ತುಮಕೂರು: ಗಣಪತಿ ಪ್ರತಿಷ್ಠಾಪನೆ ವಿಚಾರವಾಗಿ ಯುವಕನೋರ್ವನನ್ನು ಕೊಲೆ ಮಾಡಿದ್ದ ಬಿಹಾರ ಮೂಲದ ಮೂವರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಕಾನೂನು ಸಂಘರ್ಷಕ್ಕೊಳಗಾದ 13 ವರ್ಷದ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಯುವಕ ಚೋಟನ್ ಕುಮಾರ್ ಕೊಲೆಯಾದ ದುರ್ದೈವಿ. ರಾಮ್ ಬಾಬು ಕುಮಾರ್(20), ಮಂಟು ಕುಮಾರ್( 22), ಅಜಯ್ ಕುಮಾರ್ (20) ಬಂಧಿತ ಆರೋಪಿಗಳು.
ಬಿಹಾರದ ಯುವಕರು ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಜ್ಯೋತಿ ಬಯೋ ಫ್ಯೂಯಲ್ಸ್ ಹಾಗೂ ಗಾಯತ್ರಿ ಬಯೋ ಫ್ಯೂಯಲ್ಸ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ರು, ಕೆಲಸದ ವಿಚಾರದಲ್ಲಿ 15 ದಿನಗಳ ಹಿಂದೆ ಜ್ಯೋತಿ ಬಯೋ ಫ್ಯೂಯಲ್ಸ್ ನಲ್ಲಿ ಕೆಲಸ ಮಾಡುವ ಚೋಟನ್ ಕುಮಾರ್ ಹಾಗೂ ಗಾಯತ್ರಿ ಬಯೋ ಫ್ಯೂಯಲ್ಸ್ ನಲ್ಲಿ ಕೆಲಸ ಮಾಡುವ ಹುಡುಗರಿಗೂ ಗಲಾಟೆಯಾಗಿರುತ್ತದೆ.
ಸೆ.7ರಂದು ಗಾಯತ್ರಿ ಬಯೋಫ್ಯೂಯಲ್ಸ್ ನಲ್ಲಿ ಕೆಲಸ ಮಾಡುವ ಹುಡುಗರು ಗಣೇಶ ಪ್ರತಿಷ್ಠಾಪನೆ ಮಾಡಿದ್ದು, ಪೂಜೆಗೆ ಹೋದ ಸಮಯದಲ್ಲಿ ಗಲಾಟೆ ತೆಗೆದು ಸಂಜೀವ್ ಕುಮಾರ್, ರಾಂಬಾಬು, ಮೌಂಟು ಕುಮಾರ್, ಅಜಯ್ ಕುಮಾರ್ ಕೈಗಳಿಂದ ಹಾಗೂ ದೊಣ್ಣೆಯಿಂದ ಹೊಡೆದು, ತರಕಾರಿ ಕತ್ತರಿಸುವ ಚಾಕನ್ನು ತೆಗೆದುಕೊಂಡು ಬಂದು ಚೋಟನ್ ಕುಮಾರ್ ಕತ್ತಿಗೆ, ತೋಳಿಗೆ, ಬೆನ್ನಿಗೆ ಚುಚ್ಚಿ, ತೀವ್ರ ಹಲ್ಲೆ ಮಾಡಿ ಗಾಯಾಳು ಚೋಟನ್ ಕುಮಾರ್ ನನ್ನು ಶ್ರೀದೇವಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ದಾರೆ ಆದರೆ ಚಿಕಿತ್ಸೆ ಫಲಕಾರಿಯಾಗದೇ ಚೋಟನ್ ಕುಮಾರ್ ಮೃತಪಟ್ಟಿದ್ದಾನೆ.
ಈ ಬಗ್ಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ನಂ:250/2024 ಕಲಂ:103, 115(2), 118, 3(5) ಕಲಂ ಅಡಿ ಪ್ರಕರಣ ದಾಖಲಾಗಿತ್ತು.
ಸದರಿ ಪ್ರಕರಣವನ್ನು ಪತ್ತೆ ಮಾಡಲು ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿ.ಮರಿಯಪ್ಪ, ಮತ್ತು ಬಿ.ಎಸ್.ಅಬ್ದುಲ್ ಖಾದರ್ ಹಾಗೂ ತುಮಕೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಆರ್.ಚಂದ್ರ ಶೇಖರ್ ಮಾರ್ಗದರ್ಶನದಲ್ಲಿ ತುಮಕೂರು ಗ್ರಾಮಾಂತರ ಪ್ರಭಾರ ವೃತ್ತ ನಿರೀಕ್ಷಕರಾದ ಅವಿನಾಶ್.ವಿ ನೇತೃತ್ವ ದಲ್ಲಿ ಈರಣ್ಣ.ಜಿ, ಜಯಪ್ರಕಾಶ್, ಪ್ರಕಾಶ್, ರಮೇಶ್, ಚಿದಾನಂದ ಕೆ.ಎನ್, ಪರಮೇಶ್ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡವು ಆರೋಪಿಗಳನ್ನು ಶೀಘ್ರವಾಗಿ ಬಂದಿದೆ ಮುಂದಿನ ಕ್ರಮ ಕೈಗೊಂಡಿದ್ದಾರೆ.