Monday, 25th November 2024

ಪ್ರಚೋದನಕಾರಿ ಭಾಷಣಕ್ಕೆ ಅವಕಾಶ ನೀಡಿರುವುದು ಖಂಡನೀಯ: ಆತೀಕ್ ಅಹಮದ್

ತುಮಕೂರು: ಕರಾವಳಿಯಲ್ಲಿ ನಡೆದ ಯುವಕರ ಕೊಲೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಬದಲು ಸರಕಾರ ರಾಜ್ಯದಾದ್ಯಂತ ಪ್ರತಿಭಟನೆಯ ಹೆಸರಿನಲ್ಲಿ ಮುಸ್ಲಿಂ ವಿರುದ್ದ ದ್ವೇಷದ ಪ್ರಚೋದನಕಾರಿ ಭಾಷಣಕ್ಕೆ ಅವಕಾಶ ನೀಡಿರುವುದು ಖಂಡನೀಯ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಆತೀಕ್ ಅಹಮದ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಒಂದೇ ಕರಾವಳಿ ಯಲ್ಲಿ ಒಂದೇ ವಾರದಲ್ಲಿ ಮೂರು ಯುವಜನರು ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.ಅವರು ಯಾರೇ ಆಗಿರಲಿ,ಯಾವುದೇ ಕೋಮಿಗೆ ಸೇರಿದವ ರಾಗಿರಲಿ, ಅವರನ್ನು ಬಂಧಿಸಿ,ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಆಗ್ರಹವಾಗಿದೆ.
ಆದರೆ ಸರಕಾರ ಈ ನಿಟ್ಟಿ ನಲ್ಲಿ ಚಿಂತನೆ ನಡೆಸದೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ನಡೆಸುವ ಪ್ರತಿಭಟನೆಗಳಲ್ಲಿ ಮುಸ್ಲಿಂರ ವಿರುದ್ದ ಪ್ರಚೋಧನಕಾರಿ ಭಾಷಣಕ್ಕೆ ಅವಕಾಶ ಕಲ್ಪಿಸಿ, ಉರಿಯುತ್ತಿರುವ ಬೆಂಕಿಗೆ ತಪ್ಪು ಸುರಿಯುವ ಕೆಲಸಕ್ಕೆ ಅವಕಾಶ ಮಾಡಿಕೊಟ್ಟಿದೆ ಇದು ಖಂಡನೀಯ ಎಂದರು.
ಕಳೆದ ಕೆಲ ದಿನಗಳಿಂದ ಕರಾವಳಿ ಪ್ರದೇಶದಲ್ಲಿ ಒಂದಿಲ್ಲೊಂದು ವಿಚಾರದಲ್ಲಿ ಕೋಮಗಳ ನಡುವೆ ಸಂಘರ್ಷ ನಡೆಯುತ್ತಲೇ ಇದೆ.ಇದನ್ನು ತಡೆಯವ ನಿಟ್ಟಿನಲ್ಲಿ ಕರಾವಳಿ ಭಾಗದ ಎಲ್ಲಾ ಕೋಮುಗಳ ಮುಖಂಡರ ಶಾಂತಿ ಸಭೆ ನಡೆಸಿ,ಯುವಕರು ದಾರಿ ತಪ್ಪದಂತೆ,ಕೋಮು ಪ್ರಚೋಧನೆಗೆ ಒಳಗಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಾದ ಸರಕಾರ, ಅದನ್ನು ಬಿಟ್ಟು,ಒಂದಕ್ಕೆ ಹತ್ತು ತಲೆ ಈ ರೀತಿಯ ಪ್ರಚೋಧನಾ ಭಾಷಣಗಳನ್ನು ಮಾಡಿಸುವ ಮೂಲಕ ಶಾಂತಿ, ಸೌಹಾರ್ಧತೆಯನ್ನು ಮತ್ತಷ್ಟು ಹದಗೆಡಿಸುವ ಕೆಲಸ ಮಾಡುತ್ತಿದೆ.ಸರಕಾರ ಈ ಕೂಡಲೇ ಒಂದು ಕೋಮಿನ ವಿರುದ್ದ ಪ್ರಚೋಧ ನಾಕಾರಿ ಭಾಷಣ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆತೀಕ್ ಅಹಮದ್ ಆಗ್ರಹಿಸಿದರು.
ರಾಜ್ಯದಲ್ಲಿ ಇತ್ತೀಚಗೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಜನಸಾಮಾನ್ಯರು ಸಹ ಸರಕಾರದ ವಿರುದ್ದ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದರು.ಅಲ್ಲದೆ ನಿರುದ್ಯೋಗ ಸಮಸ್ಯೆಯಿಂದ ಯುವಜನತೆ ಸರಕಾರದ ವಿರುದ್ದ ಅಸಮಾಧಾನಗೊಂಡಿದ್ದರು.ಇದರತ್ತ ಗಮನಹರಿಸಬೇಕಾದ ಸರಕಾರ ಇಂತಹ ಕೋಮು ಪ್ರಚೋಧನಾ ಭಾಷಣಗಳ ಮೂಲಕ ಜನಸಾಮಾನ್ಯರ,ಯುವಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಹೊರಟಿದೆ.ದೇಶದ ಅರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡು ತಿದ್ದು, ಮತ್ತೊಂದು ಶ್ರೀಲಂಕಾ ಆಗುವ ಹಂತದಲ್ಲಿದೆ. ಈ ಬಗ್ಗೆ ಜನರ ಎಲ್ಲಿ ಸರಕಾರದ ವಿರುದ್ದ ತಿರುಗಿ ಬೀಳುತ್ತಾರೋ ಎಂಬ ಭಯದಲ್ಲಿ ಇಂತಹ ಕೃತ್ಯಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಆತೀಕ್ ಅಹಮದ್ ದೂರಿದರು.
ಪ್ರಪಂಚದಾದ್ಯಂತ ಕೋವಿಡ್ ಮಹಾಮಾರಿಯಿಂದ ಹಿಂದು, ಮುಸ್ಲಿಂ, ಕ್ರೆöÊಸ್ತ ಎನ್ನದೆ ಸಾವಿರಾರ ಹೆಣಗಳು ಬಿದ್ದಾಗ, ಇಂದು ಕೋಮ ಪ್ರಚೋಧನ ಭಾಷಣ ಮಾಡುವವರು ಎಲ್ಲಿ ಹೋಗಿದ್ದರು.ಕರಾವಳಿಯಲ್ಲಿ ಹೆಣವಾಗುತಿರುವವರು ದಲಿತರು, ಮುಸ್ಲಿಂರು, ಹಿಂದುಳಿದ ವರ್ಗದ ಯುವಕರು, ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪಿತಸ್ಥರ ವಿರುದ್ದ ಸರಕಾರ ಕಾನೂನು ಕ್ರಮ ಜರುಗಿಸಬೇಕು.
ದೇಶದ ಅಭಿವೃದ್ದಿಯಲ್ಲಿ ಯುವಜನರು ತೊಡಗಿಸಿಕೊಳ್ಳುವಂತಹ ವಾತಾವರಣವನ್ನು ಸರಕಾರಗಳು ಸೃಷ್ಟಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆತೀಕ್ ಅಹಮದ್ ಸರಕಾರವನ್ನು ಒತ್ತಾಯಿಸಿದ್ದಾರೆ.