ತುಮಕೂರು: ಗ್ರಾಮಾಂತರ ಕ್ಷೇತ್ರ ಅರಕೆರೆ ಗ್ರಾಮದ ಕೆರೆ ಕೋಡಿ ಬಿದ್ದಿದ್ದು ಶಾಸಕ ಡಿ ಸಿ ಗೌರೀಶಂಕರ್ ಸಾವಿರಾರು ಜನರ ಸಮ್ಮುಖದಲ್ಲಿ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಹೊಸ ಇತಿಹಾಸ ಸೃಷ್ಟಿಗೆ ಸಾಕ್ಷಿಯಾದರು.
ಬಹಳ ವರ್ಷಗಳ ನಂತರ ಅರಕೆರೆ ಕೆರೆ ಕೋಡಿ ಬಿದ್ದಿದ್ದು ಅಟವೀ ಸುಕ್ಷೇತ್ರಾ ಧ್ಯಕ್ಷರಾದ ಶ್ರೀ ಅಟವೀಶಿವಲಿಂಗ ಮಹಾಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಗಂಗಾಪೂಜೆ ನೆರವೇರಿಸಿದರು,ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 3000 ಕ್ಕೂ ಅಧಿಕ ಹೆಣ್ಣು ಮಕ್ಕಳಿಗೆ ಸೀರೆ, ಕುಂಕುಮ,ಬಾಗಿನ ಅರ್ಪಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಶಾಸಕ ಡಿ ಸಿ ಗೌರೀಶಂಕರ್ ಮಾತನಾಡಿ ಅರಕೆರೆ ಭಾಗದ ಕುಚ್ಚಂಗಿ,ಅರಕರೆ ಹಾಗೂ ಊರುಕೆರೆ ಭಾಗದ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಿಂದ 13 ಎಂಸಿಎಫ್ಟಿ ನೀರು ಹರಿಸಲು ಅನುಮೋಧನೆ ಒರೆತಿದೆ,ಮನೆಮನೆಗೂ ನಲ್ಲಿ ಸಂಪರ್ಕ ಕಲ್ಪಿಸುವ ಯೋಜನೆಗೆ ಅರಕೆರೆ ಗ್ರಾಮಕ್ಕೆ 52 ಲಕ್ಷ ಹಾಗೂ ಅಮಲಾಪುರ ಗ್ರಾಮಕ್ಕೆ 23 ಲಕ್ಷ ಮಂಜೂರಾಗಿದ್ದು ಈ ತಿಂಗಳ ಅಂತ್ಯದೊಳಗೆ ಕಾಮಗಾರಿಗೆ ಶಂಕುಸ್ತಾಪನೆ ನೆರವೇರಿಸುವುದಾಗಿ ಹೇಳಿದರು.
ಅರಕೆರೆ ಗ್ರಾಮಪಂಚಾಯ್ತಿ ವ್ಯಾಪ್ತಿ ಅರಕೆರೆ ಪಾಳ್ಯ 11ಲಕ್ಷ ಲಕ್ಷ,ಗೊಲ್ಲರಹಟ್ಟಿಗೆ 4ಲಕ್ಷ ಲಕ್ಷ,ಹೊಸಹಳ್ಳಿಗೆ 52ಲಕ್ಷ ಲಕ್ಷ,ಕುಚ್ಚಂಗಿಗೆ 11ಲಕ್ಷ ಲಕ್ಷ,ಕುಚ್ಚಂಗಿ ಜೆಎಫ್ಸಿ ಗೆ 11 ಲಕ್ಷ,ಕುಚ್ಚಂಗಿ ಪಾಳ್ಯಕ್ಕೆ 7 ಲಕ್ಷ,ಮಲ್ಲೇನಹಳ್ಳಿಗೆ 31 ಲಕ್ಷ,ಸೀಗೆಪಾಳ್ಯಕ್ಕೆ 3 ಲಕ್ಷ,ಆಶ್ರಯ ಕಾಲೋನಿಗೆ 14 ಲಕ್ಷ,ರಂಗಾಪುರಕ್ಕೆ 4 ಲಕ್ಷ,ತಿಮ್ಲಾಪುರಕ್ಕೆ 10 ಲಕ್ಷ,ಅರಸಾಪುರ 4 ಲಕ್ಷ,ತಿಪ್ಪನಹಳ್ಳಿಗೆ 4 ಲಕ್ಷ ಒಟ್ಟು ಮೂರು ಕೋಟಿ ವೆಚ್ಚ ದಲ್ಲಿ ಈ ಎಲ್ಲಾ ಗ್ರಾಮಗಳಿಗೂ ಮನೆಮನೆ ನಲ್ಲಿ ಸಂಪರ್ಕ ಕಲ್ಪಿಸುವುದಾಗಿ ಹೇಳಿದರು.
ಅಮೃತ್ ಯೊಜನೆಗೆ ಅರಕೆರೆ ಪಂಚಾಯ್ತಿ ಆಯ್ಕೆಯಾಗಿದ್ದು ಈ ಯೋಜನೆಯಡಿ ಈ ಪಂಚಾಯ್ತಿ ವ್ಯಾಪ್ತಿಗೊಳಪಡುವ ಗ್ರಾಮಗಳಲ್ಲಿ ಅಭಿವೃದ್ದಿ ಕಾಮಗಾರಿಗಳು ಚಾಲ್ತಿಯಲ್ಲಿವೆ,ಇನ್ನು 9 ತಿಂಗಳೊಳಗೆ ಅರಕೆರೆ ಗ್ರಾಮಪಂಚಾಯ್ತಿಯನ್ನು ಮಾದರಿ ಗ್ರಾಮಪಂಚಾಯ್ತಿಯಾಗಿ ರೂಪಿಸುವುದಾಗಿ ಭರವಸೆ ನೀಡಿದರು.
ಎರಡು ಭಾರಿ ಕರೋನ ಬಂದಾಗಲೂ 1.5 ಲಕ್ಷ ಆಹಾರದ ಕಿಟ್ ಮನೆಮನೆಗೂ ತಲುಪಿಸಿ ಬಡವರ ಹಸಿವು ನೀಗಿಸುವ ಕೆಲಸ ಮಾಡಿದ್ದೇನೆ ,ಅದೇ ರೀತಿ ನಾನು ನ್ನ ಕಾರ್ಯಕರ್ತರು 1 ಕೋಟಿ ವೆಚ್ಚಮಾಡಿ ಕೋಡಿ ಮುದ್ದನಹಳ್ಳಿಯಲ್ಲಿ ಆಸ್ಪತ್ರೆ ತೆರೆದು ಬಡವರ ಜೀವ ಉಳಿಸಿದ್ದೇವೆ,ಕರೋನ ಬಂದಾಗ ಜೀವಕ್ಕೆ ಹೆದರಿ ಕ್ಷೇತ್ರ ಬಿಟ್ಟು ಹೋಗಲಿಲ್ಲ,ಜನರ ಜೀವ ಉಳಿಸಲು ನನ್ನ ಜೀವನ ಮುಡಿ ಪಾಗಿಟ್ಟು ಜನಸೇವೆ ಮಾಡಿರುವುದಾಗಿ ಹೇಳಿದರು.
ಗ್ರಾಮಾಂತರ ಕ್ಷೇತ್ರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 550 ಕ್ಕೂ ಹೆಚ್ಚು ಮಕ್ಕಳಿಗೆ ಮುಂದಿನ ಶಿಕ್ಷಣಕ್ಕಾಗಿ ಜಾತ್ಯಾತೀತ ವಾಗಿ, ಪಕ್ಷಾತೀತವಾಗಿ 10000 ಸಹಾಯಧನ ನೀಡಲಾಗುತ್ತಿದೆ, ಈಗಾಗಲೇ 600 ಮಕ್ಕಳಿಗೆ ಸಹಾಯಧನ ನೀಡಲಾಗಿದೆ, 550 ಅಂಕ ಪಡೆದಿರುವ ಮಕ್ಕಳು ತಮ್ಮ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ ನೊಂದಿಗೆ ಮಂಗಳವಾರ ಹಾಗೂಶನಿವಾರ ನಡೆಯುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಗ್ರಾಮಾಂತರ ಕ್ಷೇತ್ರದಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಸರ್ಕಾರದಿಂದ ಬರುವ ಪರಿಹಾರದ ಜೊತೆಗೆ ವೈಯಕ್ತಿಕ ವಾಗಿ 10000 ಧನ ಸಹಾಯ ಮಾಡಲು ತೀರ್ಮಾನಿಸಲಾಗಿದೆ, ಮಳೆಯಿಂದ ಹಾನಿಗೊಳಗಾದ ಮನೆಗಳ ಪಟ್ಟಿಮಾಡಿ ನೀಡು ವಂತೆ ಅಧಿಕಾರಿಗಳಿಗೆ ಸೂಚಿಸಿ ರುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕರ ಹಲವು ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನೂರಾರು ಬಿಜೆಪಿ ಮುಖಂಡರುಗಳು ಶಾಸಕರ ಸಮ್ಮುಖದಲ್ಲಿ j. D. S. ಪಕ್ಷಕ್ಕೆ ಸೇರ್ಪಡೆಗೊಂಡರು. ಇದೇ ವೇಳೆ ಅರಕೆರೆ ಗ್ರಾಮಸ್ತರು ಶಾಸಕರಿಗೆ ಅದ್ದೂರಿ ಸನ್ಮಾನ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬೆಳಗುಂಬ ಜಿಲ್ಲಾ ಪಂಚಾಯ್ತಿ ಉಸ್ತುವಾರಿ ತಾಲ್ಲೂಕು ಯುವ ಜಾತ್ಯತೀತ ಜನತಾದಳ ಕಾರ್ಯಾದಕ್ಷರು ನರಸಾಪುರ ಹರೀಶ್, ಜೆಡಿಎಸ್ ,ಗ್ರಾಮಪಂಚಾಯ್ತಿ ಸದಸ್ಯ ಚೇತನ್, ಜೆಡಿಎಸ್ ಮುಖಂಡರಾದ, ಯಲ್ಲಾಪುರ ವೆಂಕಟೇಶ್, ರವಿಕೀರ್ತಿ, ಅರಕೆರೆ ಕಾಂತರಾಜು, ಅರಕೆರೆ ಸುಭಾಷ್, ವಕೀಲ ಧನಂಜಯ್ , ಉಮೇಶ್ ,ಅರಕೆರೆ ಸುನಿಲ್, ಹಿರೇಹಳ್ಳಿ ಮಹೇಶ್, ಹಾಲನೂರು ಅನಂತ್ ಕುಮಾರ್, ಸುವರ್ಣಗಿರಿ ಕುಮಾರ್, ಮಹಾನಗರ ಪಾಲಿಕೆ ಸದಸ್ಯ ಮಂಜುನಾಥ್, ಹೆತ್ತೇನಹಳ್ಳಿ ಮಂಜುನಾಥ್,ಮೆಹಬೂಬ್ ಪಾಷಾ, ಕಾರ್ ರಫಿ, ಶಾನ್, ಮುಸ್ತಾಕ್, ಲೋಕೇಶ್, ನಂದೀಶ್,ಯಜಮಾನ ಮೂರ್ತಿ, ದಯಾನಂದ್ ,ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ, ನಂಜಪ್ಪ,ಕರೇರಂಗಪ್ಪ,ಪುಷ್ಪಲತ,ಹಾಗೂ ಅಪಾರ ಜೆಡಿಎಸ್ ಕಾರ್ಯಕರ್ತರು ಹಾಜ ರಿದ್ದರು.