ಕೊರಟಗೆರೆ: ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರ ಗಳಲ್ಲಿ ಒಂದಾದ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿಯು ಬಹಳ ಪುರಾತನ ಕಾಲದ ದೇವಸ್ಥಾನವಾಗಿದ್ದು, ಯಾರೇ ಆಗಲಿ ಈ ಸನ್ನೀಧಾನಕ್ಕೆ ಬಂದು ತಮ್ಮ ಹರಕೆಯನ್ನ ಕಟ್ಟಿಕೊಂಡರೆ ಅವರ ಹರಿಕೆಯನ್ನ ಪೂರೈಸುವ ಶಕ್ತಿ ಆಂಜನೇಯಸ್ವಾಮಿ ಇದೆ ಎಂದು ಭಕ್ತರ ನಂಭಿಕೆಯಾಗಿದೆ. ಶ್ರಾವಣ ಹಾಗೂ ಕಾರ್ತಿಕ ಮಾಸದಲ್ಲಿ ಸಾವಿರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆಯುತ್ತಾರೆ.
ಶ್ರಾವಣ ಮಾಸದ ಮೊದಲನೇಯ ಶನಿವಾರದಂದು ಸ್ವಾಮಿಯ ಸನ್ನಿಧಾನದಲ್ಲಿ ವಿಶೇಷ ಅಭಿಷೇಕ, ಪಂಚಾಮೃತ, ಹೂವಿನ ಅಲಂಕಾರ, ವಿಳೆದೆಲೆ ಅಲಂಕಾರ ಸೇರಿದಂತೆ ಧಾರ್ಮಿಕ ಪೂಜಾ ಕೈಕಾರ್ಯಗಳು ನಡೆದವು. ಬೆಳಿಗ್ಗೆಯಿಂದ ಸಂಜೆಯವರೆಗೂ ನೂರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನ ಮಾಡಲಾಗಿತ್ತು.
ಪ್ರಧಾನ ಆರ್ಚಕ ರಾಮಚಾರ್ ಮಾತನಾಡಿ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಹನುಮ ಭೀಮ ಮತ್ತು ಮಧ್ವ ಮೂರು ಅವತಾರ ಇರುವಂತ ಪುಣ್ಯ ಕ್ಷೇತ್ರದದಲ್ಲಿ ಹತ್ತಾರು ಪವಾಡಗಳು ನಡೆಯುತ್ತವೆ. ಆಂಜನೇಯ ಸ್ವಾಮಿಯನ್ನ ನಂಬಿ ಇಲ್ಲಿಗೆ ಬರುವ ಭಕ್ತರಿಗೆ ಯಾವತ್ತು ಕೈ ಬಿಡುವುದಿಲ್ಲ ಎಂದು ತಿಳಿಸಿದರು.