ಗಾಂಧಿ ಜಯಂತಿ -ವಿಶೇಷ ವರದಿ
ಜಿಲ್ಲೆಗೆ ೪ ಬಾರಿ ಆಗಮನ
ಸರಕಾರಿ ಪ್ರೌಢಶಾಲೆಯಲ್ಲಿ ತಂಗಿದ್ದ ಗಾಂಧಿ
ರಂಗನಾಥ ಕೆ.ಮರಡಿ
ತುಮಕೂರು: ಅಸ್ಪೃಶ್ಯತಾ ನಿವಾರಣಾ ಚಳವಳಿಯ ಸಂದರ್ಭದಲ್ಲಿ ತುಮಕೂರಿಗೆ ಆಗಮಿಸಿದ್ದ ಗಾಂಧೀಜಿಯವರು ನಗರದ ಹಿಪ್ಪೆತೋಪು(ಕೋತಿತೋಪು)ನಲ್ಲಿ ಜನರು ಬಳಸುತ್ತಿದ್ದ ಬಯಲು ಶೌಚಾಲಯವನ್ನು ಸ್ವಚ್ಛ ಮಾಡುವ ಮೂಲಕ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದ್ದರು.
ಸ್ವಚ್ಛತಾ ಕಾರ್ಯ ಪೂರ್ಣಗೊಂಡ ನಂತರ ಜನರು ಭಾರತ್ ಮಾತಾ ಕಿ ಜೈ ಎಂದಾಗ ಎಲ್ಲರೂ ಜೈಕಾರ ಹಾಕಿದರು. ಅದೇ ರೀತಿ ಗಾಂಧೀಜಿ ಕೀ ಜೈ ಎಂಬ ಘೋಷಣೆ ಕೂಗುತ್ತಾ ಜನರ ನಡುವಿನಿಂದ ಕೈ ಮುಗಿಯುತ್ತಾ ಹೊರಬಂದರು. ಹೊರ ಬಂದರು. ಗಾಂಧೀಜಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ ಎಂಬುದು ಜನರಿಗೆ ಗೊತ್ತಿರಲಿಲ್ಲ. ಆಗ ಈ ಕಾರ್ಯದಲ್ಲಿ ಗಾಂಧೀಜಿ ಭಾಗವಹಿಸಿದ್ದಾರೆ ಎಂದು ಜನರಿಗೆ ತಿಳಿದು ಅಚ್ಚರಿ ವ್ಯಕ್ತಪಡಿಸಿದರು. ಗಾಂಧೀಜಿಯನ್ನು ನೋಡಲು ಜಿಲ್ಲೆಯ ವಿವಿಧ ಭಾಗದಿಂದ ಸಾಕಷ್ಟು ಜನ ಸೇರಿದ್ದರು.
ಜಿಲ್ಲೆಗೆ 4 ಬಾರಿ ಆಗಮನ
ತುಮಕೂರು ಜಿಲ್ಲೆಗೆ ನಾಲ್ಕು ಬಾರಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯಯ ಚಳವಳಿ ಸಂದರ್ಭದಲ್ಲಿ ಭೇಟಿ ನೀಡಿದ್ದರು. ಗಾಂಧೀಜಿಯವರ ಪ್ರವಾಸದ ಹೊಣೆಯನ್ನು ಮೈಸೂರು ಸಂಸ್ಥಾನದ ಕಾರ್ಯದರ್ಶಿ ಲಕ್ಷ್ಮಿನರಸು ಹೊತ್ತಿದ್ದರು. ತುಮಕೂರಿಗೆ 1927ರ ಜುಲೈ 14ರಂದು ಗಾಂಧೀಜಿಯವರು, ಕಸ್ತೂರಬಾ ಗಾಂಧಿ, ಗಂಗಾಧರ ರಾಯ್, ಗಾಂಧೀಜಿ ಆಪ್ತ ಕಾರ್ಯದರ್ಶಿ ಮಹದೇವ್ ದೇಸಾಯಿ, ಮಣಿ ಬೆಹನ್ ಪಟೇಲ್, ದೇವದಾಸ್, ಮೃದುಲಸಾರ ಬಾಯಿ ಸೇರಿದಂತೆ 16 ಜನ ತಂಡದೊAದಿಗೆ ಭೇಟಿ ನೀಡಿದ್ದರು. ತುಮಕೂರಿನಲ್ಲಿ ಸ್ಥಳೀಯ ಸ್ವಾಗತ ಸಮಿತಿಯ ಮುಖಂಡ ಕೆ.ಆರ್.ಅಯ್ಯಂಗಾರ್, ಜಿಲ್ಲಾಧಿಕಾರಿಗಳು ಊರ ಹೊರಗೆ ಗಾಂಧೀಜಿಯವರನ್ನು ಸ್ವಾಗತಿಸಿದರು.
ಸರಕಾರಿ ಪ್ರೌಢಶಾಲೆಯಲ್ಲಿ ತಂಗಿದ್ದ ಗಾಂಧಿ
ಹರಿಜನ ಉದ್ಧಾರಕ್ಕಾಗಿ ಮತ್ತು ಅಸ್ಪೃಶ್ಯತಾ ನಿವಾರಣಾ ಚಳವಳಿಯಲ್ಲಿ ಭಾಗವಹಿಸಲು 1934ರ ಜನವರಿ 4ರಂದು ಗಾಂಧೀಜಿ ನಗರಕ್ಕೆ ಆಗಮಿಸಿ, ಸರಕಾರಿ ಹೈಸ್ಕೂಲ್ ಮೈದಾನ ದಲ್ಲಿರುವ ಚಿಕ್ಕ ಕೊಠಡಿಯಲ್ಲಿ ತಂಗಿದ್ದರು. ಗಾಂಧೀಜಿಯವರು ತುಮಕೂರಿಗೆ ಭೇಟಿ ನೀಡಿದ್ದನ್ನು ಅವರ ಆಪ್ತ ಕಾರ್ಯದರ್ಶಿ ಮಹದೇವ್ ದೇಸಾಯಿ, ಯಂಗ್ ಇಂಡಿಯಾ ಮತ್ತು ಹರಿಜನ ಪತ್ರಿಕೆಗಳಲ್ಲಿ ದಾಖಲಿಸಿದ್ದಾರೆ. ಇದೇ ವೇಳೆ ಮಧುಗಿರಿ ಹಾಗೂ ಕೊರಟ ಗೆರೆಗೂ ಭೇಟಿ ನೀಡಿದ್ದರು. ಈ ಕಟ್ಟಡವನ್ನು ಮಹಾತ್ಮ ಗಾಂಧಿ ಸ್ಮಾರಕ ಭವನವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ನಗರದ ಬಾಪೂಜಿ ವಿದ್ಯಾಕೇಂದ್ರದಲ್ಲಿ ಗಾಂಧೀಜಿಯವರ ಜೀವನ ಚರಿತ್ರೆ ಸಾರುವ ಸಂದೇಶಗಳನ್ನು ಕಾಪಾಡಲಾಗುತ್ತಿದೆ.
ಗೋ ಸಂರಕ್ಷಣೆಗೆ ನಿಧಿ ಸಂಗ್ರಹ
ಗಾAಧೀಜಿ ಬೆಂಗಳೂರಿನಿAದ ತುಮಕೂರಿಗೆ ಬರುವ ಮಾರ್ಗ ಮಧ್ಯ ದಾರಿಯುದ್ದಕ್ಕೂ ಸಾವಿರಾರು ಜನ ಹಾರ, ತುರಾಯಿಗಳೊಂದಿಗೆ ಸ್ವಾಗತಿಸಿದ್ದರು. ನಗರದಲ್ಲಿ ಮೂರು ಸಭೆಗಳಲ್ಲಿ ಭಾಗವಹಿಸಿದ್ದರು. ಈ ವೇಳೆ ಪುರಸಭೆ ಪ್ರತಿನಿಧಿಗಳು ಊರಿನ ಮಕ್ಕಳಿಗೆ ಶುದ್ಧ ನೀರು, ಅಗ್ಗದ ಬೆಲೆಯಲ್ಲಿ ಹಾಲನ್ನು ಸರಬರಾಜು ಮಾಡುವಂತೆ ಭರವಸೆ ಕೊಡಲು ಗಾಂಧೀಜಿ ಹೇಳಿದ್ದರು. ತುಮಕೂರಿನ ನಾಗರಿಕರು 2,250 ರು, ವಿದ್ಯಾರ್ಥಿಗಳು ಮತ್ತು ಉಪಾಧ್ಯಾಯರು 250 ರೂ.ಗಳನ್ನು ಗೋ ಸಂರಕ್ಷಣೆಗಾಗಿ, 200 ರು .ಗಳ ನಿಧಿಯನ್ನು ಗಾಂಧೀಜಿಗೆ ನೀಡಿದ್ದರು. ನಗರದ ಔದ್ಯೋಗಿಕ ವಸತಿ ಶಿಕ್ಷಣ ಶಾಲೆಗೆ ಭೇಟಿ ನೀಡಿದ್ದ ಗಾಂಧೀಜಿ, ಅಲ್ಲಿನ ಸ್ವಚ್ಛತೆ ಬಗ್ಗೆ ಕೊಂಡಾಡಿದ್ದರು. ಅಲ್ಲಿ ವಿದ್ಯಾರ್ಥಿಗಳಿಗೆ ಮಾಡಿದ್ದ ರಾಗಿ ರೊಟ್ಟಿ ಸೇವಿಸಿದ್ದರು.