Saturday, 14th December 2024

ಬೆಂಗಳೂರು ಕರಗಕ್ಕೆ ನಾಳೆಯಿಂದ ಚಾಲನೆ

ಬೆಂಗಳೂರು: ನಾಳೆಯಿಂದ ಆರಂಭವಾಗುವ ಕರಗ ಉತ್ಸವದ ಆಚರಣೆಯನ್ನು ಈ ಬಾರಿ ವಿಜೃಂಬಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. ಏ. 23 ರವರೆಗೆ ಬೆಂಗಳೂರು ಕರಗ ನಡೆಯಲ್ಲಿದ್ದು, ಈ ಬಾರಿ ದ್ರೌಪದಿ ದೇವಿಯ ಕರಗ ಮಹೋ ತ್ಸವಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದೆ.

ಏ.23 ರ ಚೈತ್ರ ಮಾಸದ ಪೂರ್ಣಿಮೆಯಾಂದು ದ್ರೌಪದಿ ದೇವಿಯ ಹೂವಿನ ಕರಗ ಜರುಗಲಿದೆ ಎಂದು ಕರಗ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ತಿಳಿಸಿದ್ದಾರೆ.

ಇನ್ನೂ ಬಿಬಿಎಂಪಿ ಹಾಗೂ ಸರ್ಕಾರದಿಂದ ಕರಗ ಉತ್ಸವಕ್ಕೆ ಎಲ್ಲಾ ರೀತಿಯ ಸೌಲಭ್ಯ ನೀಡಲಾಗ್ತಿದೆ, ಕರಗ ವ್ಯವಸ್ಥಾಪನ ಸಮಿತಿಯಿಂದ ಪ್ರತಿಬಾರಿಯಂತೆ ಈ ಬಾರಿಯು ಪಕ್ಷಾತೀತವಾಗಿ ಉತ್ಸವ ನಡೆಯಲಿದೆ.

ಮಸ್ತಾನ್ ಸಾಭ್ ದರ್ಗಕ್ಕೆ ಕರಗ ಹೋಗೆ ಹೋಗುತ್ತೆ, ಮೊದಲಿನಿಂದಲು ಇರುವ ಸಂಪ್ರದಾಯದಂತೆ ಕರಗ ನಡೆಯಲಿದೆ ಯಾವುದೇ ಸಂಪ್ರದಾಯಗಳನ್ನು ಕಡಿತಗೊಳಿಸಲಾಗುವುದಿಲ್ಲ ಶಾಂತಿ ಸೌಹಾರ್ದದಿಂದ ಕರಗ ಉತ್ಸವ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಈ ಬಾರಿ ವೀರಕುಮಾರರಿಗೆ ಕೆಂಪು ವಸ್ತ್ರ. ಹಾಗೂ ಮೈಸೂರು ಪೇಟ ಹಾಗೂ ದೀಕ್ಷೆ ಪಡೆಯುವರಿಗೆ ಖಡ್ಗ ನೀಡಲು ಮುಂದಾಗಿದ್ದಿವಿ ಎಂದು ಸತೀಶ್ ಹೇಳಿದರು.

ಸುಮಾರು 800 ವರ್ಷಗಳ ಇತಿಹಾಸ ಇರೋ ಕರಗ ಉತ್ಸವ ನಾಡಪ್ರಭು ಕೆಂಪೇಗೌರ ಕಾಲದಿಂದಲು ಅಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿ ಜ್ಞಾನೇಂದ್ರರವರು 13 ನೇ ಬಾರಿ ಕರಗ ಹೊರುವರು, ರಾಜ್ಯ ಸೇರಿದಂತೆ ವಿದೇಶದಿಂದಲು ಈ ಉತ್ಸವ ನೋಡಲು ಲಕ್ಷಾಂತರ ಭಕ್ತಾಧಿಗಳು ಬರಲಿದ್ದಾರೆ.