ಮಧುಗಿರಿ: ಇತ್ತೀಚಿಗೆ ಸುರಿದ ಮಳೆಯ ಕೋಡಿ ನೀರಿಗೆ ಕೊಚ್ಚಿ ಹೋಗಿದ್ದ ಮೃತನ ಕುಟುಂಬ ವರ್ಗದವರಿಗೆ ಶಾಸಕ ಎಂ.ವಿ.ವೀರಭದ್ರಯ್ಯ ಎಸ್.ಡಿ.ಆರ್.ಎಫ್ ಅನುದಾನ ದಲ್ಲಿ ೫ ಲಕ್ಷ ರೂ ಪರಿಹಾರದ ಚೆಕ್ ವಿತರಿಸಿದರು.
ತಾಲ್ಲೂಕಿನ ಮಿಡಗೇಶಿ ಹೋಬಳಿಯ ಹನುಮಂತಪುರ ಕೆರೆಯು ಕೋಡಿ ಹರಿದಿದ್ದು ಗ್ರಾಮದ ವಾಸಿ ದ್ವಾರಪ್ಪ (೬೦) ಕೋಡಿ ಹರಿದ ನೀರಿನ ರಭಸಕ್ಕೆ ಸುಮಾರು ೪ ಕಿ.ಮೀ ಕೊಚ್ಚಿ ಹೋಗಿದ್ದು ಅದೇ ಹಳ್ಳದಲ್ಲಿ ಆತನ ಮೃತ ದೇಹವನ್ನು ಆಗ್ನಿ ಶಾಮಕ ದಳದ ಸಿಬ್ಬಂದಿಗಳು ಪತ್ತೆ ಹಚ್ಚಿದ್ದರು.
ಶಾಸಕ ವೀರಭದ್ರಯ್ಯ ಮಾತನಾಡಿ ತಾಲ್ಲೂಕಿನಲ್ಲಿ ನೀರಿನಿಂದ ಹಾನಿಯಾಗಿರುವ ೭೨ ಪ್ರಕರಣಗಳು ದಾಖಲಾಗಿದ್ದು ಈ ಪ್ರಕರಣಗಳಿಗೆ ೧೦ ರೂ ಸಾವಿರ ಪರಿಹಾರದ ಮೊತ್ತವನ್ನು ನೇರವಾಗಿ ತಹಶೀಲ್ದಾರ್ ಮೂಲಕ ವಿತರಿಸಲಾಗುವುದು. ಸುಮಾರು ೬೫೦ ಹೆಕ್ಟೇರ್ ಖುಷ್ಕಿ ಜಮೀನುಗಳಲ್ಲಿದ್ದ ಬೆಳೆಗಳು ೩೫ ನೀರಾವರಿ ಬೆಳೆಗಳು ತೋಟಗಾರಿಕಾ ೭ ಹೆಕ್ಟೇರ್ ನಲ್ಲಿದ್ದ ಬೆಳೆಗಳು ಹಾನಿಯಾಗಿದ್ದು ತಾಲ್ಲೂಕು ಆಡಳಿತವು ಪರಿಸ್ಥಿತಿಗೆ ಅನು ಗುಣ ವಾಗಿ ಕಾರ್ಯನಿರ್ವಹಿಸುತ್ತಿದೆ. ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿದ್ದ ತಾಲ್ಲೂಕು ಈ ಬಾರಿಯ ಹೆಚ್ಚು ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿರುವುದು ಸಂತಸ ವಿಷಯವಾಗಿದೆ. ಅಲ್ಲಿಲ್ಲಿ ನಡೆದಿರುವ ಹಾನಿ ಪ್ರಕರಣಗಳಿಂದಾಗಿ ಮನಸ್ಸಿಗೆ ಬೇಸರವಾಗಿದೆ.
ಸರಕಾರದ ಹೊಸ ಆದೇಶಗಳನ್ನು ಮಾಡುತ್ತಿದೆ. ಪ್ರಕೃತಿ ವಿಕೋಪದಿಂದಾಗಿ ಹಾನಿಯಾಗೊಳಗಾಗಿರುವ ಪ್ರಕರಣಗಳಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.
ಲಕ್ಲಿಹಟ್ಟಿ ಗ್ರಾಮದ ಸಂಪರ್ಕ ಸೇತುವೆಯ ದುರಸ್ಥಿಗೆ ೩೫ ಲಕ್ಷ , ಹೊಸಪಾಳ್ಯ ೩೦ ಲಕ್ಷ ರೂ ಹಾಗೂ ಆಚೇನಹಳ್ಳಿಯ ಸೇತುವೆಗೆ ೫೦ ಲಕ್ಷ ರೂ ಬಿಡುಗಡೆ ಮಾಡಲಾಗಿದ್ದು. ಅದಷ್ಟೂ ಬೇಗಾ ಟೆಂಡರ್ ಕರೆದು ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.
ತಹಶೀಲ್ದಾರ್ ಟಿ.ಜಿ.ಸುರೇಶ್ ಆಚಾರ್, ಪಿಡಿಓ ಹೊನ್ನೇಶ್ ಪಿಎಸ್‌ಐ ತಾರಸಿಂಗ್, ಮುಖಂಡರಾದ ನರಸೇಗೌಡ, ಹನುಮಂತೇ ಗೌಡ ಹಾಗೂ ಗ್ರಾಮಸ್ಥರು ಇದ್ದರು.