Friday, 29th November 2024

ಸರ್ಕಾರಕ್ಕೆ ಮತದಾರರು 2023 ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ

ಗುಬ್ಬಿ : ಮತದಾರರ ಪಟ್ಟಿಯಿಂದ ಮತದಾರರನ್ನು ಕೈಬಿಟ್ಟು ಕಮೀಷನ್ ಸರ್ಕಾರದಿಂದ ಹಣ ಹಂಚಿ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೇಯಲ್ಲಿ ಇರುವ ಬಿಜೆಪಿ ಸರ್ಕಾರಕ್ಕೆ ಮತದಾರರು 2023 ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಕಳ್ಳಿ ಪಾಳ್ಯದಿಂದ ಹೊಸ ಪಾಳ್ಯ, ಹೇರೂರು ಗ್ರಾಮದಿಂದ ಆರ್ ಎಸ್ ಪಾಳ್ಯ, ಅಮ್ಮನಘಟ್ಟ ರಸ್ತೆಯಿಂದ ಜಿ ಹರಿವೇಸಂದ್ರ , ಬಿದರೆ ರಸ್ತೆಯಿಂದ ಕೊಣನಕಲ್ಲು, ಬಿದರೆ ರಸ್ತೆಯಿಂದ ಮುನಿ ಯಪ್ಪನ ಪಾಳ್ಯ ಒಟ್ಟು ಸುಮಾರು ಐದು ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ, ಮಾತನಾಡಿದ ಅವರು ಬಿಜೆಪಿ ಸರ್ಕಾರ ಅಡ್ಡ ದಾರಿ ಹಿಡಿದು ಅಧಿಕಾರಕ್ಕೆ ಬಂದು ಅಭಿವೃದ್ದಿ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಬಿಜೆಪಿಗೆ ಮತ ಹಾಕ ದವರನ್ನು ಗುರುತಿಸಿ ಮತಪಟ್ಟಿಯಿಂದ ಕೈಬಿಟ್ಟು ಮತ್ತೇ ಅಧಿಕಾರ ಹಿಡಿಯಲು ಹಗಲು ಕನಸು ಕಾಣುತ್ತಿದ್ದಾರೆ. ಮತದಾರರು ಯಾರೇ ಹಣಕೊಟ್ಟರು ಪಡೆಯುತ್ತಾರೆ ಆದರೆ ಮತ ಚಲಾಯಿಸುವಾಗ ಯೋಚಿಸಿ ಮತ ಹಾಕುತ್ತಾರೆ ಎಂದರು. ಅತಿಯಾದ ಮಳೆಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಗುಂಡಿ ಮುಚ್ಚುವ ಸಣ್ಣ ಕೆಲಸವನ್ನು ಮಾಡದ ಬಿಜೆಪಿ ಸರ್ಕಾರಕ್ಕೆಮತದಾರರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ‌ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಅಡಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಗಳಮ್ಮ ಕರೆ ತಿಮ್ಮಯ್ಯ, ಉಪಾಧ್ಯಕ್ಷ ಸತ್ಯನಾರಾಯಣ, ಚನ್ನಬಸವೇಗೌಡ, ರಂಗಪ್ಪ, ವೀರೇಶ್, ಅಮ್ಮನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಿ ದೇವಿ ಮಹದೇವಯ್ಯ, ಹೇರೂ ರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸೋಮಶೇಖರ್, ಪಿಡಿಒ ರಾಜಣ್ಣ, ದೇವರಾಜು, ಭದ್ರಣ್ಣ, ಬಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಶಿಕಲಾ ನಾಗರಾಜು, ಉಪಾಧ್ಯಕ್ಷ ಯತೀಶ್,  ರಮೇಶ್,  ಸಿದ್ದರಾಜು, ಕೃಷ್ಣ ಜಿ ರಾವ್, ಶಿವಾಜಿ ರಾವ್, ಚೋಳೂರು ಶಿವನಂಜಪ್ಪ, ಕೋಟಿಲಿಂಗಪ್ಪ,  ಚೇಳೂರು ರಂಗಧಾಮು, ಮುಂತಾದವರಿದ್ದರು.