Sunday, 24th November 2024

ರಾತ್ರಿ, ಬೆಳಿಗ್ಗೆ ಹೊಲಗಳಲ್ಲಿ ಎಚ್ಚರಿಕೆಯಿಂದ ಸಂಚರಿಸಿ

ಮಾನವಿ: ತಾಲೂಕಿನ ನೀರಮಾನ್ವಿ ಮತ್ತು ಬೆಟದೂರು ಬೆಟ್ಟದಲ್ಲಿ ಸುಮಾರು ಕಳೆದ 6 ತಿಂಗಳುಗಳಿಂದ ಬೀಡುಬಿಟ್ಟಿರುವ ಚಿರತೆ ಇಂದಿನವರೆಗೂ ಯಾವುದೇ ಗ್ರಾಮಸ್ಥರಿಗಾಗಲಿ ಸಾಕು ಪ್ರಾಣಿಗಳನ್ನಾಗಲೀ ಮುಟ್ಟಲಿಲ್ಲ, ಆದರೆ ಸಾಮಾನ್ಯವಾಗಿ ರಾತ್ರಿ ಹೊತ್ತಲ್ಲಿ ಜನವಸತಿಯ ಪ್ರದೇಶಕ್ಕೆ ಬಂದು ಹೋಗುವ ಕಾಡುಪ್ರಾಣಿಗಳು ಇದೀಗ ಹಗಲಲ್ಲಿ ಅದೂ ಜನರೆದುರೇ ಬಂದು ಹೋಗುತ್ತಿರುವುದೆ ಎಂದು ಕೆಲವರು ಮಾತುಗಳು ಸುಳ್ಳು, ಜನರ ವಾಸನೆ ಕಂಡರೆ ಸ್ಥಳದಲ್ಲಿ ಚಿರತೆ ಬರುವುದಿಲ್ಲ. ಹಾಗಾಗಿ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ ಆದರೂ ಮುಂಜಾಗ್ರತೆಯ ಕ್ರಮವಾಗಿ ಗ್ರಾಮದ ಜನರು ರಾತ್ರಿ ಸಮಯ ಮತ್ತು ಬೆಳಿಗ್ಗೆ ಹೊಲಗಳಿಗೆ ಹೋಗುವ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಸಂಚಾರ ಮಾಡಬೇಕಾಗುತ್ತದೆ ಎಂದು ಅರಣ್ಯಾಧಿಕಾರಿ ರಾಜೇಶ್ ನಾಯಕ ತಿಳಿಸಿದರು.

ನೀರಮಾನ್ವಿ ಮತ್ತು ಬೆಟ್ಟದೂರು ಗ್ರಾಮದ ಗುಡ್ಡದಲ್ಲಿ ಚಿರತೆಯೊಂದು ಹಗಲಿನಲ್ಲೇ ಪ್ರತ್ಯಕ್ಷವಾಗಿದೆ ಅರಣ್ಯ ಅಧಿಕಾರಿಗಳ ಕ್ಯಾಮೆರಾದಲ್ಲಿಯೂ ಸೆರೆಯಾಗಿದು ಮಾತ್ರವಲ್ಲ, ಬೆಟದೂರು ನೀರಮಾನ್ವಿ ಎರಡು ಬೆಟ್ಟದಲ್ಲಿ ಚಿರತೆ ಸಂಚರಿಸುವ ಸ್ಥಳದಲ್ಲಿ ಅರಣ್ಯ ಅಧಿಕಾರಿಗಳು ವಿಶೇಷ ತಂಡವನ್ನು ರಚಿಸಿ ಬೋನುಗಳನ್ನು ಅಳವಡಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಚಿರತೆಯ ಎಲ್ಲ ಚಲನವಲನಗಳನ್ನು ಗಮನಿಸಿದ್ದು ಆದಷ್ಟು ಬೇಗನೆ ಅದನ್ನು ಹಿಡಿಯುತ್ತೇವೆ ಎನ್ನುತ್ತಾರೆ ಅರಣ್ಯ ಅಧಿಕಾರಿ ರಾಜೇಶ್ ನಾಯಕ.

ಚಿರತೆಗಳು ಬೆಟ್ಟದಲ್ಲಿನ ನಾಯಿ, ಮಂಗ,ಜಿಂಕೆ, ನವಿಲುಗಳನ್ನು ತಿಂದು ಹಾಕಿರುವುದು ಗಮನಕ್ಕೆ ಬಂದಿದೆ. ಇನ್ನೊಂದೆಡೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನುಗಳನ್ನ ಹಾಕಿದ್ದರೂ, ನಾಯಿಯನ್ನು ಬಿಟ್ಟರು ಚಿರತೆ ಅದಕ್ಕೆ ಬಿದ್ದಿಲ್ಲ.ಅರಣ್ಯ ಅಧಿಕಾರಿಗಳ ಎಷ್ಟೇ ಬುದ್ಧಿವಂತಿಕೆ ಉಪಯೋಗಿಸಿದರು ಚಿರತೆಗಳು ಮಾತ್ರ ಬಹಳ ಬುದ್ಧಿವಂತಿಕೆಯಿಂದ ತಪ್ಪಿಸಿಕೊಳ್ಳುತ್ತಿವೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.