳು ಮಾಡುವವರ ವಿರುದ್ದ ಎಲ್ಲರೂ ಒಟ್ಟಾಗಿ ಹೋರಾಡೋಣ ಕರೆ ನೀಡಿದರು.