Tuesday, 26th November 2024

BasavanaGowda Patil Yatnal: ಪತ್ರಿಕಾ ಮಾಧ್ಯಮಗಳಿಗೆ ಮಾನ ಮರ್ಯಾದೆ ಇಲ್ಲ

ಪತ್ರಿಕಾ ಮಾಧ್ಯಮಗಳು ಮಧ್ಯಸ್ಥಿಕೆ ವಹಿಸಿದರೆ ಕಮಿಷನ್ ಪತ್ರಿಕಾ ಮಾಧ್ಯಮಗಳನ್ನು ಖರೀದಿಗೆ ಮುಂದಾದ ಯತ್ನಾಳ್

ಚಿಂಚೋಳಿ : ಸಿದ್ದಸಿರಿ ಕಾರ್ಖಾನೆ ಪುನಃ ಪ್ರಾರಂಭಕ್ಕಾಗಿ ಪತ್ರಿಕಾ ಮಾಧ್ಯಮಗಳು ಮಧ್ಯಸ್ಥಿಕೆ ವಹಿಸಿದರೆ ಅದಕ್ಕೆ ಒಳ್ಳೆಯ ಕಮಿಷನ್ ನೀಡುತ್ತೇನೆಂದು ಮಾಧ್ಯಮಗಳಿಗೆ ಖರೀದಿಸಲು ಬೇಡಿಕೆ ಇಟ್ಟ ಕಾರ್ಖಾನೆ ಮಾಲೀಕ ಬಿಜಾಪೂರ ನಗರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ(Bijapur MLA BasavanaGowda Patil Yatnal).

ಅವರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಿದ್ದಸಿರಿ ಕಾರ್ಖಾನೆ ಬಂದ್ ಆಗಿದ್ದ ಹಿನ್ನಲೆ ರೈತರು ಧರಣಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ, ಮಾತನಾಡಿದರು.

ಪತ್ರಿಕಾ ಮಾಧ್ಯಮಗಳು ಖರ್ಗೆ ಮತ್ತು ಖಂಡ್ರೆ ಅವರ ಮಧ್ಯಸ್ಥಿಕೆ ವಹಿಸಿ, ಸುಪ್ರೀಂ ಕೋರ್ಟ್ ಗೆ ಹಾಕಿದ್ದ ಆಪಿಲ್ ನ್ನು ಹಿಂದಕ್ಕೆ ಪಡೆಯುವಂತೆ ಮಾಡಬೇಕು. ಮಾಡಿದ್ದ ಕೆಲಸಕ್ಕೆ ನಿಮಗೆ ತಕ್ಕ ಕಮಿಷನ್ ಕೊಡಲಾಗುತ್ತದೆ ಎಂದು ಮಧ್ಯಾಮಗಳನ್ನು ಖರೀದಿಸುವ ದರ್ಪ ಮರೆದ ಬಿಜೆಪಿ ಶಾಸಕ ಯತ್ನಾಳ್. ಪತ್ರಿಕಾ ಮಾಧ್ಯಮದವರು ಯಾರು ಏನನ್ನು ಹೇಳುತ್ತಾರೆ ಅದನ್ನು ಪತ್ರಿಕಾ ರಂಗ ಪ್ರಕಟಿಸುವುದು, ಪತ್ರಿಕಾ ರಂಗದ ಧರ್ಮ ಮತ್ತು ಕರ್ತವ್ಯವಾಗಿದೆ.

ಪತ್ರಿಕಾ ಮಾಧ್ಯದವರು ಕಮಿಷನ್ ಕೊಟ್ಟರೆ ಸುಳ್ಳು ಸುದ್ದಿ ಪ್ರಕಟಿಸಿ, ಆಗಲಾರದ ಕೆಲಸಗಳನ್ನು ಮಾಧ್ಯಮದವರು ಮಾಡುತ್ತೀರಾ, ನಿಮಗೆ ಮಾನ ಮರಿಯಾದೆ ಏನು ಇಲ್ಲ. ಹೀಗಾಗಿ ಕಾರ್ಖಾನೆ ಪ್ರಾರಂಭಕ್ಕೆ ಮಧ್ಯಸ್ಥಿಕೆ ವಹಿಸಿ ಎಂದು ಬಹಿರಂಗವಾಗಿ ರೈತರ ಮತ್ತು ಸಾರ್ವಜನಿಕರ ಮಧ್ಯೆ ಹೇಳಿ, ಇತಿಹಾಸ ಉಳ್ಳ ಪತ್ರಿರಾ ರಂಗಕ್ಕೆ ಅಪ್ಪಮಾನಿಸಿ, ಅವಮಾನಿಸಿ, ಯತ್ನಾಳ್ ಅವರು ಮಾಧ್ಯಮವರ ಮೇಲೆ ದುಡ್ಡಿನ ದರ್ಪ ಮರೆದಿದ್ದು ಜರುಗಿತು.

ಈ ಸಂಧರ್ಭದಲ್ಲಿ ಮಾಜಿ ಸಚಿವ ರಮೇಶ ಜಾರಕಿ ಹೊಳ್ಳಿ,ಅರವಿಂದ ನಿಂಬಾವಳಿ, ಕುಮಾರ ಬಂಗಾರಪ್ಪ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್, ಶಿವಶರಣಪ್ಪ ಜಾಪಟ್ಟಿ, ನಂದಿಕುಮಾರ ಪಾಟೀಲ್, ಗೌರಿಶಂಕರ ಉಪ್ಪಿನ್, ವೀರಣ್ಣ ಗಂಗಾಣಿ ಸೇರಿ ಮುಂತಾದವರು ಇದ್ದರು.

ಇದನ್ನೂ ಓದಿ: #Basanagowdapatilyatnal